ನವದೆಹಲಿ:ಪ್ರೇಯಸಿಯ ಜತೆ ಅವಳ ಅನುಮತಿ ಮೇರೆಗೆ ಕೆಲವೊಮ್ಮೆ ಲೈಂಗಿಕ ಸಂಪರ್ಕ ನಡೆಸಿದ ಮಾತ್ರಕ್ಕೆ ಪದೇ ಪದೇ ಅವಳು ಅದಕ್ಕೆ ಅನುಮತಿ ಕೊಡುತ್ತಾಳೆ ಎನ್ನುವ ಅರ್ಥ ಕಲ್ಪಿಸಿಕೊಳ್ಳುವಂತಿಲ್ಲ. ವಾಟ್ಸ್​ಆ್ಯಪ್​ನಲ್ಲಿ ಸೆಕ್ಸ್​ಗೆ ಅನುಮತಿ ನೀಡಿ ನಂತರ ಆ ವೇಳೆ ಆಕೆ ಅದಕ್ಕೆ ನಿರಾಕರಿಸಿದರೆ ಆ ವೇಳೆಯೂ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧ ಎಂದು ಹೈಕೋರ್ಟ್​ ಹೇಳಿದೆ.
ವಾಟ್ಸ್​ಆ್ಯಪ್​ ಸಂದೇಶವಾಗಲೀ ಅಥವಾ ಈ ಹಿಂದೆ ನಡೆಸಿದ್ದ ದೈಹಿಕ ಸಂಬಂಧದ ಆಧಾರದ ಮೇಲೆ ಆಕೆಯ ಒಪ್ಪಿಗೆ ಇಲ್ಲದೆಯೇ ಪುನಃ ಸೆಕ್ಸ್​ ಮಾಡಿದರೆ ಅದು ಅಪರಾಧ ಎಂದು ದೆಹಲಿ ಪಟಿಯಾಲಾ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಪತ್ರಕರ್ತ ವರುಣ್ ಹಿರೇಮಠ ವಿರುದ್ಧದ ಅತ್ಯಾಚಾರ ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಕೋರ್ಟ್​ ಈ ತೀರ್ಪು ನೀಡಿದ್ದು, ಆತನಿಗೆ ಜಾಮೀನು ನಿರಾಕರಿಸಿದೆ.
ಯುವತಿಯೊಬ್ಬಳು ನೀಡಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಭಿಪ್ರಾಯವನ್ನು ಕೋರ್ಟ್​ ವ್ಯಕ್ತಪಡಿಸಿದೆ. ಹೋಟೆಲ್​ ಒಂದಕ್ಕೆ ಕರೆದಿದ್ದ ಸ್ನೇಹಿತ ವರುಣ್​ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಯುವತಿ ದೂರಿದ್ದಳು. ಈ ಕೇಸ್​ ದಾಖಲಾಗುತ್ತಲೇ ಆತ ತಲೆ ಮರೆಸಿಕೊಂಡಿದ್ದ. ನಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.
ಈ ಸಂದರ್ಭದಲ್ಲಿ ಆತನ ಪರ ವಕೀಲರು ವಾದ ಮಂಡಿಸುತ್ತಾ, ಈ ಹಿಂದೆ ಇಬ್ಬರೂ ಲೈಂಗಿಕ ಸಂಪರ್ಕ ನಡೆಸಿದ್ದಾರೆ. ಮಾತ್ರವಲ್ಲದೇ ಇನ್‌ಸ್ಟಾಗ್ರಾಂ ಅಥವಾ ವಾಟ್ಸಾಪ್ ಸಂದೇಶಗಳಲ್ಲಿ ಕೂಡ ಆಕೆ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ.
ಆಕೆ ಸ್ವ ಇಚ್ಛೆಯಿಂದ ಆರೋಪಿಯ ಜತೆ ಮಾತನಾಡಿಕೊಂಡೇ ದೆಹಲಿಗೆ ಬಂದಿದ್ದಾಳೆ, ಸಮ್ಮತಿಯ ಮೇರೆಗೆ ಹೋಟೆಲ್‌ನಲ್ಲಿ ವಾಸವಾಗಲು ನಿರ್ಧರಿಸಿದ್ದಾರೆ, ಹೋಟೆಲ್‌ಗೆ ಅಧಿಕೃತ ದಾಖಲೆಗಳನ್ನು ನೀಡಿಯೇ, ವಾಸವಾಗಿದ್ದಾಳೆ. ಈ ವಿಚಾರದಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ, ಇಬ್ಬರ ಅನುಮತಿ ಮೇರೆಗೆ ದೈಹಿಕ ಸಂಪರ್ಕ ನಡೆದಿದೆ ಎಂದು ಹೇಳಿದರು. ಮಾತ್ರವಲ್ಲದೇ ಘಟನೆ ನಂತರ ಆತ ಕ್ಷಮೆ ಕೂಡ ಕೇಳಿದ್ದಾನೆ ಎಂದರು.
ಆದರೆ ಈ ಸಮಯದಲ್ಲಿ ನಾನು ಅನುಮತಿ ಕೊಟ್ಟಿರಲಿಲ್ಲ ಎಂದು ಯುವತಿ ಹೇಳಿದ್ದಳು. ಆದ್ದರಿಂದ ಕೋರ್ಟ್​ ಹಿಂದೆ ನಡೆದಿರುವ ಘಟನೆ ಅಥವಾ ಮೆಸೇಜ್​ಗಳು ಏನೇ ಇದ್ದರೂ ಆ ಕ್ಷಣದಲ್ಲಿ ಯುವತಿಯ ಅನುಮತಿಯಿಲ್ಲದೇ ಸೆಕ್ಸ್​ ಮಾಡಿದರೆ ಅದು ಅಪರಾಧ ಎಂದು ಹೇಳಿ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ವರುಣ್​ನನ್ನು ಈಗ ಪೊಲೀಸರು ಬಂಧಿಸಲಿದ್ದಾರೆ.
ಆಕಾಶದಲ್ಲಿಯೇ ಹುಟ್ಟಿತು ಹೆಣ್ಣುಮಗು: ಬೆಂಗಳೂರಿನ ಯುವತಿಗೆ ಖರ್ಚಿಲ್ಲದೇ ನೆರವೇರಿತು ಹೆರಿಗೆ

https://www.vijayavani.net/s-nyayadevate-patni-iruvagale-innobbala-jate/
ಡಿಎನ್​ಎಯಲ್ಲಿ ಗೊತ್ತಾಯ್ತು ಅಪ್ಪನ 30 ಮಕ್ಕಳ ಭಯಾನಕ ಸತ್ಯ… ತಂಗಿಯಲ್ಲಿ ಒಬ್ಳು ಇವನದ್ದೇ ಲವರ್​!

https://www.vijayavani.net/s-nyayadevate-patni-iruvagale-innobbala-jate/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × three =
Remember me
