ನವದೆಹಲಿ:ಇಡೀ ವಿಶ್ವದಲ್ಲಿ ಭಾರತದ ಮಹಿಮೆ ಮತ್ತೊಮ್ಮೆ ಪ್ರಚಾರಕ್ಕೆ ಬಂದಿದೆ. ಭಾರತದ ಮಣ್ಣಿನಲ್ಲಿ ಜೀವಿಸಿ, ಭಾರತದ ಅನ್ನವನ್ನು ಉಂಡು ಭಾರತದ ಬೆನ್ನಿಗೆ ಚೂರಿ ಹಾಕುವಲ್ಲಿ ಕೆಲವು ಭಾರತೀಯರು ಎನಿಸಿಕೊಂಡವರೇ ಒಂದೆಡೆ ಅಪಪ್ರಚಾರದಲ್ಲಿ ತೊಡಗಿಕೊಂಡರೆ, ಶತ್ರರಾಷ್ಟ್ರ ಎನಿಸಿಕೊಂಡಿರುವ ಪಾಕಿಸ್ತಾನಿಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹೇಗೆ ಭಾರತದ ಧ್ವಜವನ್ನು ಬಳಕೆ ಮಾಡಿಕೊಂಡರು ಎನ್ನುವುದನ್ನು ಈ ವಿದ್ಯಾರ್ಥಿಗಳ ಬಾಯಲ್ಲಿಯೇ ಕೇಳಿದರೆ ಒಳ್ಳೆಯದು.
ಯೂಕ್ರೇನ್​ನಲ್ಲಿ ಸಿಲುಕಿರುವ ಅಸಂಖ್ಯ ಭಾರತೀಯರ ವಾಪಸಿಗೆ ಭಾರತ ಸರ್ಕಾರ ಇನ್ನಿಲ್ಲದ ಶ್ರಮ ವಹಿಸುತ್ತಿದೆ. ರಷ್ಯಾ ಯೂಕ್ರೇನ್​ ವಿರುದ್ಧ ಯುದ್ಧ ಸಾರುತ್ತಿದೆ ಎಂಬ ಬಗ್ಗೆ ವರದಿ ಬಂದಾಗಲೇ ಅಲ್ಲಿಯ ಭಾರತೀಯರಿಗೆ ಎಚ್ಚರಿಕೆ ಕೊಡಲಾಗಿತ್ತು. ಆದಾಗ್ಯೂ ಯೂಕ್ರೇನ್​ನ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳದ ಕಾರಣ, ಭಾರತದ ವಿದ್ಯಾರ್ಥಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಇದಾಗಲೇ ಓರ್ವ ಕನ್ನಡಿಗ ಪ್ರಾಣವನ್ನೂ ಕಳೆದುಕೊಂಡಿದ್ದಾನೆ.
ಅದೇ ಇನ್ನೊಂದೆಡೆ, ಭಾರತದ ಧ್ವಜವನ್ನು ತೋರಿಸಿ ಅದೆಷ್ಟೋ ವಿದ್ಯಾರ್ಥಿಗಳು ಪ್ರಾಣ ಕಾಪಾಡಿಕೊಂಡು ಗಡಿ ದಾಟಿ ಸುರಕ್ಷಿತವಾಗಿ ಬರುತ್ತಿದ್ದಾರೆ. ಭಾರತದ ಧ್ವಜವನ್ನು ತೋರಿಸಿದಾಕ್ಷಣ ಅವರನ್ನು ಯಾವುದೇ ಚೆಕಿಂಗ್​ಗೆ ಒಳಪಡಿಸದೇ ಗಡಿಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆಯೇ ಪಾಕಿಸ್ತಾನ ಹಾಗೂ ಟರ್ಕಿಯ ವಿದ್ಯಾರ್ಥಿಗಳು ಇದೇ ಮಾರ್ಗವನ್ನು ಅನುಸರಿಸುತ್ತಿದ್ದಾರಂತೆ. ಈ ಕುರಿತು ಭಾರತದ ವಿದ್ಯಾರ್ಥಿಗಳು ಅನುಭವ ಹಂಚಿಕೊಂಡಿದ್ದಾರೆ.
