ಇಸ್ಲಾಮಾಬಾದ್:ಕೆಲ ತಿಂಗಳಿನಿಂದ ಪಾಕಿಸ್ತಾನದಲ್ಲಿ ಸಂಚಲನ ಸೃಷ್ಟಿಸಿರುವ ನಟಿಯೆಂದರೆ ಸಿಂಥಿಯಾ ರಿಚ್ಚಿ. ಅಮೆರಿಕ ಮೂಲದ ಈಕೆ, ಪಾಕಿಸ್ತಾನದ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ, ಈಗಿನ ಪಾಕ್‌ ಪ್ರಧಾನಿ ಮಂಚಕ್ಕೆ ಕರೆದಿದ್ದಾರೆ, ಮಾಜಿ ಪ್ರಧಾನಿಗಳಾದ ಯೂಸುಫ್ ರಾಝಾ ಗಿಲಾನಿ ಮತ್ತು ಇನ್ನೊಬ್ಬ ಮಾಜಿ ಸಚಿವರು 2011ರಲ್ಲಿ ಇಬ್ಬರ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದೆಲ್ಲಾ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡು ಬಿರುಗಾಳಿ ಎಬ್ಬಿಸಿದ್ದವಳು.
ಸಚಿವ ರೆಹಮಾನ್‌ ಮಲಿಕ್‌ ಅತ್ಯಾಚಾರ ಎಸಗಿರುವ ಕುರಿತಂತೆ ವಿಡಿಯೋ ತುಣಕನ್ನೂ ಹರಿಬಿಟ್ಟಿದ್ದ ಈಕೆ, ಹಾಲಿ, ಮಾಜಿ ಪ್ರಧಾನಿಗಳೂ ತನ್ನನ್ನು ಬಳಸಿಕೊಂಡಿದ್ದ ಬಗ್ಗೆ ವಿವರಿಸಿದ್ದಳು.
ಪಾಕಿಸ್ತಾನದ ಕಿರುತೆರೆಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಅಲಿ ಸಲೀಂ ಎಂಬಾತ ತನ್ನ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಈಗಿನ ಪ್ರಧಾನಿ ಇಮ್ರಾನ್‌ ಖಾನ್‌ ಈಕೆಯನ್ನು ಮಂಚಕ್ಕೆ ಕರೆದಿರುವ ಬಗ್ಗೆ ಬಹಿರಂಗಪಡಿಸಿದ್ದ. ಸಿಂಥಿಯಾಳನ್ನು ನಾನು ಬಹುದಿನಗಳಿಂದ ಬಲ್ಲೆ. ಆಕೆಯೊಂದಿಗೆ ಒಂದೇ ಕೋಣೆಯಲ್ಲಿ ನಾನಿದ್ದೆ. ಇಮ್ರಾನ್ ಖಾನ್​​ ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಆ ಸಂದರ್ಭದಲ್ಲಿ ಸ್ವತಃ ಸಿಂಥಿಯಾ ಹೇಳಿದ್ದಾಗಿ ಅಲಿ ಸಲೀಂ ಹೇಳಿದ್ದ.
ಧೈರ್ಯ ಮಾಡಿ ಈಕೆ ಸತ್ಯ ಹೇಳಿದ್ದಾಳೆ ಎನ್ನುವ ಕಾರಣಕ್ಕೆ ‘ಸಿಂಥಿಯಾ ಪಾಕಿಸ್ತಾನದ ಗೌರವ’ ಎನ್ನುವ ಮೂಲಕ #CynthiaPrideofPakistan ಎಂಬ ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಭಾರಿ ಜನಪ್ರಿಯತೆ ಕೂಡ ಗಳಿಸಿಕೊಂಡಿದ್ದಳು. ಪಾಕ್​ನ ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್​ ಎ ಇನ್ಸಾಫ್​ (ಪಿಟಿಐ) ಪಕ್ಷದ ಸದಸ್ಯರು ಈ ಹ್ಯಾಷ್​ಟ್ಯಾಗ್​ ಅನ್ನು ಆರಂಭಿಸಿದ್ದರು.
ಇದನ್ನೂ ಓದಿ:ಆಂಟಿನೇ ಬೇಕೆಂದು ಐದು ಮದುವೆಯಾದವಳ 6ನೇ ಗಂಡನಾಗಿ ಹೋದ ಚಿಕ್ಕಮಗಳೂರು ಯುವಕ!
