ವಯನಾಡು (ಕೇರಳ):ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡೋದು ಒಂದು, ಬರೋದು ಇನ್ನೊಂದು ಎಂಬ ವಿಷಯ ಹೊಸತೇನಲ್ಲ. ಆದರೆ ಇಲ್ಲೊಂದು ವಿಚಿತ್ರ ಕೇಸ್‌ನಲ್ಲಿ ಪಾಸ್‌ಪೋರ್ಡ್‌ ಕವರ್‌ ಆರ್ಡರ್‌ ಮಾಡಿದ್ರೆ, ಒರಿಜಿನಲ್‌ ಪಾಸ್‌ಪೋರ್ಟೇ ಬಂದಿರುವ ಘಟನೆ ನಡೆದಿದೆ. ಅದೂ ಯಾರದ್ದೋ ಬೇರೆಯವರ ಪಾಸ್‌ಪೋರ್ಟ್‌!
ಇಂಥದ್ದೊದು ಘಟನೆ ನಡೆದಿರುವುದು ಕೇರಳದ ವಯನಾಡಿನ ಕಣಿಯಂಬೆಟ್ಟ ಎಂಬಲ್ಲಿ. ಮಿಥುನ್ ಎಂಬುವವರು ಕಳೆದ ಅಕ್ಟೋಬರ್ 30ರಂದು ಆನ್‌ಲೈನ್‌ನಲ್ಲಿ ತಮ್ಮ ಪಾಸ್‌ಪೋರ್ಟ್‌ಗೆ ಸೂಟ್‌ ಆಗುವ ಕವರ್ ಆರ್ಡರ್ ಮಾಡಿದ್ದಾರೆ. ಅದು ಹೇಳಿದಂತೆಯೇ ನವೆಂಬರ್ 1 ರಂದು ಕೈಸೇರಿದೆ.
ಆದರೆ ಪಾರ್ಸೆಲ್ ತೆರೆದು ನೋಡಿದರೆ ಅವರಿಗೆ ಶಾಕ್‌ ಆಗಿ ಹೋಯಿತು. ಏಕೆಂದರೆ ಅದರಲ್ಲಿ ಪಾಸ್‍ಪೋರ್ಟ್ ಕವರ್ ಏನೋ ಇತ್ತು, ಜತೆಗೆ ಒರಿಜಿನಲ್‌ ಪಾಸ್‌ಪೋರ್ಟ್‌ ಕೂಡ ಇತ್ತು. ತಮ್ಮ ಪಾಸ್‌ಪೋರ್ಟ್‌ ತಮ್ಮ ಬಳಿಯೇ ಇರುವಾಗ ಇದ್ಯಾವ ಹೊಸ ಪಾಸ್‌ಪೋರ್ಟ್‌ ಎಂದು ಗಾಬರಿಬಿದ್ದ ಅವರು ಅದನ್ನು ತೆರೆದು ನೋಡಿದಾಗ ಬೇರೆಯವರ ಒರಿಜಿನಲ‌ ಪಾಸ್‌ಪೋರ್ಟ್‌ ಅದಾಗಿತ್ತು.
ಕೂಡಲೇ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದಾರೆ. ಅವರು ಕ್ಷಮೆ ಕೋರಿದ್ದಾರೆ. ಕೂಡಲೇ ಮಿಥುನ್ ಅವರು ಪಾಸ್‌ಪೋರ್ಟ್‌ ಮಾಲೀಕ ಯಾರು ಎಂಬುದನ್ನು ಪತ್ತೆ ಹಚ್ಚಿ ಅದನ್ನು ತಲುಪಿಸಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ ಮೊಬೈಲ್ ಸಂಖ್ಯೆ ಇಲ್ಲದಿದ್ದರೂ ಹರಸಾಹಸ ಪಟ್ಟು ಅದರ ಮಾಲೀಕರಾಗಿರುವ ತ್ರಿಶೂರ್‌ನ ಮೊಹಮ್ಮದ್ ಸಾಲಿಹ್ ಎಂಬುವವರಿಗೆ ತಲುಪಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ ಮೊಹಮ್ಮದ್‌ ಅವರು ಕೂಡ ಈ ಹಿಂದೆ ಪಾಸ್‌ಪೋರ್ಟ್‌ ಕವರ್‌ ಆರ್ಡರ್‌ ಮಾಡಿದ್ದರು. ಆದರೆ ಅದು ಸರಿ ಕಂಡಿರಲಿಲ್ಲ. ಆದರೆ ಅದನ್ನು ವಾಪಸ್‌ ಕಳುಹಿಸುವಾಗ ತಮ್ಮ ಪಾಸ್‌ಪೋರ್ಟ್‌ ಸಹಿತ ಕಳುಹಿಸಿಬಿಟ್ಟಿದ್ದಾರೆ. ಕವರ್‌ ಅನ್ನು ಈಗ ಮಿಥುನ್‌ ಅವರು ಆರ್ಡರ್‌ ಮಾಡಿದ್ದರಿಂದ ಇಬ್ಬರೂ ಕೇರಳಿಗರೇ ಆಗಿದ್ದರಿಂದ ಕೊರಿಯರ್‌ನವರು ಇವರಿಗೇ ಪಾಸ್‌ಪೋರ್ಟ್‌ ಸಹಿತ ಕಳುಹಿಸಿಬಿಟ್ಟಿದ್ದಾರೆ ಎನ್ನಲಾಗಿದೆ!
VIDEO: ‘ಪವರ್‌ ಸ್ಟಾರ್‌… ಯೇ… ಪವರ್‌ಸ್ಟಾರ್‌’ ಎಂದು ಕರೆದ ಪುಟಾಣಿ: ಪುನೀತ್‌ ರಿಯಾಕ್ಷನ್‌ಗೆ ಅಭಿಮಾನಿಗಳು ಫಿದಾ…

ಡ್ರಗ್ಸ್‌ ಕೇಸ್‌ನಲ್ಲಿ ಶಾರುಖ್‌ ಪುತ್ರ ಸಿಕ್ಕಿಬೀಳ್ತಿದ್ದಂತೆಯೇ ರಾಹುಲ್‌ ಬರೆದರು ಪತ್ರ: ಜಾಲತಾಣದಲ್ಲಿ ಭಾರಿ ವೈರಲ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
