ಇಸ್ಲಾಮಾಬಾದ್:ಅಂತಾರಾಷ್ಟ್ರೀಯ ಭಯೋತ್ಪಾದಕ ಹಣಕಾಸು ವಾಚ್‌ಡಾಗ್‌ ‘ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್‌’ (ಎಫ್ಎಟಿಎಫ್) ಎದುರು ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನವು, ಭಯೋತ್ಪಾದನೆಯನ್ನು ಮಟ್ಟ ಹಾಕಲು ಇದಾಗಲೇ ಈ ದೇಶವನ್ನು ಗ್ರೇ ಪಟ್ಟಿಗೆ ಸೇರಿಸಿ ಎರಡು ವರ್ಷಗಳಾಗಿವೆ.
ಆದರೆ ಭಯೋತ್ಪಾದನಾ ಚಟುವಟಿಕೆ ಇನ್ನೂ ಮುಂದುವರೆಸಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವನ್ನು ಆರ್ಥಿಕ ಕಪ್ಪು ಪಟ್ಟಿಗೆ ಸೇರಿಸಲು ಚಿಂತನೆ ನಡೆಸಿರುವ ಬೆನ್ನಲ್ಲೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗೋಳೋ ಎನ್ನುತ್ತಿದ್ದಾರೆ.
ಪಾಕಿಸ್ತಾನದ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿರುವ ಇಮ್ರಾನ್‌ ಖಾನ್‌, ’ಒಂದು ವೇಳೆ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಿಬಿಟ್ಟರೆ, ಯಾವುದೇ ದೇಶ ನಮ್ಮ ಜತೆ ಹಣಕಾಸು ವ್ಯವಹಾರ ಇಟ್ಟುಕೊಳ್ಳುವುದಿಲ್ಲ. (ಇದಾಗಲೇ ಉತ್ತರ ಕೊರಿಯಾ ಮತ್ತು ಇರಾನ್‌ ದೇಶಗಳು ಆರ್ಥಿಕ ಕಪ್ಪು ಪಟ್ಟಿಯಲ್ಲಿವೆ). ಹೀಗೆ ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ಕೇಳುವವರೇ ಇರುವುದಿಲ್ಲ. ಯಾವುದೇ ಹಣಕಾಸು ಸಂಸ್ಥೆಗಳು ನಮ್ಮೊಂದಿಗೆ ವ್ಯವಹರಿಸುವುದಿಲ್ಲ. ಇದು ಅತ್ಯಂತ ಕಠಿಣವಾಗಿರುವ ಪರಿಸ್ಥಿತಿ’ ಎಂದಿದ್ದಾರೆ.
ಇದನ್ನೂ ಓದಿ:ಅಣ್ಣಾಮಲೈ ಬಿಜೆಪಿ ಸೇರುತ್ತಿದ್ದಂತೆಯೇ ದಾಖಲಾಯ್ತು ಕೇಸ್‌!
ಒಂದು ವೇಳೆ ನಾವು ಕಪ್ಪುಪಟ್ಟಿಗೆ ಸೇರಲ್ಪಟ್ಟರೆ, ಪಾಕಿಸ್ತಾನದ ರೂಪಾಯಿ ಮೌಲ್ಯ ಪಾತಾಳಕ್ಕೆ ಇಳಿಯುತ್ತದೆ. ಹೀಗಾದರೆ ಅದರ ಪ್ರಮಾಣ ಎಷ್ಟು ಕೆಳಕ್ಕೆ ಹೋಗುತ್ತದೆ ಎನ್ನುವುದನ್ನು ಊಹಿಸುವುದೂ ಕಷ್ಟವಾಗುತ್ತದೆ. ಪರಿಸ್ಥಿತಿ ಮಿತಿ ಮೀರಿದರೆ, ವಿದ್ಯುತ್, ಅನಿಲ, ತೈಲ ಸೇರಿದಂತೆ ಎಲ್ಲದರ ದರವೂ ಹೆಚ್ಚಾಗಿ ನಮ್ಮ ಇಡೀ ಆರ್ಥಿಕತೆಯೇ ನಾಶವಾಗುತ್ತದೆ ಎಂದು ಇಮ್ರಾನ್‌ ಖಾನ್‌ ಗೋಳು ತೋಡಿಕೊಂಡಿದ್ದಾರೆ.
