ಕಾಬುಲ್:ಇಡೀ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಆಡಳಿತ ನಡೆಸುತ್ತಿರುವ ತಾಲಿಬಾನಿಗಳಿಗೆ ಅಲ್ಲಿಯದ್ದೇ ಕಣಿವೆ ಪಂಜ್‌ಶೀರ್‌ ಸಿಂಹಸ್ವಪ್ನವಾಗಿ ಕಾಡತೊಡಗಿದೆ. ಪಂಜಶೀರ್ ಕಣಿವೆಯ ಬಂಡುಕೋರ ನಾಯಕ ಅಹಮ್ಮದ್ ಮಸೂದ್ ನೇತೃತ್ವದಲ್ಲಿ ಈ ಕಣಿವೆಯ ಪ್ರಜೆಗಳು ತಾಲಿಬಾನಿಗಳಿಗೆ ಎದೆಯೊಡ್ಡು ನಿಂತಿದ್ದಾರೆ.
ಈ ಕಣಿವೆಯನ್ನು ನಿಮಗೆ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಅಫ್ಘಾನ್‌ ಅಧ್ಯಕ್ಷನಂತೆ ಓಡಿಹೋಗಲ್ಲ. ತಾಕತ್ತಿದ್ದರೆ ಯುದ್ಧಮಾಡಿ ಗೆಲ್ಲಿ ಎಂದು ಮಸೂದ್ ಖಡಕ್ ಸಂದೇಶ ರವಾನಿಸಿದ್ದಾರೆ. ತಮ್ಮ ವಿರುದ್ಧವೇ ಬಂಡಾಯ ಎದ್ದಿರುವ ಪಂಜ್‌ಶೀರ್‌ ಅನ್ನು ಹೇಗಾದರೂ ವಶಪಡಿಸಿಕೊಂಡು ಅಲ್ಲಿ ರಕ್ತದೋಕುಳಿ ಹರಿಸಬೇಕು ಎಂದುಕೊಂಡಿರುವ ತಾಲಿಬಾನಿಗಳು ಇದೀಗ ಹೆಚ್ಚುವರಿಯಾಗಿ ತನ್ನ ಸೈನಿಕರನ್ನು ಅಲ್ಲಿಗೆ ಕಳುಹಿಸಿದೆ.
ಅಫ್ಘಾನಿಸ್ತಾನದ ಸೋವಿಯತ್ ವಿರೋಧಿ ಹೋರಾಟದ ನಾಯಕ, ಮುಜಾಹಿದ್ದೀನ್​ ಕಮಾಂಡರ್ ಆಗಿದ್ದ ಅಹಮ್ಮದ್‌ ಷಾ ಮಸೂದ್ ಅವರ ಪುತ್ರ ಅಹಮ್ಮದ್‌ ಮಸೂದ್‌. ಅಫ್ಘಾನಿಸ್ತಾನದ ಇತಿಹಾಸದಲ್ಲಿ ದಂತಕತೆ ಎನಿಸಿದ್ದ ಮುಜಾಹಿದ್ದೀನ್​ ಕಮಾಂಡರ್ ಅಹಮ್ಮದ್‌ ಷಾ ಅವರನ್ನು ಸೆಪ್ಟೆಂಬರ್ 11, 2001ರ ದಾಳಿಗೆ ಮೊದಲು ಅಲ್​ಖೈದಾ ಉಗ್ರರು ಹತ್ಯೆ ಮಾಡಿದ್ದರು. ಈಗ ಅವರ ಮಗ ಅಹಮ್ಮದ್‌ ಮಸೂದ್‌ ತಾಲಿಬಾನಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇದಾಗಲೇ ಅವರು 9 ಸಾವಿರ ಹೋರಾಟಗಾರರನ್ನು ಸಂಘಟಿಸಿದ್ದು, ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸರ್ಕಾರಿ ಪಡೆಗಳು ಇತರ ಬುಡಕಟ್ಟುಗಳ ಹೋರಾಟಗಾರರು ಈ ಪ್ರದೇಶದಲ್ಲಿ ಹೆಚ್ಚಾಗಿದ್ದಾರೆ.
‘ಇಸ್ಲಾಮಿಕ್ ಎಮಿರೇಟ್​ನ ನೂರಾರು ಮುಜಾಹಿದ್ದೀನ್​ಗಳು ಪಂಜ್​ಶಿರ್​ ಪ್ರಾಂತ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಅತ್ತ ಧಾವಿಸುತ್ತಿದ್ದಾರೆ. ಸ್ಥಳೀಯ ಸರ್ಕಾರಿ ಅಧಿಕಾರಿಗಳು ಶಾಂತಿಯುತವಾಗಿ ಪ್ರಾಂತ್ಯವನ್ನು ನಮಗೆ ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಮಿಲಿಟರಿ ಕಾರ್ಯಾಚರಣೆಗೆ ಮುಂದಾಗಬೇಕಾಯಿತು’ ಎಂದು ಉಗ್ರರ ಟ್ವಿಟರ್ ಅಕೌಂಟ್​ನಲ್ಲಿ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡಲಾಗಿದೆ. ತಾಲಿಬಾನಿಗಳು ಕಾಬುಲ್ ವಶಪಡಿಸಿಕೊಂಡ ನಂತರ ಸಾವಿರಾರು ಜನರು ಪಂಜ್​ಶಿರ್​ ಕಣಿಗೆ ಧಾವಿಸಿ ಆಶ್ರಯ ಪಡೆದುಕೊಂಡಿದ್ದಾರೆ.
ಅವರು ಕೊಂದರೆ ದೇವಿಯ ಮಡಿಲಲ್ಲಿ ಖುಷಿಯಿಂದ ಪ್ರಾಣ ಬಿಡುವೆ, ಅನ್ನ ಕೊಟ್ಟ ಅಫ್ಘಾನ್‌ ಬಿಟ್ಟು ಬರಲ್ಲ ಎಂದ ಅರ್ಚಕ

VIDEO: ಅಣ್ಣಾ… ಬದುಕುವ ದಾರಿಗಳು ಮುಚ್ಚಿವೆ… ನೀವೇ ನಮಗೆ ದಿಕ್ಕು… ರಾಖಿ ಸ್ವೀಕರಿಸಿ ಈ ಸಹೋದರಿಯರನ್ನು ಕಾಪಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 3 =
Remember me