ತನ್ನನ್ನು ಚಿತ್ರ ನಿರ್ಮಾಪಕಿ, ಪತ್ರಕರ್ತೆ, ಬ್ಲಾಗರ್​ ಎಂದೆಲ್ಲ ಕರೆದುಕೊಳ್ಳುವ ಸಿಂಥಿಯಾಳ ನಸೀಬು ಸದ್ಯ ಸರಿಯಿಲ್ಲ. ಅಮೆರಿಕ ಮೂಲದ ಸಿಂಥಿಯಾಳ ವೀಸಾ ಅವಧಿ ಮುಗಿದಿದ್ದು, ಅದನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ. ತನ್ನ ಕಾಲಬುಡಕ್ಕೆ ಬೆಂಕಿ ಇಡುತ್ತಿರುವ ಈ ಸುಂದರಿಯನ್ನು ಇನ್ನು ತನ್ನ ದೇಶದಲ್ಲಿಯೇ ಇಟ್ಟುಕೊಂಡರೆ ಗ್ರಹಚಾರ ಕೆಟ್ಟಂತೆ ಎಂದು ಭಾವಿಸಿರುವ ಪಾಕಿಸ್ತಾನವು, ಈಕೆ ವೀಸಾ ವಿಸ್ತರಣೆಗೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದೆ. 15 ದಿನಗಳಲ್ಲಿ ದೇಶವನ್ನು ತೊರೆಯುವಂತೆ ನಿರ್ದೇಶಿಸಿದೆ.
ಈಕೆಯ ವೀಸಾ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲು ಇಸ್ಲಾಮಾಬಾದ್ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ ವೀಸಾ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಸರ್ಕಾರ ಹೇಳಿದ್ದು, ದೇಶ ಬಿಟ್ಟು ತೊಲಗುವಂತೆ ಹೇಳಿದೆ.
ಸಿಂಥಿಯಾ 2009ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪಾಕ್​ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಟೆಕ್ಸಾಸ್​ನಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರು ಇವರನ್ನು ಆಗಿನ ಆರೋಗ್ಯ ಸಚಿವ ಮಕ್ದೂಮ್​ ಶಹಾಬುದ್ದೀನ್​ ಅವರಿಗೆ ಪರಿಚಯಿಸಿದ್ದರು. ಕೊನೆಗೆ ಇವರು ಗೃಹ ಸಚಿವರಾಗಿದ್ದ ರೆಹಮಾನ್​ ಮಲಿಕ್​ ಅವರಿಗೆ ಸಹಾಯಕರಾಗಿ ನೇಮಕಗೊಂಡಿದ್ದರು.
ಈ ರೀತಿಯಾಗಿ ರಾಜಕೀಯ ರಂಗದ ಸಂಪರ್ಕ ಪಡೆದುಕೊಂಡ ಸಿಂಥಿಯಾ, ಹಂತ ಹಂತವಾಗಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋದರು.
ಹುಲಿಯಾದ ನಾಯಿ- ಬೇಸ್ತುಬಿದ್ದ ಜನ: ಕುಕೃತ್ಯ ಎಸಗಿದವರ ಹುಡುಕಿಕೊಟ್ಟರೆ ಸೂಕ್ತ ಬಹುಮಾನ

ವಿಶ್ವದ ಅತ್ಯಂತ ಶ್ರೀಮಂತ ತೈಲ ಉತ್ಪಾದನಾ ರಾಷ್ಟ್ರ ದಿವಾಳಿಯತ್ತ…

ಮೊಬೈಲ್‌ ಬಳಕೆದಾರರಿಗೆ ಬಿಗ್ ಶಾಕ್‌: ಶೀಘ್ರದಲ್ಲೇ ಏರಲಿದೆ ಕರೆ, ಡಾಟಾ ರೇಟ್‌?

48 ಸಾವಿರ ಕೊಳೆಗೇರಿ ತೆರವು ಮಾಡಿ, ರಾಜಕೀಯ ಪ್ರವೇಶ ಬೇಡ: ಇದು ‘ಸುಪ್ರೀಂ’ ಆದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − 1 =
Remember me
