ನವದೆಹಲಿ:ಕೆಲ ವರ್ಷಗಳಿಂದ ಬಹುತೇಕ ವಹಿವಾಟಿಗೆ ಫೋನ್‌-ಪೇ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ದಿಢೀರ್‌ ಎಂದು ಅತಿ ಸುಲಭದಲ್ಲಿ ಈ ಆ್ಯಪ್‌ ಮೂಲಕ ಹಣವನ್ನು ವರ್ಗಾಯಿಸುವ ಹಿನ್ನೆಲೆಯಲ್ಲಿ ಇದರ ಬಳಕೆ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.
ಆದರೆ ಇದೀಗ ಫೋನ್‌ ಪೇ ವಹಿವಾಟುದಾರರಿಗೆ ಎಕ್ಸ್‌ಟ್ರಾ ಚಾರ್ಜ್‌ ಮಾಡಲಿದೆ. ಸದ್ಯ ಮೊಬೈಲ್‌ ರೀಚಾರ್ಜ್‌ ಮಾಡಿದರೆ ಹೆಚ್ಚುವರಿಯಾಗಿ ಹಣವನ್ನು ಪಾವತಿ ಮಾಡಬೇಕಿದೆ.50 ರೂಪಾಯಿ ಮೇಲ್ಪಟ್ಟು ಮೊಬೈಲ್ ಚಾರ್ಜ್ ಮಾಡಿದರೆ ಆ ವಹಿವಾಟಿನ ಮೇಲೆ 1ರಿಂದ 2 ರೂಪಾಯಿ ಪ್ರೊಸೆಸಿಂಗ್ ಶುಲ್ಕ ತಗಲುತ್ತದೆ. 50 ರೂಪಾಯಿ ಒಳಗಿನ ಮೊಬೈಲ್ ರೀಚಾರ್ಜ್​ ಮಾಡಿದಲ್ಲಿ ಶುಲ್ಕ ಇರುವುದಿಲ್ಲ. ಆದರೆ 50ರಿಂದ 100 ರೂಪಾಯಿ ಮಧ್ಯೆ ರೀಚಾರ್ಜ್ ಮಾಡಿಸಿದರೆ 1 ರೂಪಾಯಿ ಶುಲ್ಕ ವಿಧಿಸುತ್ತದೆ. 100 ರೂಪಾಯಿ ಮೇಲ್ಪಟ್ಟು ಮೊಬೈಲ್​ ರೀಚಾರ್ಜ್ ಮಾಡಿಸಿದರೆ ಫೋನ್​ಪೇ ಗ್ರಾಹಕರು ರೂ. 2 ವಿಧಿಸುತ್ತದೆ.
ಸದ್ಯ ಇದು ಸಣ್ಣ ಪ್ರಮಾಣದ ಪ್ರಯೋಗ ಎಂದು ಕಂಪೆನಿ ಹೇಳಿದೆ. ಕ್ರೆಡಿಟ್​ ಕಾರ್ಡ್ ಮೂಲಕ ಪಾವತಿಗೆ ಇತರ ಪ್ಲಾಟ್​ಫಾರ್ಮ್​ನಂತೆಯೇ ಫೋನ್​ಪೇ ಕೂಡ ದರ ವಿಧಿಸಲಿದೆ.
ಥರ್ಡ್​ ಪಾರ್ಟಿ ಆ್ಯಪ‌ (ಅಪ್ಲಿಕೇಷನ್) ಪೈಕಿ ಯುಪಿಐ ವಹಿವಾಟಿನಲ್ಲಿ ಫೋನ್​ಪೇ ದೊಡ್ಡ ಮಟ್ಟದ ಪಾಲು ಹೊಂದಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಇದು ಸುಮಾರು 165 ಕೋಟಿ ಯುಪಿಐ ವಹಿವಾಟು ಮಾಡಿದೆ. ಫ್ಲಿಪ್​ಕಾರ್ಟ್​ನ ಮಾಜಿ ಅಧಿಕಾರಿಗಳಾದ ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬುರ್ಜಿನ್ ಎಂಜಿನೀರ್ ಸೇರಿ 2015ರಲ್ಲಿ ಫೋನ್​ಪೇ ಸ್ಥಾಪಿಸಿದ್ದು, ಸದ್ಯ ಇದಕ್ಕೆ ಸುಮಾರು 30 ಕೋಟಿ ನೋಂದಾಯಿತ ಬಳಕೆದಾರರಿದ್ದಾರೆ.
ಮೋಹಿನಿ ವೇಷ ತೊಟ್ಟು ಹೆದರಿಸಲು ಹೋಗಿ ಭಯಾನಕವಾಗಿ ಸಾವು ಕಂಡ ಯುವತಿ!

20 ವರ್ಷ ಮರದಲ್ಲಿ ಕಾದುಕುಳಿತು ಉದ್ಯಮಿಯ ಬಲಿಪಡೆದ ಗುಂಡು- ನಂಬಲಸಾಧ್ಯ ಘಟನೆಯಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
