ಇಸ್ಲಾಮಾಬಾದ್‌:ಭಾರತ-ಪಾಕಿಸ್ತಾನದ ನಡುವಿನ ಭಿನ್ನಮತಗಳನ್ನು ಬಗೆಹರಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ವಿಚಿತ್ರ ಮನವಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ. ಅದೇನೆಂದರೆ ಟಿವಿ ಚರ್ಚೆ ನಡೆಸಲು ಬಯಸುವುದಾಗಿ ಅವರು ಹೇಳಿದ್ದಾರೆ.
ರಷ್ಯಾಗೆ ಭೇಟಿ ನೀಡಿರುವ ಇಮ್ರಾನ್​ಖಾನ್​ ಸರ್ಕಾರಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದು, ಇದೀಗ ವೈರಲ್​ ಆಗಿದೆ. ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಂಡರೆ ಅದು ನಮಗೇ ಒಳ್ಳೆಯದು. ಹೀಗಾಗಿ ನಾನು ಮೋದಿ ಅವರ ಜೊತೆ ಟಿ.ವಿ ಸಂವಾದ ನಡೆಸಲು ಇಚ್ಚಿಸುತ್ತೇನೆ ಎಂದರು.
ಭಾರತದ ಮೇಲೆ ಅಘೋಷಿತ ಯುದ್ಧ ನಡೆಸುವ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸುವವರೆಗೂ ಆ ದೇಶದ ಜೊತೆಗೆ ದ್ವಿಪಕ್ಷೀಯ ಮಾತುಕತೆಯಾಗಲೀ ವ್ಯವಹಾರವಾಗಲೀ ಇಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟನಿಲುವು ತಾಳಿದೆ. ಆದರೆ, ಭಾರತ ಮಾತುಕತೆಗೆ ಬರಬೇಕು ಎಂದು ಪಾಕಿಸ್ತಾನ ಬೇರೆ ಬೇರೆ ರೀತಿಯಲ್ಲಿ ಆಹ್ವಾನಿಸುತ್ತಲೇ ಇದೆ. ಈಗ ಇಮ್ರಾನ್‌ ಖಾನ್‌ ನೇರವಾಗಿ ಪ್ರಧಾನಿಯನ್ನೇ ಟೀವಿ ಡಿಬೇಟ್‌ಗೆ ಆಹ್ವಾನಿಸಿರುವುದು ಕುತೂಹಲ ಮೂಡಿಸಿದೆ.
ತಾವು ಅಧಿಕಾರಕ್ಕೆ ಬಂದ ಬಳಿಕ ಭಾರತದ ಜೊತೆ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಲು ಮನವಿ ಮಾಡಿದ್ದೆ. ಆದರೆ, ಭಾರತ ಸರ್ಕಾರ ಈ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಲಿಲ್ಲ ಎಂದೂ ಅವರು ಆರೋಪಿಸಿದರು.
ರಷ್ಯಾ- ಉಕ್ರೇನ್​ ಮಧ್ಯೆ ನಡೆಯುತ್ತಿರುವ ಸಂಘರ್ಷಕ್ಕೆ ಮಾತುಕತೆಯೊಂದೇ ದಾರಿ. ಸೇನಾ ಸಂಘರ್ಷದ ಮೂಲಕ ಎಂದಿಗೂ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ಮಿಲಿಟರಿ ಸಂಘರ್ಷಗಳಲ್ಲಿ ನಂಬಿಕೆಯಿಲ್ಲ. ರಾಜತಾಂತ್ರಿಕ ಮಾತುಕತೆ ಮೂಲಕ ರಾಷ್ಟ್ರಗಳ ಮಧ್ಯೆ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಸಂಘರ್ಷಗಳನ್ನು ನಂಬಿದ ರಾಷ್ಟ್ರಗಳು ಇತಿಹಾಸವನ್ನು ಅರಿತಿಲ್ಲ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಪಾಕಿಸ್ತಾನದ ಈ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
VIDEO: ಸಮಸ್ತ ಕನ್ನಡಿಗರಿಗೆ ನಮಸ್ಕಾರ… ಇವತ್ತಿನಿಂದ ನಾನು ರಾಧಿಕಾ ಕುಮಾರಸ್ವಾಮಿ ಎನ್ನುವ ಹೊಸ….

ಬಸ್​ಗೆ ಪ್ರಯಾಣಿಕರನ್ನು ಹತ್ತಿಸಿ ರೈಟ್​ ರೈಟ್​… ಹೇಳುತ್ತಲೇ ಕೊನೆಯುಸಿರೆಳೆದ ತುಮಕೂರಿನ ಕಂಡಕ್ಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
