ಗಾಜಿಯಾಬಾದ್ (ಉತ್ತರ ಪ್ರದೇಶ):ಪಕ್ಕಾ ಸಸ್ಯಾಹಾರಿ ಮಹಿಳೆಯೊಬ್ಬರಿಗೆ ಚಿಕನ್​ ಪಿಜ್ಜಾ ಪಾರ್ಸೆಲ್​ ಕಳುಹಿಸಿ ಇದೀಗ ಒಂದು ಕೋಟಿ ರೂಪಾಯಿ ಪರಿಹಾರವನ್ನು ಪಿಜ್ಜಾ ಕಂಪೆನಿ ತಲೆ ಮೇಲೆ ಹಾಕಿಕೊಂಡಿದೆ.
ಮನೆಗೆ ಬಂದ ಪಾರ್ಸೆಲ್​ ನೋಡಿ ವೆಜ್​ ಪಿಜ್ಜಾ ಬಂತೆಂದು ತಿಳಿದು ಚಿಕನ್​ ತಿಂದ ಮಹಿಳೆ ಗರಂ ಆಗಿದ್ದು, ಪಿಜ್ಜಾ ಕಂಪೆನಿ ವಿರುದ್ಧ ಒಂದು ಕೋಟಿ ರೂಪಾಯಿ ಪರಿಹಾರಕ್ಕೆ ದಾವೆ ಹೂಡಿದ್ದಾರೆ. ಅಷ್ಟೊಂದು ಪರಿಹಾರವನ್ನು ನೀಡಲು ಕೋರ್ಟ್​ ಆದೇಶ ಮಾಡದೇ ಹೋದರೂ, ಪಿಜ್ಜಾ ಕಂಪೆನಿಯ ಹಣೆಬರಹ ಸರಿಯಿಲ್ಲದಿದ್ದರೆ ಏನು ಬೇಕಾದರೂ ಆದೀತು!
ಇಂಥದ್ದೊಂದು ಘಟನೆ ನಡೆದಿರುವುದು ಗಾಜಿಯಾಬಾದ್​ನಲ್ಲಿ. ಮಹಿಳೆ ಸಂಪ್ರದಾಯಸ್ಥ ಸಸ್ಯಾಹಾರಿಯಾಗಿದ್ದರು. ಸಮೀಪದ ಮಳಿಗೆಯೊಂದರಿಂದ ಸಸ್ಯಾಹಾರಿ ಪಿಜ್ಜಾ ತರಿಸಿಕೊಂಡಿದ್ದರು. ಆದರೆ ಅರ್ಧ ತಿಂದಾದ ಮೇಲೆ ಅದು ಚಿಕನ್​ ಎನ್ನುವುದು ತಿಳಿದಿದೆ.
ಹುಟ್ಟಿನಿಂದಲೂ ಸಸ್ಯಾಹಾರಿಯಾಗಿರುವ ತನ್ನನ್ನು ಮಾಂಸಾಹಾರಿ ಮಾಡಿದ್ದಕ್ಕೆ ತೀವ್ರವಾಗಿ ಆಕ್ರೋಶಗೊಂಡ ಮಹಿಳೆ ಯರ್ ಮೂಲಕ ಗ್ರಾಹಕ ಹಿತರಕ್ಷಣಾ ಕಾಯ್ದೆಯಡಿ ಅಮೆರಿಕ ಮೂಲಕ ಪಿಜ್ಜಾ ಕಂಪೆನಿಗೆ 1 ಕೋಟಿ ರೂ. ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದಾರೆ.
ಮಾಂಸಾಹಾರ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಬೇಕಿದೆ. ಇದಕ್ಕಾಗಿ ಕೆಲವು ಧಾರ್ಮಿಕ ಕಾರ್ಯಕ್ರಮ ನೆರವೇರಿಸಬೇಕಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಲಿದೆ. ಹೀಗಾಗಿ 1 ಕೋಟಿ ರೂ. ಪರಿಹಾರ ಒದಗಿಸಬೇಕು ಎಂದು ಆಕೆ ಅರ್ಜಿಯಲ್ಲಿ ಹೇಳಿದ್ದಾರೆ.
ರಾಜ್ಯದಲ್ಲೂ ಮತ್ತೆ ಲಾಕ್​ಡೌನ್​ ಆಗತ್ತಾ? ಹಿಂಟ್​ ಕೊಟ್ಟ ಸಿಎಂ ಏನು ಎಚ್ಚರಿಕೆ ಕೊಟ್ಟಿದ್ದಾರೆ ನೋಡಿ…

ಏಳು ಬಾರಿ ಸಂಸದರಾಗಿದ್ದ ಮೋಹನ್​ ಆತ್ಮಹತ್ಯೆ- ಸಾವಿಗೂ ಮನ್ನ ಮೋದಿ, ಅಮಿತ್​ ಷಾರಿಗೆ ಪತ್ರ ಬರೆದಿದ್ದರೆ?

ಲವರ್​ ಜತೆ ಮದುವೆಗೆ ಸಿದ್ಧಳಾಗಿದ್ದ ಸಿಡಿ ಲೇಡಿ: ಉತ್ತರ ಕರ್ನಾಟಕದ ಇಂಜಿನಿಯರಿಂಗ್​ ಯುವತಿಯ ಸ್ಟೋರಿ ಇದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − five =
Remember me
