ದಿಯು:ದಂಪತಿಯೊಬ್ಬರು ಪ್ಯಾರಾಸೇಲಿಂಗ್ ಮಾಡುತ್ತಿದ್ದ ವೇಳೆ ಪ್ಯಾರಾಚೂಟ್‌ನ ಹಗ್ಗ ತುಂಡಾದ ಕಾರಣ ದಂಪತಿ ಸಮುದ್ರಕ್ಕೆ ಬಿದ್ದಿರುವ ಭಯಾನಕ ಘಟನೆ ದಿಯುನಲ್ಲಿ ನಡೆದಿದೆ. ಪವರ್‌ ಬೋಟ್‌ಗೆ ಕಟ್ಟಲ್ಪಟ್ಟಿದ್ದ ಹಗ್ಗ ತುಂಡಾದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಇದರ ವಿಡಿಯೋ ಇದೀಗ ವೈರಲ್‌ ಆಗಿದೆ.
ಗುಜರಾತ್‌ ಮೂಲದ ಅಜಿತ್ ಕಥಾಡ್ ಮತ್ತು ಸರಳಾ ಕಥಾಡ್ ದಂಪತಿ ಪ್ಯಾರಾಸೇಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಬಹಳ ಎತ್ತರಕ್ಕೆ ಹಾರಿದ್ದರು. ಪವರ್‌ ಬೋಟ್‌ಗೆ ಕಟ್ಟಲಾಗಿದ್ದ ಹಗ್ಗ ತುಂಡಾಗಿದೆ. ಈ ಹಿನ್ನೆಯಲ್ಲಿ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ.
ಹಗ್ಗ ತುಂಡಾದ ಕೂಡಲೇ ದಂಪತಿ ಚೀರಿಕೊಂಡಿದ್ದಾರೆ. ಆ ಕೂಡಲೇ ನಾಗೋವಾ ಬೀಚ್‌ನಲ್ಲಿ ಪ್ಯಾರಾಸೇಲಿಂಗ್ ಸೇವೆ ನಡೆಸುತ್ತಿರುವ ಖಾಸಗಿ ಸಂಸ್ಥೆ ಪಾಮ್ಸ್ ಅಡ್ವೆಂಚರ್ ಮತ್ತು ಮೋಟಾರ್‌ಸ್ಪೋರ್ಟ್ಸ್‌ನ ಬೀಚ್‌ನಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಅವರನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್‌ ದಂಪತಿ ಲೈಫ್‌ ಜಾಕೆಟ್‌ ಧರಿಸಿದ್ದರು. ಆದ್ದರಿಂದ ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿ ಹೇಳಿವೆ.
ಈ ಭಯಾನಕ ಘಟನೆಯನ್ನು ವಿವರಿಸಿದ ಅವರ ಸಹೋದರ ರಾಕೇಶ್‌, ‘ನನ್ನ ಅಣ್ಣ ಮತ್ತು ಅತ್ತಿಗೆ ತುಂಬಾ ಖುಷಿಯಿಂದ ಪ್ಯಾರಾಸೇಲಿಂಗ್ ಮಾಡುತ್ತಿದ್ದರು. ನಾನು ಕೆಳಗಿನಿಂದ ನೋಡುತ್ತಿದ್ದೆ. ಆದರೆ ಏಕಾಏಕಿ ಹಗ್ಗ ಮುರಿಯಿತು. ನನಗೆ ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ಕೂಡಲೇ ಅವರು ಅತಿ ಎತ್ತರದಿಂದ ಸಮದ್ರಕ್ಕೆ ಬಿದ್ದರು. ನನ್ನ ಉಸಿರೇ ನಿಂತತಾಯಿತು. ಆದರೆ ನಾನು ಅಸಹಾಯಕನಾಗಿದ್ದೆ’ ಎಂದಿದ್ದಾರೆ.
ಇಲ್ಲಿದೆ ನೋಡಿ ಭಯಾನಕ ವಿಡಿಯೋ:
@VisitDiu@DiuTourismUT@DiuDistrict@VisitDNHandDDParasailing Accident,Safety measures in India,and they said very rudely that this is not our responsibility. Such things happens. Their response was absolutely pathetic.#safety#diu#fun#diutourism#accidentpic.twitter.com/doN4vRNdO8— Rahul Dharecha (@RahulDharecha)November 14, 2021
@VisitDiu@DiuTourismUT@DiuDistrict@VisitDNHandDDParasailing Accident,Safety measures in India,and they said very rudely that this is not our responsibility. Such things happens. Their response was absolutely pathetic.#safety#diu#fun#diutourism#accidentpic.twitter.com/doN4vRNdO8

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
