ಲಖನೌ:ಈರುಳ್ಳಿ ತುಂಬಿದ ಲಾರಿಯೊಂದು ರಸ್ತೆ ಬದಿ ಪಲ್ಟಿ ಹೊಡೆದು ಅದರಲ್ಲಿದ್ದ ಈರುಳ್ಳಿಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದರೆ ಆ ಚಾಲಕನಿಗೆ ಹೇಗಾಗಬೇಡ? ಭಯದಿಂದ, ಲಗುಬಗೆಯಿಂದ, ಈರುಳ್ಳಿಗಳನ್ನು ತುಂಬಿಸಿಕೊಳ್ಳುವಲ್ಲಿ ನಿರತ ಆಗುತ್ತಾನೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರಲ್ಲವೆ?
ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋ ನೋಡಿ, ಲಾರಿ ಚಾಲಕ ಮಾತ್ರ ಪಲ್ಟಿಯಾಗಿರುವ ಲಾರಿಯ ಸಮೀಪವೇ ಮಲಗಿ ನಿಶ್ಚಿಂತೆಯಿಂದ ಖುಷಿಯಲ್ಲಿ ಯಾರಿಗೋ ಫೋನ್‌ ಮಾಡುತ್ತಿದ್ದಾನೆ! ಇದನ್ನು ನೋಡಿರುವ ಟ್ವಿಟ್ಟಿಗರೊಬ್ಬರು ಫೋಟೋ ತೆಗೆದು ಶೇರ್‌ ಮಾಡಿಕೊಂಡಿದ್ದಾರೆ.

ಐಪಿಎಸ್​ ಅಧಿಕಾರಿ ಅರುಣ್​ ಬೇಥರಾ ಶೇರ್​ ಮಾಡಿರುವ ಈ ಟ್ವಿಟರ್‌ ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕಮೆಂಟ್‌ಗಳ ಜತೆ ವೈರಲ್‌ ಆಗಿದೆ. ಅರುಣ್‌ ಅವರು, ಈ ಫೋಟೋ ನೋಡಿದರೆ ಆ ಚಾಲಕ ಯಾರ ಜತೆ ಮಾತನಾಡುತ್ತಾ ಇರಬಹುದು ಎಂದು ಊಹಿಸುವುದೇನೂ ಕಷ್ಟವಲ್ಲ ಎಂದು ತಮಾಷೆ ಮಾಡಿದ್ದಾರೆ. ಏಕೆಂದರೆ ಯುವಕನಾಗಿರುವ ಚಾಲಕ ನಿಶ್ಚಿಂತೆಯಿಂದ ಖುಷಿಖುಷಿಯಿಂದ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದಾಗ ಅತ್ತ ಕಡೆ ಯಾರು ಇರಬಹುದು ಎಂದು ಎಲ್ಲರೂ ಊಹಿಸಬಹುದು ಎನ್ನುವುದು ಅವರ ಮಾತು.
This is true..pic.twitter.com/012nfc7OsQ— नयन दत्ता (@NayaN2347)March 2, 2021
This is true..pic.twitter.com/012nfc7OsQ
ಆದರೆ ಈ ಟ್ವಿಟರ್‌ಗೆ ಕಮೆಂಟ್‌ ಹಾಕಿರುವವರು ಮಾತ್ರ ಬೇರೆಯದ್ದೇ ವರ್ಣನೆ ಮಾಡಿದ್ದಾರೆ! ದಿನನಿತ್ಯವೂ ಟ್ರೋಪ್‌ ಪುಟದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಈ ಫೋಟೋಗೆ ಲಿಂಕ್‌ ಮಾಡಿದ್ದಾರೆ ಕೆಲವರು. ಉಲ್ಟಾ ಆಗಿರುವ ಲಾರಿ ಕಾಂಗ್ರೆಸ್‌ ಅಂತೆ, ನಿಶ್ಚಿಂತೆಯಿಂದ ಮಾತನಾಡುತ್ತಿರುವವರು ’ರಾಗಾ’ ಎಂದು ಬರೆದು ಇನ್ನಷ್ಟು ಟ್ರೋಲ್‌ ಮಾಡುತ್ತಿದ್ದಾರೆ. ಅಸಲಿ ಫೋಟೋಗಿಂದ ಈ ಟ್ರೋಲ್‌ ಮಾಡಿರುವ ಫೋಟೋವೇ ಹೆಚ್ಚು ವೈರಲ್‌ ಆಗುತ್ತಿರುವುದು ಸೋಜಿಗ!
20 ವರ್ಷಗಳ ಹಿಂದೆ ಪಾಕ್‌ ಗಡಿಹೊಕ್ಕ ಮೂಕ ಬಾಲಕಿಯ ಕಥೆಯಿದು… ಕೊನೆಗೂ ಸಿಕ್ಕಿತು ಅಮ್ಮನ ಮನೆ… ಕಣ್ಣೀರಧಾರೆ…
ಬಾಗಲಕೋಟೆ ಬಳಿ ಭೀಕರ ಅಪಘಾತ: ಮದುವೆಗೆ ಹೋದವರು ಬೆಂಕಿಯಲ್ಲಿ ದಹನವಾದರು
ಅವನ ಮದುವೆಯಾದ್ರೆ ನನ್ನ ಕೊಲೆಯಾಗುತ್ತೆ, ಆಗದಿದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗತ್ತೆ! ಯಾವ ದಾರಿ ಆಯ್ಕೆ ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
