ತಿರುವನಂತಪುರ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ಕಚೇರಿಗಳ ಮೇಲೆ ಎನ್​ಐಎ ದಾಳಿಯನ್ನು ಖಂಡಿಸಿ ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕೇರಳದಲ್ಲಿ ಬಂದ್​ಗೆ ಕರೆ ನೀಡಿದೆ. ಈ ಕ್ರಮಕ್ಕೆ ಕೇರಳ ಹೈಕೋರ್ಟ್​ ಕೆಂಡಾಮಂಡಲವಾಗಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪಿಎಫ್‌ಐ ಸಂಘಟನೆಗಳು ಇಸ್ಲಾಂ ಧರ್ಮದ ತೀವ್ರವಾದಿ ಸಂಘಟನೆಗಳಾಗಿವೆ. ಆದರೆ ಈ ಸಂಘಟನೆಗಳನ್ನು ಏಕೆ ಈವರೆಗೆ ನಿಷೇಧಿಸಲಾಗಿಲ್ಲ ಎಂದು ಕಳೆದ ಮೇ ತಿಂಗಳಿನಲ್ಲಿ ವಿಚಾರಣೆಯೊಂದರ ವೇಳೆ ಕೇರಳ ಹೈಕೋರ್ಟ್ ಪ್ರಶ್ನಿಸಿತ್ತು. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇವುಗಳ ಮೇಲೆ ನಡೆಸಿರುವ ದಾಳಿಗೆ ಸಂಬಂಧಿಸಿದಂತೆ ನಡೆಸುತ್ತಿದ್ದ ವಿಚಾರಣೆ ವೇಳೆ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಇದೀಗ ಪಿಎಫ್​ಐ ಪ್ರತಿಭಟನೆ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಕೋರ್ಟ್​ ದೂರು ದಾಖಲಿಸಿಕೊಂಡು, ಸಂಘಟನೆಯನ್ನು ತರಾಟೆಗೆ ತೆಗೆದುಕೊಂಡಿದೆ. ‘ಯಾರೂ ಅನುಮತಿಯಿಲ್ಲದೆ ರಾಜ್ಯದಲ್ಲಿ ಬಂದ್‌ಗೆ ಕರೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಇದಾಗಲೇ ಹಲವು ತೀರ್ಪುಗಳಲ್ಲಿ ಕೋರ್ಟ್​ಗಳು ಹೇಳುತ್ತಲೇ ಬಂದಿವೆ. ಹೀಗಿರುವಾಗ ಪಿಎಫ್​ಐ ಹೇಗೆ ಪ್ರತಿಭಟನೆ ಮಾಡಿ ಬಂದ್​ಗೆ ಕರೆ ನೀಡಿದೆ’ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ‘ಕೋರ್ಟ್​ ಆದೇಶವನ್ನು ಉಲ್ಲಂಘನೆ ಮಾಡಿರುವ ಈ ಸಂಘಟನೆ ಈಗ ನ್ಯಾಯಾಂಗ ನಿಂದನೆಯನ್ನು ಎದುರಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಎ.ಕೆ.ಜಯಶಂಕರನ್​ ನಂಬಿಯಾರ್​ ನೇತೃತ್ವದ ಪೀಠ ಹೇಳಿದೆ.
‘ಪಿಎಫ್‌ಐ ಮತ್ತು ಎಸ್‌ಡಿಪಿಐ ದೇಶಾದ್ಯಂತ ತೀವ್ರವಾದದ ಸಿದ್ಧಾಂತಗಳನ್ನು ಪ್ರಚುರ ಮಾಡುವುದರಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಾಗಿವೆ. ಈ ಸಂಘಟನೆಗಳು ಭಾರತದ ಹೊರಗೆ ಸಹ ಬೇರುಗಳನ್ನು ಹೊಂದಿವೆ. ದಬ್ಬಾಳಿಕೆ ಮತ್ತು ಬೆದರಿಕೆಯ ಮೂಲಕ ಅವರು ಇತರ ಸಮುದಾಯದ ಜನರನ್ನು ಇಸ್ಲಾಂಗೆ ಮತಾಂತರಿಸುವಲ್ಲಿ ತೊಡಗಿದ್ದಾರೆ’ ಎಂದು ಕಳೆದ ಬಾರಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ. ಹರಿಪಾಲ್ ಅಭಿಪ್ರಾಯಪಟ್ಟಿದ್ದರು.(ಏಜೆನ್ಸೀಸ್​)
ರಂಗೇರಿದ ಅಧ್ಯಕ್ಷ ಖುರ್ಚಿ ಫೈಟ್​: ಎರಡೂ ಹುದ್ದೆ ಇರಲಿ ಎಂದ ಸಿಎಂ ಗೆಹ್ಲೋಟ್​ಗೆ ಶಾಕ್​ ಕೊಟ್ಟ ರಾಹುಲ್​ಗಾಂಧಿ!
ತಂದೆಯ ಆಸ್ತಿಯನ್ನು ಮಕ್ಕಳ ಸಹಿ ಇಲ್ಲದೇ ಮಾರಾಟ ಮಾಡಿದರೆ ಕಾನೂನಿನಡಿ ಇರುವ ಅವಕಾಶಗಳೇನು?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:sixteen + nineteen =
Remember me
