ನವದೆಹಲಿ:2019ರಲ್ಲಿ ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿದ್ದ ಭಾರತ, ಪಾಕಿಸ್ತಾನಕ್ಕೆ ಸೇರಿದ್ದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿತ್ತು. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26 ರಂದು ಭಾರತೀಯ ವಾಯುಪಡೆ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮಹಮ್ಮದ್ ಉಗ್ರಗಾಮಿ ನೆಲೆಯ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕ್‌ಗೆ ಸೇರಿದ ಎಫ್-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರಿಗೆ ಈಚೆಗಷ್ಟೇ ರಾಷ್ಟ್ರಪತಿಯವರು ವೀರ ಚಕ್ರ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ. ಇದು ಸುದ್ದಿಯಾಗುತ್ತಲೇ ಅವಮಾನದಿಂದ ಬೆಂದುಹೋಗಿರುವ ಪಾಕಿಸ್ತಾನ ಇದೀಗ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಅದೇನೆಂದರೆ, ಅಭಿನಂದರ್‌ ವರ್ಧಮಾನ್‌ ನಮ್ಮ ವಿಮಾನವನ್ನೇನೂ ಹೊಡೆದು ಉರುಳಿಸಿರಲಿಲ್ಲ. ಇವೆಲ್ಲಾ ಸುಳ್ಳು. 2019ರ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ಎಫ್‌-16 ಯುದ್ಧ ವಿಮಾನವನ್ನು ತಮ್ಮ ಪೈಲಟ್‌ ಹೊಡೆದುರುಳಿಸಿದ್ದಾರೆ ಎಂದು ಹೇಳುತ್ತಿರುವ ಭಾರತದ ವಾದವನ್ನು ಪಾಕಿಸ್ತಾನ ಬಲವಾಗಿ ಖಂಡಿಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದೆ.
ಈ ಪ್ರಕಟಣೆಯಲ್ಲಿ ಅದು, ‘ಭಾರತವೇನು ತಾನು ಪಾಕಿಸ್ತಾನದ ಯುದ್ಧವಿಮಾನ ಹೊಡೆದುರುಳಿಸಿರುವುದಾಗಿ ಹೇಳಿದೆಯೋ, ಆ ದಿನ ಯಾವುದೇ ರೀತಿಯ ವಿಮಾನ ನೆಲಕ್ಕೆ ಬಿದ್ದಿಲ್ಲ ಎಂದು ಅಂತಾರಾಷ್ಟ್ರೀಯ ತಜ್ಞರು, ಅಮೆರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಇದು ಸುಳ್ಳು ಸುದ್ದಿ. ಬಾಲಾಕೋಟ್‌ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ನಡೆಸಿದ್ದ ದಾಳಿಯ ಸಂದರ್ಭದಲ್ಲಿ ನಮ್ಮ ಗಡಿಯೊಳಕ್ಕೆ ಸಿಕ್ಕ ಭಾರತೀಯ ಪೈಲಟ್‌ ಮಾಡಿರುವುದಕ್ಕೆ ಕಾರಣ, ಬೇರೆ ಏನೂ ಇಲ್ಲ. ನಾವು ಅಂದರೆ ಪಾಕಿಸ್ತಾನವು ಶಾಂತಿಪ್ರಿಯ ರಾಷ್ಟ್ರ ಎಂಬುದಕ್ಕೆ ಸಾಬೀತು ಮಾಡಲು ಹೀಗೆ ಮಾಡಿದ್ದೇವೆ. ಅವರನ್ನು ಬಿಡುಗಡೆ ಮಾಡುವ ಮೂಲಕ ಅದು ಸಾಬೀತಾಗಿದೆ’ ಎಂದಿದೆ.
ಎರಡು ದೇಶಗಳ ವಿದೇಶಾಂಗ ಸಚಿವಾಲಯಗಳ ಮಾತುಕತೆ, ಅಂತಾರಾಷ್ಟ್ರೀಯ ಮಟ್ಟದ ತೀವ್ರ ಒತ್ತಡದ ಬಳಿಕ ಮಾರ್ಚ್ 1ರ ರಾತ್ರಿ ಅಭಿನಂದನ್‌ ಅವರನ್ನು ಬೇರೆ ದಾರಿಯಿಲ್ಲದೇ ಬಿಡುಗಡೆ ಮಾಡಿದ್ದ ಪಾಕಿಸ್ತಾನ ಇದೀಗ ತನ್ನನ್ನು ಹೀಗೆ ಸಮರ್ಥಿಸಿಕೊಂಡು ಭಾರಿ ಟೀಕೆಗೆ ಗುರಿಯಾಗಿದೆ. ಏಕೆಂದರೆ ತನ್ನ ವಿಮಾನ ತುಂಡುತುಂಡಾಗಿರುವ ಚಿತ್ರವನ್ನು ಅಂದು ಪಾಕಿಸ್ತಾನವೇ ಖುದ್ದು ಬಿಡುಗಡೆ ಮಾಡಿತ್ತು!
ರೇಪ್ ಕೇಸ್‌ ತನಿಖೆ ವೇಳೆ ಸಿಕ್ಕಿದ್ದು 5 ಸಾವಿರ ಸ್ತ್ರೀಯರು! ವಿಶ್ವದ ಟಾಪ್‌ಮೋಸ್ಟ್‌ ಸಿರಿವಂತನ ಭಯಾನಕ ಕಥೆ…

ಗಂಡ ಅಮರನಾಗುತ್ತಾನೆಂದು ಆತನ ಜೀವ ಇರುವಾಗಲೇ ಸಮಾಧಿ ಮಾಡಿದ ಹೆಂಡತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
