ಪಟ್ನಾ:ಕರೊನಾ ವೈರಸ್‌ ಎರಡನೆಯ ಅಲೆಯ ಭೀತಿಯಿಂದಾಗಿ ಹಲವಾರು ರಾಜ್ಯಗಳಲ್ಲಿ ಲಾಕ್‌ಡೌನ್‌ ಘೋಷಣೆಯಾಗಿವೆ. ಹೊರಗಡೆ ಅನಗತ್ಯವಾಗಿ ತಿರುಗಾಡುವಂತಿಲ್ಲ ಎಂದು ಸರ್ಕಾರಗಳು ಸೂಚಿಸಿವೆ, ಸುಖಾ ಸುಮ್ಮನೆ ತಿರುಗಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ, ಇದಾಗಲೇ ಹಲವಾರು ವಾಹನಗಳನ್ನೂ ಸೀಜ್‌ ಮಾಡಲಾಗಿದೆ.ಇಂಥ ಸ್ಥಿತಿಯಲ್ಲಿ ಜನ ಅಧಿಕಾರ್ ಪಾರ್ಟಿ ಮುಖಂಡ ಪಪ್ಪು ಯಾದವ್ ಅವರು ಬೇಕಾಬಿಟ್ಟೆಯಾಗಿ ವಾಹನ ಬಳಸಿ ಓಡಾಡುತ್ತಿದ್ದರು. ಇದರಿಂದ ಗರಂ ಆಗಿರುವ ಪೊಲೀಸರು ಪಪ್ಪೂ ಯಾದವ್ ಅವರನ್ನು ಬಂಧಿಸಿದ್ದಾರೆ. ಅನುಮತಿ ಪಡೆಯದೇ ವಾಹನ ಬಳಸಿದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.ಈ ಹಿಂದೆ ಕೂಡ ಪಪ್ಪೂ ಅನೇಕ ಬಾರಿ ಹೀಗೆಯೇ ಓಡಾಟ ಮಾಡಿದ್ದರು ಅದಕ್ಕಾಗಿಯೇ ಪೊಲೀಸರು ಪಪ್ಪೂ ಯಾದವ್ ಬಳಿ ಪಾಸ್‌ ಮಾಡಿಸಿ ತಿರುಗಾಡಿ ಎಂದು ಮನವಿ ಮಾಡಿದ್ದರು. ಆದರೆ ಈ ಮಾತನ್ನು ಕೇಳದ ಅವರು ಪದೇ ಪದೇ ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆಗೆ ತಲುಪಿದ ಪೊಲೀಸರ ತಂಡ ಅವರನ್ನು ಬಂಧಿಸಿರುವುದಾಗಿ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಪಪ್ಪೂ ಯಾದವ್‌, ಕಳೆದ ಒಂದೂವರೆ ತಿಂಗಳಿಂದ ಕೊರೋನಾ ಸಾಂಕ್ರಾಮಿಕದಿಂದ ಸಮಸ್ಯೆಯಲ್ಲಿರುವ ಕುಟುಂಬವರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕುಟುಂಬಗಳಿಗೆ ಸಹಾಯ ಮಾಡಿ ಬರುವಾಗ ನನ್ನನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಣದ ಗೋಲ್‌ಮಾಲ್‌: ಮಾಜಿ ಗೃಹ ಸಚಿವನ ವಿರುದ್ಧ ಕೊನೆಗೂ ಕ್ರಿಮಿನಲ್‌ ಕೇಸ್‌ ದಾಖಲು
ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ… ಮೃತ ನಟ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ
ಗಂಡನಿಗೆ ಪತ್ನಿಯ ಮೇಲೆ ದೈಹಿಕ ಕಾಮನೆಗಳೇ ಬರದುದಕ್ಕೆ ಕಾರಣಗಳು ಇವೆಲ್ಲಾ ಇರುತ್ತವಮ್ಮಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 4 =
Remember me