ಭಾರತದ ಸರ್ಕಾರ ‘ಆಪರೇಷನ್ ಗಂಗಾ’ ಮಿಷನ್ ಮೂಲಕ ಯೂಕ್ರೇನ್​ ನಗರಗಳಿಂದ ಸಮೀಪದ ಬೇರೆ ರಾಷ್ಟ್ರಗಳಿಗೆ ವಾಹನಗಳ ಮೂಲಕ ಭಾರತೀಯರನ್ನು ಸಾಗಿಸಿ, ಅಲ್ಲಿಂದ ಭಾರತಕ್ಕೆ ಏರ್​ಲಿಫ್ಟ್ ಮಾಡಲಾಗುತ್ತಿದೆ. ಈ ವೇಳೆ ವಾಹನಗಳಲ್ಲಿ ಭಾರತೀಯ ಧ್ವಜವನ್ನು ಪ್ರದರ್ಶಿಸಲಾಗುತ್ತಿದ್ದು, ಅವರಿಗೆ ಯಾವುದೇ ಚೆಕಿಂಗ್​ ಮಾಡದೇ ಬಿಡಲಾಗುತ್ತಿದೆ. ತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಲು ಯೂಕ್ರೇನ್​ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳು ಭಾರತದ ಧ್ವಜವನ್ನು ಹಿಡಿದು ಯೂಕ್ರೇನ್​ನ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಿದ್ದಾರೆ! ಭಾರತದ ತ್ರಿವರ್ಣ ಧ್ವಜವನ್ನು ಟರ್ಕಿಶ್ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳು ಸಹ ಬಳಸುತ್ತಿದ್ದಾರೆ ಎಂದು ವಿದ್ಯಾರ್ಥಿ ಅನುಭವ ಹಂಚಿಕೊಂಡಿದ್ದಾನೆ.
ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರು ಯೂಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಶಿಫಾರಸು ಮಾಡಿದ್ದರು. ಅದರಂತೆ ಭಾರತದ ವಿದ್ಯಾರ್ಥಿಗಳು ಅಂಗಡಿಯಿಂದ ಕೆಲವು ಬಣ್ಣದ ಸ್ಪ್ರೇಗಳನ್ನು ಮತ್ತು ಬಟ್ಟೆಯನ್ನು ತಂದು, ಬಟ್ಟೆಯನ್ನು ಕತ್ತರಿಸಿ, ಅಳತೆಗೆ ಅನುಗುಣವಾಗಿ ಸ್ಪ್ರೇ ಸಿಂಪಡಿಸಿ, ತ್ರಿವರ್ಣ ಧ್ವಜವನ್ನು ತಯಾರಿಸಿ ಭಾರತದ ಧ್ವಜ ಮಾಡಿಕೊಂಡು ಗಡಿಯನ್ನು ಸುಲಭವಾಗಿ ದಾಟಿದ್ದಾರೆ. ಇದೀಗ ಇತರ ರಾಷ್ಟ್ರಗಳ ವಿದ್ಯಾರ್ಥಿಗಳೂ ಅದನ್ನೇ ಅನುಸರಿಸುತ್ತಿರುವುದು ಭಾರತದ ಘನತೆಯನ್ನು ಎತ್ತಿ ತೋರಿಸುತ್ತಿದೆ.
ಇಲ್ಲಿದೆ ಕೇಳಿ ವಿದ್ಯಾರ್ಥಿಗಳ ಅನುಭವದ ಮಾತು…
#WATCH| "We were easily given clearance due to the Indian flag; made the flag using a curtain & colour spray…Both Indian flag & Indians were of great help to the Pakistani, Turkish students," said Indians students after their arrival in Bucharest, Romania#UkraineCrisispic.twitter.com/vag59CcPVf— ANI (@ANI)March 2, 2022
#WATCH| "We were easily given clearance due to the Indian flag; made the flag using a curtain & colour spray…Both Indian flag & Indians were of great help to the Pakistani, Turkish students," said Indians students after their arrival in Bucharest, Romania#UkraineCrisispic.twitter.com/vag59CcPVf
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
