ಇಸ್ಲಾಮಾಬಾದ್:ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ಅಧಿಕವಾಗಿದ್ದು, ಆದರೆ ಈ ವರ್ಷ ಇವುಗಳ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ ಕಂಡುಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಇವುಗಳ ಸಂಖ್ಯೆ 1 ಲಕ್ಷ ಹೆಚ್ಚಳವಾಗಿದ್ದು, ಸದ್ಯ 56 ಲಕ್ಷ ಕತ್ತೆಗಳಿವೆ. ಕತ್ತೆಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ ಪಾಕಿಸ್ತಾನದ ಪ್ರತಿಪಕ್ಷಗಳು ಪ್ರಧಾನಿ ಇಮ್ರಾನ್‌ ಖಾನ್‌ಗೆ ಮುಜುಗರ ತರುವಂಥ ಹೇಳಿಕೆಗಳನ್ನು ಘೋಷಿಸುತ್ತಿದ್ದಾರೆ.
ಪಾಕಿಸ್ತಾನದ ವಿತ್ತ ಸಚಿವ ಶೌಕತ್ ತಾರಿನ್ 2020-21ರ ಆರ್ಥಿಕ ಸಮೀಕ್ಷೆ ಅಂಕಿ ಅಂಶಗಳನ್ನು ಪ್ರಕಟಿಸುತ್ತಿರುವ ಸಂದರ್ಭದಲ್ಲಿ ಕತ್ತೆಗಳ ವಿಷಯವನ್ನು ಪ್ರಸ್ತಾಪಿಸಿದರು. ಕೂಡಲೇ ಪ್ರತಿಪಕ್ಷಗಳು, ನಮಗೆ ಕತ್ತೆಯ ಸರ್ಕಾರ ಬೇಡ…. ‘ಡಾಂಕಿ ರಾಜಾ ಕಿ ಸರ್ಕಾರ ನಹೀ ಚಲೇಗಿ ನಹೀ ಚಲೇಗಿ’ (ಕತ್ತೆ ರಾಜನ ಸರ್ಕಾರ ನಮಗೆ ಬೇಡ, ನಮಗೆ ಬೇಡ) ಎಂದು ಘೋಷಣೆ ಕೂಗಲು ಶುರು ಮಾಡಿದ್ದು, ಇದೇ ಘೋಷಣೆಯೊಂದಿಗೆ ಬೀದಿಗೂ ಇಳಿಯಲಾಗಿದೆ.
https://twitter.com/BirPra_Singh/status/1403602482740154370
ಅಂದಹಾಗೆ, ಪ್ರತಿವರ್ಷವೂ ಪಾಕಿಸ್ತಾನವು ಕತ್ತೆಗಳನ್ನು ಚೀನಾಕ್ಕೆ ರಫ್ತು ಮಾಡುತ್ತವೆ. ಚೀನಾದಲ್ಲಿ ಕತ್ತೆಗಳ ಮಾಂಸ ಸೇರಿದಂತೆ ಇನ್ನಿತರ ಭಾಗಗಳಿಂದ ಔಷಧಿಗಳನ್ನು ತಯಾರಿಸುತ್ತವೆ. ಇವುಗಳ ಚರ್ಮದಿಂದ ಸಿದ್ಧವಾಗುವ ಔಷಧಿ ಇಮ್ಯೂನಿಟಿ ಸಿಸ್ಟಂನ್ನು ಸ್ಟ್ರಾಂಗ್ ಮಾಡುವಲ್ಲಿ ಕೆಲಸ ಮಾಡುತ್ತದೆ. ರಕ್ತ ಪ್ರಕ್ರಿಯೆಯನ್ನು ಬಲಪಡಿಸುತ್ತದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಹೆಚ್ಚು ಹೆಚ್ಚು ಕತ್ತೆಗಳನ್ನು ಸಾಕಾಣಿಕೆ ಮಾಡುತ್ತಿದ್ದು, ಈ ಬಾರಿ ಲಾಕ್‌ಡೌನ್‌ನಲ್ಲಿ ಇನ್ನಷ್ಟು ಹೆಚ್ಚು ಕತ್ತೆಗಳ ಜನನಕ್ಕೆ ಕಾರಣವಾಗಿದ್ದು, ಆದಾಯ ಹೆಚ್ಚಿಸಿಕೊಂಡಿದೆ.
ಕತ್ತೆ ಮಾತ್ರವಲ್ಲದೇ ಎಮ್ಮೆ, ಕುದುರೆ, ಆಡು, ಟಗರು ಮತ್ತು ಒಂಟೆಗಳನ್ನೂ ಪಾಕಿಸ್ತಾನ ರಫ್ತು ಮಾಡುತ್ತಿದ್ದು, ಇವುಗಳ ಸಂಖ್ಯೆಯಲ್ಲಿ ಕೂಡ ಈ ಬಾರಿ ಏರಿಕೆಯಾಗಿರುವ ಮಾಹಿತಿಯನ್ನು ಶೌಕತ್‌ ತಾರೀನ್‌ ನೀಡಿದ್ದಾರೆ. ಸದ್ಯ ಪಾಕಿಸ್ತಾನ ಕತ್ತೆಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನದಿಂದ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತಿರುವ ಚೀನಾ ಮೊದಲ ಸ್ಥಾನದಲ್ಲಿದೆ.
ಶಾಸಕನಿಗೆ ಹಾಕಿದ್ರು ಸೇಬಿನ ಹಾರ: ಕರೊನಾ ಲೆಕ್ಕಿಸದೇ ಹಣ್ಣು ತಿನ್ನಲು ಮುಗಿಬಿದ್ರು ಜನ- ವಿಡಿಯೋ ನೋಡಿ…

ಪಿಯುಸಿ ಪರೀಕ್ಷೆ ರದ್ದು- ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ: ಸಚಿವರ ಭರವಸೆಯನ್ನೂ ಕೇಳಲಿಲ್ಲ ಈಕೆ!

ಡಿಎಲ್‌ ಪಡೆಯಲು ಇನ್ನು ಏಜೆಂಟೂ ಬೇಡ, ಆರ್‌ಟಿಒಗೆ ಹೋಗೋ ಅಗತ್ಯವೂ ಇಲ್ಲ- ಆನ್‌ಲೈನ್‌ನಲ್ಲಿಯೂ ಲಭ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
