ಸಾಗರದ ಆಳದ ಪ್ರಪಂಚವೇ ರೋಚಕ. ಅಲ್ಲಿ ಅದೆಷ್ಟು ವೈವಿಧ್ಯಮಯ ಜೀವರಾಶಿಗಳು ಇವೆಯೋ ಬಲ್ಲವರಿಲ್ಲ. ಅಗೆದಷ್ಟೂ ಬಗೆದಷ್ಟೂ ಕೌತುಕವನ್ನು ಸಾಗರದ ಆಳ ಹುದುಗಿಸಿಕೊಂಡಿದೆ. ಇಲ್ಲಿರುವ ಜೀವ ವೈವಿಧ್ಯವನ್ನು ತಿಳಿದಷ್ಟೂ ಮತ್ತಷ್ಟು ಹೊಸಹೊಸ ಜೀವಗಳು ಪ್ರತ್ಯಕ್ಷವಾಗುತ್ತಿವೆ.ಅಂಥದ್ದೇ ಒಂದು ರೋಚಕ ದೃಶ್ಯ ಇತ್ತೀಚೆಗೆ ಕಂಡುಬಂದಿದೆ. ಇದು ಗುಲಾಬಿ ಬಣ್ಣದ ಡಾಲ್ಫಿನ್‍. ಡಾಲ್ಫಿನ್‌ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ಕಪ್ಪುಬಣ್ಣದ ನೆಗೆನೆಗೆದು ಬರುವ ಸಾಗರಜೀವಿ. ಕೆಲವೊಮ್ಮೆ ನೀಲಿ ಬಣ್ಣದ ಡಾಲ್ಫಿನ್‌ಗಳೂ ಕಾಣುವುದಿದೆ. ಆದರೆ ಇದೀಗ ಇದೇ ಡಾಲ್ಫಿನ್‌ಗೆ ಗುಲಾಬಿ ಬಣ್ಣವನ್ನು ಬಳಿದಿದ್ದಾರೋ ಎಂಬಂತೆ ಗುಲಾಬಿಯ ಡಾಲ್ಫಿನ್‌ ಒಂದು ಸಮದ್ರದಲ್ಲಿ ಹಾರುತ್ತಾ ಬಂದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.ಈ ಅದ್ಭುತವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್‌ ನಂದಾ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಎಲ್ಲಿ ಕಂಡುಬಂದಿರುವುದು ಎಂಬ ಮಾಹಿತಿ ವಿಡಿಯೋದಲ್ಲಿ ಇಲ್ಲ. ಇದುವರೆಗೂ ನಾವು ನೀಲಿ ಮತ್ತು ಕಪ್ಪು ಡಾಲ್ಫಿನ್‍ಗಳನ್ನು ಮಾತ್ರ ಕಂಡಿದ್ದೆವು. ಪಿಂಕ್ ಡಾಲ್ಫಿನ್ ಇರುವ ಬಗ್ಗೆ ಕಲ್ಪನೆಯೂ ಇರಲಿಲ್ಲ ಎಂದು ಕಮೆಂಟಿಗರು ಹೇಳಿದ್ದಾರೆ.ನೀವೂ ನೋಡಿ ವಿಡಿಯೋ:
If you haven’t seen a pink dolphin💕(Credit in the video)pic.twitter.com/PBZWfmosm0— Susanta Nanda (@susantananda3)August 19, 2021
If you haven’t seen a pink dolphin💕(Credit in the video)pic.twitter.com/PBZWfmosm0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