ಭಾರತವು ತನ್ನ ದೇಶವನ್ನು ಕಪ್ಪುಪಟ್ಟಿಗೆ ತಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಇಮ್ರಾನ್‌ ಖಾನ್‌,ಎರಡು ವರ್ಷಗಳಿಂದ ಭಾರತವು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಲಾಬಿ ಮಾಡುವ ಮೂಲಕ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಪಾಕಿಸ್ತಾನದ ಸರ್ಕಾರದ ಅಂದಾಜಿನ ಪ್ರಕಾರ, ಪಾಕಿಸ್ತಾನದ ಎಫ್‌ಎಟಿಎಫ್ ಬೂದು ಪಟ್ಟಿಯು ದೇಶಕ್ಕೆ ವಾರ್ಷಿಕವಾಗಿ ಸುಮಾರು 10 ಶತಕೋಟಿ ಡಾಲರ್‌ಗಳಷ್ಟು ಹಾನಿಯನ್ನುಂಟುಮಾಡುತ್ತಿದೆ.
ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ನೆರವು, ಇತರ ಬೆದರಿಕೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಧಕ್ಕೆ ತರುವುದನ್ನು ನಿಗ್ರಹಿಸಲು 1989ರಲ್ಲಿ ಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ಸಂಸ್ಥೆ ಎಫ್ಎಟಿಎಫ್ ಆಗಿದೆ.
ಎಫ್ಎಟಿಎಫ್ ನಿಯಮ ಪ್ರಕಾರ, ಬೂದು (ಗ್ರೆ ಲಿಸ್ಟ್) ಮತ್ತು ಕಪ್ಪು(ಬ್ಲಾಕ್) ಪಟ್ಟಿ ಮಧ್ಯೆ ಒಂದು ಅಗತ್ಯದ ಹಂತವಿದ್ದು ಅದನ್ನು ಕಪ್ಪು ಬೂದು ಪಟ್ಟಿ ಎನ್ನಲಾಗುತ್ತದೆ. ಇದರರ್ಥ, ಬಲವಾದ ಎಚ್ಚರಿಕೆಯನ್ನು ದೇಶಕ್ಕೆ ನೀಡುವುದಾಗಿದ್ದು ಈ ಮೂಲಕ ತನ್ನನ್ನು ತಿದ್ದುಕೊಂಡು ಸುಧಾರಿಸಿಕೊಳ್ಳಲು ಸಂಬಂಧಪಟ್ಟ ದೇಶಕ್ಕೆ ಕೊನೆಯ ಅವಕಾಶವಾಗಿರುತ್ತದೆ. ಮೂರನೇ ಹಂತದವರೆಗೆ ಎಚ್ಚರಿಕೆಯ ಸಂದೇಶವನ್ನು ಕಪ್ಪು ಬೂದು ಪಟ್ಟಿ ಎಂದು ಕರೆಯಲಾಗುತ್ತದೆ. ಇದಾಗಲೇ ಪಾಕಿಸ್ತಾನ ಬೂದು ಪಟ್ಟಿಗೆ ಸೇರಿದೆ.
ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಜನರ ಜೀವ ಉಳಿಸಿದ ಕರೊನಾ!

ಗೆಳೆಯನ ಜತೆ ದೈಹಿಕ ಸಂಪರ್ಕ ಬೆಳೆಸಿ ಅತ್ಯಾಚಾರ ಎಂದಳು: ಹೈಕೋರ್ಟ್‌ ಮಾಡಿತು ತಕ್ಕಶಾಸ್ತಿ

ಅರ್ಚಕ ನಾರಾಯಣಾಚಾರ್‌ ಪುತ್ರಿಯರು ಹಿಂದೂಗಳಲ್ಲ: ಪರಿಹಾರದ ಚೆಕ್‌ನಿಂದ ಸತ್ಯ ಬಯಲು…!

ಪಿಪಿಇ ಕಿಟ್‌ ಹಾಗೂ ಮುಟ್ಟಿನ ದಿನಗಳು: ಕರೊನಾ ವಾರಿಯರ್ಸ್‌ ನೋವನ್ನು ಬಿಚ್ಚಿಟ್ಟ ವೈದ್ಯೆಯರು

ಅಣ್ಣಾಮಲೈ ಬಿಜೆಪಿ ಸೇರುತ್ತಿದ್ದಂತೆಯೇ ದಾಖಲಾಯ್ತು ಕೇಸ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 14 =
Remember me
