ನವದೆಹಲಿ:ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರುತ್ತಿದೆ. ಇದೇ ಕಾರಣಕ್ಕೆ ಹಲವಾರು ಕಡೆಗಳಲ್ಲಿ ವಿಧವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವರು ತೀವ್ರ ಸ್ವರೂಪದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟಯರ್‌ಗಳಿಗೆ ಬೆಂಕಿ ಇಡುತ್ತಿದ್ದಾರೆ, ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ಕಡೆಗಳಲ್ಲಿ ಹೀಗೆ ದಿನೇ ದಿನೇ ಪೆಟ್ರೋಲ್‌ ದರ ಹೆಚ್ಚಾದರೆ ಬಡವರು ತಮ್ಮ ಕಾರುಗಳಿಗೆ ಪೆಟ್ರೋಲ್‌, ಡೀಸೆಲ್‌ ಹಾಕಿಸುವುದು ಹೇಗೆ ಎಂಬ ಮಾತುಗಳನ್ನೂ ಹೇಳುತ್ತಿದ್ದಾರೆ! ಕೆಲವು ರಾಜ್ಯಗಳಲ್ಲಂತೂ ಪೆಟ್ರೋಲ್‌ ದರ 100ರ ಆಸುಪಾಸು ಬಂದಿರುವ ಕಾರಣ, ಅಲ್ಲಿಯ ಜನತೆ ಹೈರಾಣಾಗಿ ಹೋಗಿದ್ದಾರೆ.
ಸಾರ್ವಜನಿಕ ವಾಹನಗಳಲ್ಲಿ ಓಡಾಡಿ, ಕಾರು, ಬೈಕು ಏಕೆ ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ. ಈಗ ಎಲೆಕ್ಟ್ರಿಕ್‌ ವಾಹನಗಳು ಬಂದಿದ್ದು ಅದನ್ನು ಖರೀದಿ ಮಾಡಿ ಎಂದು ಉಚಿತ ಸಲಹೆಗಳನ್ನೂ ಕೊಡುತ್ತಿದ್ದಾರೆ. ಆದರೆ ಎಲ್ಲೆಡೆ ಸಾರ್ವಜನಿಕ ವಾಹನಗಳು ಲಭ್ಯವಿರಬೇಕಲ್ಲ? ಪೆಟ್ರೋಲ್‌ ಬೈಕ್‌, ಕಾರು ಕೊಂಡರೆ ಈಗಿರುವ ವಾಹನಗಳ ಗತಿಯೇನು ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
There is a solution for every problem!!!#PetrolPricepic.twitter.com/Ld2tgYrvK8
— DrSyed Md Sabir 🇮🇳 (@drsabirsyed)March 3, 2021

ಹೀಗೆ ಎಲ್ಲರೂ ಆಕ್ರೋಶವನ್ನು ಬೇರೆ ಬೇರೆ ರೀತಿಯಲ್ಲಿ ಹೊರ ಹಾಕುತ್ತಿದ್ದರೆ, ಇಲ್ಲೊಬ್ಬ ಆಸಾಮಿ ಮಾತ್ರ ಇದಕ್ಕೊಂದು ಉಪಾಯ ಕಂಡುಕೊಂಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಕೆಲವರು ಇದು ಪ್ರತಿಭಟನೆಯೋ, ಉಪಾಯವೋ ಎಂದೂ ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ ಈತ ಮಾಡಿರುವ ಉಪಾಯ ಎಂದರೆ, ಕಾರಿನ ಪಾರ್ಟ್‌ಗಳನ್ನು ತೆಗೆದು ಅದರ ಮೇಲೆ ಗಿಡಗಳನ್ನು ಬೆಳೆದಿದ್ದಾನೆ. ಪೆಟ್ರೋಲ್‌ ಬೆಲೆ ಏರಿಕೆಯಾದ್ರೇನು? ಎಲ್ಲದಕ್ಕೂ ಸೊಲ್ಯೂಷನ್‌ ಇದೆ ಎಂದು ಹಾಕಿಕೊಂಡಿರುವ ಆತ, ನೀವೂ ಹೀಗೆ ಮಾಡಿ. ಕಾರು, ಬೈಕು ಬಿಡಿ ಎಂದು ಪರೋಕ್ಷವಾಗಿ ಹೇಳಿದ್ದಾನೆ.
ಒಟ್ಟಿನಲ್ಲಿ ಇದೊಂದು ರೀತಿಯಲ್ಲಿ ಪ್ರತಿಭಟನೆಯೇ ಆಗಿದ್ದರೂ ಅನೇಕ ಮಂದಿ ನಾವೂ ಹೀಗೆ ಮಾಡುತ್ತೇವೆ ಎಂದಿದ್ದರೆ, ಇನ್ನು ಕೆಲವರು ಪುನಃ ಪೆಟ್ರೋಲ್‌, ಡೀಸೆಲ್‌ ಏರಿಕೆ ವಿರುದ್ಧ ಕಿಡಿ ಕಾರಿದ್ದಾರೆ.
ಪಲ್ಟಿಯಾದ ಲಾರಿ, ರಸ್ತೆ ತುಂಬಾ ಈರುಳ್ಳಿ… ಚಾಲಕ ಮಾತ್ರ ನಿಶ್ಚಿಂತೆ! ಫೋಟೋದಲ್ಲೂ ‘ರಾಗಾ’ನ ಹುಡುಕಿದ್ರು ಕಮೆಂಟಿಗರು!

20 ವರ್ಷಗಳ ಹಿಂದೆ ಪಾಕ್‌ ಗಡಿಹೊಕ್ಕ ಮೂಕ ಬಾಲಕಿಯ ಕಥೆಯಿದು… ಕೊನೆಗೂ ಸಿಕ್ಕಿತು ಅಮ್ಮನ ಮನೆ… ಕಣ್ಣೀರಧಾರೆ…

ಬಾಗಲಕೋಟೆ ಬಳಿ ಭೀಕರ ಅಪಘಾತ: ಮದುವೆಗೆ ಹೋದವರು ಬೆಂಕಿಯಲ್ಲಿ ದಹನವಾದರು

ಅವನ ಮದುವೆಯಾದ್ರೆ ನನ್ನ ಕೊಲೆಯಾಗುತ್ತೆ, ಆಗದಿದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗತ್ತೆ! ಯಾವ ದಾರಿ ಆಯ್ಕೆ ಮಾಡಲಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 1 =
Remember me
