ಇಸ್ಲಾಮಬಾದ್:ಸಂಸದರೊಬ್ಬರು ಎರಡನೆಯ ಪತ್ನಿಯನ್ನು ಬಿಟ್ಟು ಮೂರನೆಯ ಮದ್ವೆಯಾಗಿ ಈಗ ಭಾರಿ ಸುದ್ದಿಯಲ್ಲಿದ್ದಾರೆ. ಈ ಸುದ್ದಿಯಾಗಲು ಕಾರಣ, ಇವರು ಮೂರನೆಯ ಮದುವೆಯಾಗಿದ್ದಾರೆ ಎನ್ನುವುದಕ್ಕಲ್ಲ, ಬದಲಿಗೆ 50 ವರ್ಷದ ಈ ಸಂಸದ 18 ವರ್ಷದ ಯುವತಿ ಎಂದರೆ ತಮಗಿಂತ 32 ವರ್ಷ ಚಿಕ್ಕ ವಯಸ್ಸಿನಾಕೆಯನ್ನು ಮದುವೆಯಾಗಿದ್ದಾರೆ.
ಈ ಸಂಸದನ ಹೆಸರು ಅಮೀರ್ ಲಿಯಾಖತ್‌. ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್-ತೆಹ್ರಿಕ್ –ಇ-ಇನ್ಸಾಫ್‌ ಪಕ್ಷದ ಸಂಸದ ಈತ. ಅಲ್ಲದೇ ಇವರು ಅಲ್ಲಿನ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕರೂ ಹೌದು.‌
ಇವರು ಮೂರನೆಯ ಮದುವೆಯಾಗಿರುವುದು ವಿಶೇಷವಲ್ಲ ಎನ್ನಲು ಕಾರಣ, ಇವರ ಧರ್ಮದಲ್ಲಿ ಹೀಗೆ ಮದುವೆಯಾಗಲು ಅವಕಾಶ ಇದೆ. ಆದ್ದರಿಂದ ಮೂರನೆಯ ಮದುವೆಯಾಗಿರುವುದು ಇವರ ಪ್ರಕಾರ ಕಾನೂನುಬದ್ಧವಾಗಿಯೇ ಇದೆ. ಆದರೆ ಇಂಥದ್ದೊಂದು ಉನ್ನತ ವೃತ್ತಿಯಲ್ಲಿರುವ ವ್ಯಕ್ತಿ ತಮ್ಮ ಮಗಳಿನ ವಯಸ್ಸಿನಾಕೆಯನ್ನು ಮದುವೆಯಾಗಿರುವ ಕಾರಣ, ಈ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
1 ತಿಂಗಳ ಹಿಂದಷ್ಟೇ 2ನೇ ಪತ್ನಿಯನ್ನು ಈ ಸಂಸದ ತೊರೆದಿದ್ದಾರೆ. ಈಗ ವಿವಾಹವಾಗಿರುವ ಯುವತಿಯ ಹೆಸರು ಸಯೀದಾ ದಾನಿಯಾ ಷಾ. ಈ ಕುರಿತು ಸಂಸದ ಖುದ್ದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ನಾನು ಈಗಷ್ಟೇ ಒಂದು ಭಯಾನಕ, ಕರಾಳ ದಿನಗಳಿಂದ ಆಚೆ ಬಂದಿದ್ದೇನೆ. ನನ್ನ ಜೀವನಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ನಮ್ಮಿಬ್ಬರನ್ನು ನೀವೆಲ್ಲ ಆಶೀರ್ವದಿಸಬೇಕು’ ಎಂದು ಸಂಸದ ಅಮೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಇತ್ತ ನವವಧು ಸಾಯೀದಾ ಷಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಖುಷಿಯನ್ನು ಹಂಚಿಕೊಂಡಿದ್ದಾಳೆ. ‘ನಾನು ಬಾಲ್ಯದಲ್ಲೇ ಅಮೀರ್ ಅವರನ್ನು ಟಿವಿಯಲ್ಲಿ ನೋಡುತ್ತಿದ್ದೆ. ಆಗಲೇ ನನಗೆ ಪ್ರೀತಿ ಹುಟ್ಟಿತ್ತು. ಆದರೆ ಅವರು ಸಿಕ್ಕಿರಲಿಲ್ಲ. ಇದೀಗ ನನ್ನ ಬಾಲ್ಯದ ಪ್ರೇಮಿ ಸಿಕ್ಕಿದ್ದಾರೆ’ ಎಂದು ಹೇಳಿದ್ದಾಳೆ.
ಇನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇವರಿಗೆ ಶುಭಕೋರಿದ್ದಾರೆ. ಆದರೆ ಜಾಲತಾಣದಲ್ಲಿ ಮಾತ್ರ ಇವರಿಬ್ಬರ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.


A post shared by @syedadaniaaamir

VIDEO: ಬುರ್ಕಾಧಾರಿ ಹಿಂದೆ ಹೋದ ಎಸ್‌ಪಿ ಕಾರ್ಯಕರ್ತ ಮಾಡಿದ್ದೇನು ನೋಡಿ! ಜಾಲತಾಣದಲ್ಲಿ ಆಕ್ರೋಶ

‘ಅಮ್ಮಾ ಭಯವಾಗ್ತಿದೆ, ಬೇಗ ಬಾ…ಎಲ್ಲಾ ಸೇರಿ ಸಾಯಿಸ್ತಾರೆ’ ಎಂದು ಕರೆ ಮಾಡಿದ್ದ ಮರುಕ್ಷಣವೇ ಶವವಾದ ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
