ಸ್ವಿಂಟನ್​ (ಲಂಡನ್​):ಕರೊನಾ ವೈರಸ್​ನ ಈ ದಿನಗಳಲ್ಲಿ ಮಾಸ್ಕ್​ಗೆ ಭಾರಿ ಬೇಡಿಕೆ. ಇದೇ ಕಾರಣಕ್ಕೆ  ಬಗೆಬಗೆ ಬಣ್ಣದ, ವಿವಿಧ ವಿನ್ಯಾಸಗಳ ಮಾಸ್ಕ್​ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಷ್ಟೇ ಏಕೆ, ಕೆಲವು ಶ್ರೀಮಂತರು, ಬೆಳ್ಳಿ, ಬಂಗಾರ, ವಜ್ರದ ಮಾಸ್ಕ್​ ಹಾಕಿಕೊಂಡು ಸುದ್ದಿ ಮಾಡಿದ್ದೂ ಇದೆ.
ಆದರೆ ಇಲ್ಲೊಬ್ಬ ಮಾಸ್ಕ್​ ಆಗಿ ಹೆಬ್ಬಾವನ್ನೇ ಬಳಸಿಕೊಂಡಿದ್ದ ಎಂದರೆ ನಂಬುವಿರಾ? ನಂಬಲೇಬೇಕು. ಏಕೆಂದರೆ ಇದು ನಿಜವಾಗಿಯೂ ಇಂಗ್ಲೆಂಡ್‌ನ ಸ್ವಿಂಟನ್​ನಲ್ಲಿ ನಡೆದಿರುವ ಘಟನೆ.
ಸ್ವಿಂಟನ್​ನಿಂದ ಮ್ಯಾಂಚೆಸ್ಟರ್​ಗೆ ಹೊರಟಿರುವ ಬಸ್ಸಿನಲ್ಲಿ ಹೆಬ್ಬಾವನ್ನು ಮಾಸ್ಕ್​ ರೂಪದಲ್ಲಿ ಧರಿಸಿದ ಪ್ರಯಾಣಿಕನನ್ನು ನೋಡಿ ಇತರರು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಈತನ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಹೆಬ್ಬಾವನ್ನು ಕುತ್ತಿಗೆ ಮತ್ತು ಬಾಯಿಗೆ ಮಾಸ್ಕ್​ ರೂಪದಲ್ಲಿ ಸುತ್ತಿಕೊಂಡು ಬಸ್​ ಹತ್ತಿದ್ದ ಈ ಭೂಪನನ್ನು ನೋಡಿದ ಜನ, ಬಹುಶಃ ಇದು ಹಾವಿನ ರೂಪದ ಮಾಸ್ಕ್​ ಇರಬಹುದು ಎಂದುಕೊಂಡು ಸುಮ್ಮನಾಗಿದ್ದರು. ಕೆಲವರು ಆಹಾ! ಎಷ್ಟು ಮಜವಾಗಿದೆ ಎಂದು ಪದೇ ಪದೇ ನೋಡಿ ಖುಷಿಪಟ್ಟಿದ್ದರು.
ಇದನ್ನೂ ಓದಿ:ನಸುಕಿನಲ್ಲಿಯೇ ಯೋಧರಿಂದ ಬೇಟೆ: ಮೂರು ಉಗ್ರರ ಹೊಡೆದುರುಳಿಸಿದ ಸೇನೆ
ಆದರೆ ಈ “ಮಾಸ್ಕ್​” ಚಲಿಸಲು ಆರಂಭಿಸಿದಾಗಲೇ ಗೊತ್ತಾದದ್ದು ಇದು ನಿಜವಾದ ಹೆಬ್ಬಾವೆಂದು. ಅದನ್ನು ನೋಡಿದ ಸಹ ಪ್ರಯಾಣಿಕರು ಒಮ್ಮೆಲೇ ಬೆಚ್ಚಿಬಿದ್ದಿದ್ದಾರೆ. ಕೆಲವರು ಕೂಗಿಕೊಂಡಿದ್ದಾರೆ.
ಸರ್ಕಾರದ ಮಾರ್ಗದರ್ಶನದಂತೆ ಮುಖವನ್ನು ಮುಚ್ಚಿಕೊಳ್ಳಲು ಸರ್ಜಿಕಲ್‌ ಮಾಸ್ಕ್‌, ಬಟ್ಟೆಯನ್ನು ಬಳಸಬಹುದಾಗಿದೆ. ಆದರೆ, ಇದಕ್ಕಾಗಿ ಹಾವುಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರೆ ನಿಜಕ್ಕೂ ನಂಬಲಾಗದು ಎಂದು ಗ್ರೇಟರ್ ಮ್ಯಾಂಚೆಸ್ಟರ್‌ ಸಾರಿಗೆ ಇಲಾಖೆ ಅಧಿಕಾರಿಗಳು ಅಚ್ಚರಿಪಟ್ಟುಕೊಂಡರು. ಈತ ಮಾಸ್ಕ್​​ ನಿಯಮವನ್ನು ಉಲ್ಲಂಘನೆ ಮಾಡಿರುವ ಕಾರಣ, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ ಅಧಿಕಾರಿಗಳು.
ಸುಮ್ಮನಿರದೇ ಇರುವೆ ಬಿಟ್ಟುಕೊಂಡ ಪ್ರೇಮಿಗಳು: ಕೋರ್ಟ್​ನಿಂದ ಬಿತ್ತು ₹50 ಸಾವಿರ ದಂಡ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − seven =
Remember me
