ನ್ಯೂಯಾರ್ಕ್‌:ಪಿಜ್ಜಾ ಅಂದ್ರೆ ಬಹುತೇಕ ಮಂದಿಗೆ ತುಂಬಾ ಪ್ರೀತಿ. ಅದರಲ್ಲಿ ಈಗಿನ ಮಕ್ಕಳಿಗಂತೂ ಪಿಜ್ಜಾ, ಬರ್ಗರ್‌ ಮೇಲೆ ಅತಿ ಹೆಚ್ಚು ಪ್ರೀತಿ. ಇದನ್ನು ಸಿಕ್ಕಾಪಟ್ಟೆ ತಿನ್ನುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಎಂದು ಹೇಳಿದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಬಾಯಲ್ಲಿ ನೀರೂರಿಸುವವರೇ ಹೆಚ್ಚು. ಅದಕ್ಕಾಗಿಯೇ ಇದರ ಬೆಲೆ ಕೂಡ ಹೆಚ್ಚೇ. ಆದರೂ ಇದನ್ನು ಸವಿಯುವುದು ಎಂದರೆ ಬಹುತೇಕ ಮಂದಿಗೆ ಪ್ರೀತಿ.
ಇಂಥ ಪಿಜ್ಜಾ ಪ್ರಿಯರಿಗೆ ಇಲ್ಲೊಂದು ಗುಡ್‌ ನ್ಯೂಸ್‌ ಕೊಟ್ಟಿದೆ ಪಿಜ್ಜಾ ಹಟ್‌. ಅದೇನೆಂದ್ರೆ ಪಿಜ್ಜಾ ಉಚಿತವಾಗಿ ನೀಡಲಿರುವ ಪಿಜ್ಜಾ ಹಟ್‌, ಇದನ್ನು ತಿಂದರೆ ಐದು ಲಕ್ಷ ರೂಪಾಯಿಗಳನ್ನೂ ನೀಡಲಿದೆ! ಇದೇನು ತಮಾಷೆನಾ ಎಂದುಕೊಂಡಿರಾ? ನಿಜವಾಗಿಯೂ ಇಂಥದ್ದೊಂದು ಆಫರ್‌ ಇದೆ.
ಅಷ್ಟಕ್ಕೂ ಯಾಕೆ ಇಂಥ ಆಫರ್‌ ಕೊಡ್ತಾ ಇದೆ ಅಂದುಕೊಂಡ್ರಾ? ಪಿಜ್ಜಾ ಹಟ್ ಪಿಜ್ಜಾಗಳ ಟೇಸ್ಟ್‌ ಮಾಡುವವನ್ನು ಹುಡುಕುತ್ತಿದೆ. ಹೀಗೆ ಟೇಸ್ಟ್‌ ಮಾಡಿ ಸರಿಯಾದ ಉತ್ತರ ಹೇಳಿದರೆ ಅಂಥವರನ್ನು ರಾಷ್ಟ್ರದ ಅತ್ಯುತ್ತಮ ಸೂಪರ್-ಟೇಸ್ಟರ್ ಎಂಬ ಬಿರುದು ನೀಡಲಾಗುತ್ತದೆ. ಅದಕ್ಕಾಗಿ ಸ್ಟಫ್ಡ್ ಕ್ರಸ್ಟ್ ಪಿಜ್ಜಾಗಳನ್ನು ತಿನ್ನುವವರಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ಟಫ್ಡ್ ಕ್ರಸ್ಟ್ ಪಿಜ್ಜಾಗಳಲ್ಲಿ ಹೊಸ ಮಾದರಿ ಪರಿಚಯಿಸಿರುವ ಕಾರಣ ಅದನ್ನು ಟೇಸ್ಟ್‌ ಮಾಡಿ ಸರಿಯಾದ ಮಾಹಿತಿ ನೀಡಬೇಕಿದೆ. ಅದರಲ್ಲಿ ಏನಾದರೂ ಬದಲಾವಣೆ ಬೇಕೇ ಎಂಬುದನ್ನು ನೋಡಬೇಕಿದೆ. ಇದರ ಜತೆಗೆ, ಚೀಸೀ ಗಾರ್ಲಿಕ್ ಬಟರ್ ಸ್ಟಫ್ಡ್ ಕ್ರಸ್ಟ್ ಮತ್ತು ಪೆಪ್ಪೆರೋನಿ ಹಾಗೂ ಚೀಸ್ ಸ್ಟಫ್ಡ್ ಕ್ರಸ್ಟ್ ಎಂಬ ಹೊಸ ರುಚಿಯನ್ನೂ ಪರಿಚಯಿಸುತ್ತಿದ್ದು, ಇವುಗಳ ಗುಣಮಟ್ಟ, ಟೇಸ್ಟ್‌ ಇತ್ಯಾದಿಗಳನ್ನು ಸರಿಯಾಗಿ ಪರಿಶೀಲಿಸಿ ಹೇಳುವವರಿಗಾಗಿ ಕಂಪೆನಿ ಕಾದಿದೆ.
ಹೀಗೆ ಬಂದ ಅರ್ಜಿಗಳಲ್ಲಿ ಕೆಲವರನ್ನು ಆಯ್ಕೆ ಮಾಡಿ ಪಿಜ್ಜಾ ತಿನ್ನಲು ನೀಡಲಾಗುತ್ತದೆ. ಸರಿಯಾಗಿ ಇದರ ಬಗ್ಗೆ ವಿವರಣೆ ನೀಡಿ, ಬದಲಾವಣೆ ಇತ್ಯಾದಿಗಳನ್ನು ಹೇಳಿದರೆ ಅಂಥವರಿಗೆ ಸೂಪರ್‌ ಟೇಸ್ಟರ್‌ ಬಿರುದು ಜತೆಗೆ ಐದು ಲಕ್ಷ ರೂಪಾಯಿ ನಗದು ಕೂಡ ಸಿಗಲಿದೆ. ಅಂದಹಾಗೆ ಇಂಥದ್ದೊಂದು ಆಫರ್‌ ಇರುವುದು ಇಂಗ್ಲೆಂಡ್‌ನಲ್ಲಿ. ಆದರೆ ಪಿಜ್ಜಾಹಟ್‌ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ.
ಇಲ್ಲಿದೆ ನೋಡಿ ಲಿಂಕ್‌:https://pizzahutprizes.co.uk/
ಬ್ಯೂಟಿ ಕಿಂಗ್‌, ಮದ್ಯಪ್ರಿಯ, ಪ್ರಶಸ್ತಿಗಳ ಸರದಾರ 21 ಕೋಟಿ ರೂ. ಬೆಲೆಯ ಸುಲ್ತಾನ್‌ ಹೃದಯಾಘಾತದಿಂದ ಸಾವು

ಗಂಡನಿಲ್ಲದೇ ಬದುಕಲಾರೆ, ಮನೆ ಮಾರಿ ಸಾಲ ತೀರಿಸಿ- ಮಕ್ಕಳನ್ನು ಉರುಳಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
