ಮುಂಬೈ:ಬಾಲಕಿಯೊಬ್ಬಳನ್ನು ದುರುಗುಟ್ಟಿಕೊಂಡು ನೋಡುತ್ತಾ, ಆಕೆಯನ್ನು ಹಿಂಬಾಲಿಸುವುದೂ ಅಲ್ಲದೇ ಪದೇ ಪದೇ ಆಕೆಯ ಫೋನ್​ ನಂಬರ್​ ಕೇಳುತ್ತಿದ್ದ ಇಬ್ಬರು ಯುವಕರಿಗೆ ಮುಂಬೈ ಕೋರ್ಟ್​ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
ವಾಹಿದ್​ ಸಯ್ಯದ್​ ಮತ್ತು ನೌಷಾದ್​ ರಹಿ ಎಂಬುವವರು ಶಿಕ್ಷೆಗೆ ಗುರಿಯಾದವರು. ಈ ಪ್ರಕರಣ 2013ರಲ್ಲಿ ನಡೆದಿತ್ತು. ಆ ಸಮಯದಲ್ಲಿ 17 ವರ್ಷದ ಬಾಲಕಿಗೆ ಈ ಇಬ್ಬರು ಕಿರುಕುಳ ನೀಡುತ್ತಿದ್ದರು. ಸ್ನೇಹಿತೆಯರ ಜತೆ ಮನೆಗೆ ತೆರಳುತ್ತಿದ್ದ ವೇಳೆ ಬಾಲಕಿಯನ್ನು ಹಿಂಬಾಲಿಸಿದ್ದ ಯುವಕರು ಆಕೆಗೆ ಅಶ್ಲೀಲ ಶಬ್ದಗಳಿಂದ ಚುಡಾಯಿಸಿದ್ದಾರೆ. ಈ ಇಬ್ಬರು ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದುದನ್ನು ಗಮನಿಸಿದ ಬಾಲಕಿ ಸಮೀಪ ಇರುವ ವಡಾ ಪಾವ್ ಸ್ಟಾಲ್‌ನಲ್ಲಿ ನಿಂತುಕೊಂಡಿದ್ದಳು. ಅಲ್ಲಿಯೂ ಹಿಂಬಾಲಿಸಿದ ಯುವಕರು ಆಕೆಗೆ ಚುಡಾಯಿಸಿದ್ದೂ ಅಲ್ಲದೇ ಮೊಬೈಲ್ ಸಂಖ್ಯೆಗಳನ್ನು ಕೇಳತೊಡಗಿದರು.
ನಂತರ, ಬಾಲಕಿ ಅಲ್ಲಿಂದ ಮುಂದೆ ಹೋದಾಗಲೂ ಫಾಲೋ ಮಾಡಿಕೊಂಡು ಬಂದರು. ಒಂದು ವೇಳೆ ಮೊಬೈಲ್​ ಸಂಖ್ಯೆ ನೀಡದೇ ಹೋದರೆ ದಿನವೂ ಹೀಗೆಯೇ ತೊಂದರೆ ಕೊಡುವುದಾಗಿ ಹೇಳಿದರು. ನಂತರ ಅಲ್ಲಿಂದ ವೇಗವಾಗಿ ಹೋಗಿ ತಮ್ಮನಿಗೆ ಬಾಲಕಿ ವಿಷಯ ತಿಳಿಸಿದಳು. ತಮ್ಮ ಆ ಯುವಕರ ಬಳಿ ಹೋಗಿ ಗಲಾಟೆ ಮಾಡಿದಾಗ ಅಲ್ಲಿಯೇ ಇದ್ದ ಸ್ಥಳೀಯರು ಆ ಯುವಕರನ್ನು ಥಳಿಸಿದರು.
ನಂತರ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯಲ್ಲಿ ದೂರು ದಾಖಲಾಯಿತು. ಸುದೀರ್ಘ ವಿಚಾರಣೆ ನಡೆದ ಬಳಿಕ ಇದೀಗ ಕೋರ್ಟ್ ಇಬ್ಬರೂ ತಪ್ಪಿತಸ್ಥರು ಎಂದು ತಿಳಿಸಿದ್ದು ಒಂದು ವರ್ಷ ಶಿಕ್ಷೆ ಮತ್ತು ದಂಡ ವಿಧಿಸಿದೆ.
VIDEO: ಪತಿಯಿಂದಲೇ ಕೊಲೆಯಾದ ಖ್ಯಾತ ಬ್ಲಾಗರ್: ಕೈಕಟ್ಟಿ ನಾಲ್ಕನೇ ಮಹಡಿಯಿಂದ ತಳ್ಳಿ ಹತ್ಯೆ!

VIDEO: ಹಲೋ… ನನಗೀಗ ಒಂದು ತಿಂಗಳು, ನನ್ನ ಪರಿಚಯ ಹೀಗಿದೆ… ಇನ್​ಸ್ಟಾಗ್ರಾಂನಲ್ಲಿ ಹೆಸರು ರಿವೀಲ್​ ಮಾಡಿದ ಸಂಜನಾ ಪುತ್ರ…

ಮದ್ವೆಯಾಗಿ ಪತ್ನಿಯರನ್ನು ಮಾರಾಟ ಮಾಡುತ್ತಿದ್ದ ಭಯಾನಕ ಕ್ರಿಮಿನಲ್! 12 ಮಂದಿಗೆ ಮೋಸ ಮಾಡಿದ್ದವ ಕೊನೆಗೂ ಸಿಕ್ಕಿಬಿದ್ದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − seven =
Remember me
