ಚೆನ್ನೈ:ಹೆಣ್ಣುಮಗು ಹುಟ್ಟಿತ್ತೆಂಬ ಕಾರಣಕ್ಕೆ ಆರು ದಿನಗಳ ಶಿಶುವನ್ನು ಖುದ್ದು ತಂದೆ-ತಾಯಿಯೇ ಜೀವಂತ ಸಮಾಧಿ ಮಾಡಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.
ಮುತ್ತುಪಾಂಡಿ (30) ಮತ್ತು ಎಂ.ಕೌಸಲ್ಯ (23) ದಂಪತಿಗೆ ಈಗಾಗಲೇ 4 ಮತ್ತು 2 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೆಯ ಮಗು ಗಂಡಾಗುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಅದು ಕೂಡ ಹೆಣ್ಣು ಹುಟ್ಟಿದ್ದರಿಂದ ಇಂಥದ್ದೊಂದು ಭಯಾನಕ ಕೃತ್ಯ ಎಸಗಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಲೇ ಇರಲಿಲ್ಲ. ಡಿ.21ರಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಮಗು ಹುಟ್ಟಿತ್ತು. ಅದಾದ ಬಳಿ ಕೌಸಲ್ಯ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗಿತ್ತು. ಆರನೆಯ ದಿನ ಅಲ್ಲಿಯೇ ಸಮೀಪದಲ್ಲಿ ಇರುವ ಆಸ್ಪತ್ರೆಯ ನರ್ಸ್, ಮಗುವಿನ ಆರೋಗ್ಯವನ್ನು ವಿಚಾರಿಸಲು ಬಂದಿದ್ದಾರೆ.
ಈ ವೇಳೆ ಮಗು ಇಲ್ಲದಿರುವುದನ್ನು ನೋಡಿ ವಿಚಾರಿಸಿದ್ದಾರೆ. ಅದಕ್ಕೆ ಆಕೆ ಮಗು ಮೃತಪಟ್ಟಿದೆ. ಮನೆಯ ಹಿಂದುಗಡೆ ಸಮಾಧಿ ಮಾಡಿದ್ದೇವೆ ಎಂದಿದ್ದಾಳೆ. ಆದರೆ ತುಂಬಾ ಆರೋಗ್ಯದಿಂದ ಇದ್ದ ಮಗು ಮೃತಪಡಲು ಸಾಧ್ಯವೇ ಇಲ್ಲ ಎಂದು ಅನುಮಾನಗೊಂಡ ನರ್ಸ್‌ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದಾಗಲೂ ಮಗು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ದಂಪತಿ ಹೇಳೀದ್ದಾರೆ. ಆದರೆ ಶಿಶು ಮೃತಪಟ್ಟಿರುವ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡದೇ ಹೂತು ಹಾಕಿದ್ದು ಸಂದೇಹಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.
‘ನಮಗೆ ಕೋಟಿಯಷ್ಟು ಮತಹಾಕಿ, 50-70 ರೂ.ಗೆ ಕ್ವಾರ್ಟರ್‌ ಬಾಟಲ್‌ ತಗೊಂಡು ಎನ್‌ಜಾಯ್‌ ಮಾಡಿ…’

VIDEO: ಅಧಿಕಾರಿಗಳ ಎಡವಟ್ಟಿನಿಂದ ರಾಜ್ಯದತ್ತ ಧಾವಿಸಿ ಬರುತ್ತಿದೆ ‘ಮಹಾ‘ ಜಲಾಶಯದ ನೀರು: ಹೈ ಅಲರ್ಟ್‌ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + five =
Remember me
