ನಿಗ್ಲೋಕ್​ (ಅರುಣಾಚಲ ಪ್ರದೇಶ):ಅರುಣಾಚಲ ಪ್ರದೇಶದ ಈಸ್ಟ್ ಸಿಯಾಂಗ್ ಜಿಲ್ಲೆಯ ನಿಗ್ಲೋಕ್​ನಲ್ಲಿರುವ ಇಂಡಸ್ಟ್ರಿಯಲ್ ಗ್ರೋತ್ ಸೆಂಟರ್​ನಲ್ಲಿ ತಾಳೆ ಎಣ್ಣೆಯ ಕಾರ್ಖಾನೆಯ ಸ್ಥಾಪನೆಗೆ ಪತಂಜಲಿ ಫುಡ್ಸ್ ಲಿಮಿಟೆಡ್ (ಈ ಮೊದಲು ಇದನ್ನು ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಮುಂದಾಗಿದ್ದು, ಅದರ ಶಂಕು ಸ್ಥಾಪನೆಯು ಇಂದು ನೆರವೇರಿತು. ಶ್ರದ್ಧೇಯ ಆಚಾರ್ಯ ಬಾಲಕೃಷ್ಣಜೀ ಮತ್ತು ಅರುಣಾಚಲ ಪ್ರದೇಶದ ಕೃಷಿ ಸಚಿವ ತಾಗೆ ತಾಕಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.
ಅರುಣಾಚಲ ಪ್ರದೇಶದಲ್ಲಿ 9 ಜಿಲ್ಲೆಗಳಲ್ಲಿ 38 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆ ತಾಳೆ ತೋಟವನ್ನು ಕೈಗೊಳ್ಳಲು ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪೆನಿ ಇದಾಗಲೇ ಯೋಜನೆ ರೂಪಿಸಿದೆ. ಈಗಾಗಲೇ ಪಾಸಿಘಾಟ್ ಮತ್ತು ಹೋಲಂಗಿಯಲ್ಲಿ 2 ನರ್ಸರಿಗಳನ್ನು ಸ್ಥಾಪಿಸಲಾಗಿದ್ದು, ಲೋವರ್ ಸಿಯಾಂಗ್ ಜಿಲ್ಲೆಯಲ್ಲಿ ಖೇರಂ, ಎಫ್‌ಟಿಸಿ ಮತ್ತು ದೀಪಾದಲ್ಲಿ ಇನ್ನೂ 3 ನರ್ಸರಿಗಳನ್ನು ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಇದು ರಾಜ್ಯದ ಆರ್ಥಿಕತೆಗೆ ಉತ್ತೇಜನವನ್ನು ನೀಡುತ್ತದೆ ಮತ್ತು ಸ್ಥಳೀಯ ರೈತರ ಆದಾಯವನ್ನೂ ಹೆಚ್ಚು ಮಾಡಿ, ಉದ್ಯೋಗ ಸೃಷ್ಟಿ ಮಾಡಲಿದೆ ಎಂದು ಕಂಪೆನಿ ಹೇಳಿದೆ.

ಸರ್ಕಾರದ NMEO-OP ಯೋಜನೆ ಅಡಿ, ಭಾರತದಲ್ಲಿ 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಎಣ್ಣೆಯ ದೊಡ್ಡ ಪ್ರಮಾಣದ ಕೃಷಿಯನ್ನು ಕೈಗೊಳ್ಳಲು ಪತಂಜಲಿ ಫುಡ್ಸ್ ಯೋಜನೆ ರೂಪಿಸಿದೆ. ಅದರಲ್ಲಿ 3.2 ಲಕ್ಷ ಹೆಕ್ಟೇರ್ ಪ್ರದೇಶವು ಈಶಾನ್ಯ ಪ್ರದೇಶದಲ್ಲಿರುತ್ತದೆ. ಈ ಯೋಜನೆಯಿಂದಾಗಿ ಮುಂದಿನ 30 ವರ್ಷಗಳಲ್ಲಿ ರಾಜ್ಯದ ಆರ್ಥಿಕತೆಗೆ ಬಲ ತುಂಬಲಿದೆ. ವಾರ್ಷಿಕ ಸರಾಸರಿ 7.5 ಲಕ್ಷ ಮೆಟ್ರಿಕ್​ ಟನ್​ ತಾಳೆ ಎಣ್ಣೆ ಉತ್ಪಾದನೆಯ ಗುರಿ ಹೊಂದಲಾಗಿದೆ. ಇದರಿಂದ ವಾರ್ಷಿಕವಾಗಿ ಸುಮಾರು 10,500 ಕೋಟಿ ರೂಪಾಯಿ ವಿದೇಶಿ ವಿನಿಮಯ ಬರಲಿದ್ದು, ಸುಮಾರು 5.8 ಲಕ್ಷ ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಕಂಪೆನಿ ವಿವರಣೆ ನೀಡಿದೆ.
ಪತಂಜಲಿ ಫುಡ್ಸ್, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಗುಜರಾತ್, ಒಡಿಶಾ, ತಮಿಳುನಾಡು, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಅಸ್ಸಾಂ, ಮಿಜೋರಾಂ ಮತ್ತು ತ್ರಿಪುರಾ ಮುಂತಾದ 11 ರಾಜ್ಯಗಳ 55 ಜಿಲ್ಲೆಗಳಲ್ಲಿ ತಾಳೆ ತೋಟವನ್ನು ಹೊಂದಿದ್ದು, ಅತಿದೊಡ್ಡ ತಾಳೆತೋಟ ಹೊಂದಿರುವ ಕಂಪೆನಿಯಾಗಿ ಹೊರಹೊಮ್ಮಿದೆ. ಸುಮಾರು 60 ಸಾವಿರ ಹೆಕ್ಟೇರ್​ ತಾಳೆ ತೋಟಗಳಿದ್ದು, ಸದ್ಯ 43 ಸಾವಿರ ಕೃಷಿ ಕುಟುಂಬಗಳು ಇಲ್ಲಿ ಕೆಲಸ ಮಾಡುತ್ತಿವೆ. 182 ರೈತರ ಮಾಹಿತಿ ಕೇಂದ್ರಗಳು ಮತ್ತು FFB ಖರೀದಿ ಕೇಂದ್ರಗಳನ್ನು ಇದು ಹೊಂದಿದೆ. 22 ರಸಗೊಬ್ಬರ ಗೋಡೌನ್‌ಗಳು ಮತ್ತು 2 ಅತ್ಯಾಧುನಿಕ ಎಣ್ಣೆ ತಾಳೆ ಸಂಸ್ಕರಣಾ ಘಟಕಗಳನ್ನು ಆಂಧ್ರಪ್ರದೇಶದಲ್ಲಿ ಕಂಪೆನಿ ಹೊಂದಿದೆ. (ಏಜೆನ್ಸೀಸ್​)
ಕಾಂಗ್ರೆಸ್​ ಪಕ್ಷಕ್ಕೆ ಮಾಜಿ ಶಾಸಕ ಲಕ್ಷ್ಮೀನಾರಾಯಣ ಗುಡ್​ಬೈ: ಪುನಃ ಬಿಜೆಪಿಯ ಕೈಹಿಡಿಯಲು ನಿರ್ಧಾರ

12 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಮೊಬೈಲ್​ ಬ್ಯಾನ್​ ಆಗೋದು ನಿಜನಾ? ಸಚಿವರು ಹೇಳಿದ್ದೇನು ನೋಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
