ರೋಗವೂ ಇಲ್ಲ, ಲಕ್ಷಣವೂ ಇಲ್ಲ, ಆದರೂ ಐಸಿಯುಗಳಲ್ಲಿ ಲಕ್ಷ ಲಕ್ಷ ಕೊಟ್ಟು ಬೆಡ್‌ ಬುಕಿಂಗ್‌!ಬೆಂಗಳೂರು:ಕರೊನಾ ಸೋಂಕಿತರ ಪಾಲಿಗೆ ವರದಾನ ಎಂದೇ ಬಿಂಬಿಸಲಾಗುವ ಪ್ಲಾಸ್ಮಾ ಅನ್ನು ಜೀರೋ ಟ್ರಾಫಿಕ್‌ ಮೂಲಕ ಬೆಂಗಳೂರಿನಿಂದ ಚೆನ್ನೈ ಆಸ್ಪತ್ರೆಗೆ ಯಶಸ್ವಿಯಾಗಿ ಸಾಗಿಸಲಾಗಿದೆ.
ಗ್ರೀನ್‌ ಕಾರಿಡಾರ್‌ (ಜೀರೋ ಟ್ರಾಫಿಕ್‌) ಮೂಲಕ 348 ಕಿಲೋ ಮೀಟರ್‌ ದೂರ ಇರುವ ಚೆನ್ನೈನ ಖಾಸಗಿ ಆಸ್ಪತ್ರೆಗೆ 4 ಗಂಟೆ 50 ನಿಮಿಷಕ್ಕೆ ಸಾಗಿಸಲಾಗಿದೆ. ಪ್ಲಾಸ್ಮಾ ಈ ರೀತಿ ರವಾನೆ ಮಾಡಿರುವುದು ದೇಶದಲ್ಲೇ ಮೊದಲ ಪ್ರಕರಣ ಎನ್ನಲಾಗಿದೆ. ಈವರೆಗೂ ಹೃದಯ, ಯಕೃತ್‌ನಂತಹ ಅಂಗಾಂಗಗಳನ್ನು ಮಾತ್ರ ಸಾಗಿಸುತ್ತಿದ್ದ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿ ಪ್ಲಾಸ್ಮಾ ಸಾಗಿಸಲಾಗಿದೆ.
ಪ್ಲಾಸ್ಮಾ ಚಿಕಿತ್ಸೆಯಿಂದ ಕರ್ನಾಟಕದಲ್ಲಿ ಇಬ್ಬರು ಚೇತರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಯು ಕರೊನಾ ಗಂಭೀರವಾಗಿರುವ ವೃದ್ಧೆಯೊಬ್ಬರಿಗೆ ಬೆಂಗಳೂರಿನಿಂದ ಪ್ಲಾಸ್ಮಾ ತರಿಸಿಕೊಂಡಿದೆ. ವೃದ್ಧೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಕುಟುಂಬಸ್ಥರು ’ಕೊನ್ವಾಲ್ಸೆಂಟ್‌ ಪ್ಲಾಸ್ಮಾ’ಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:https://www.vijayavani.net/s-seed-terrorism-by-china-in-india-warning/
ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯನ್ನು ಅಲ್ಲಿಯ ವೈದ್ಯರು ಸಂಪರ್ಕಿಸಿದ್ದಾರೆ. ಸಂಜೆ 5 ಗಂಟೆಗೆ ಬೆಂಗಳೂರು ನಗರ ಪೊಲೀಸರ ಸಹಾಯದಿಂದ ಗ್ರೀನ್‌ ಕಾರಿಡಾರ್‌ ವ್ಯವಸ್ಥೆ ಮೂಲಕ ಎಚ್‌ಸಿಜಿ ಆಸ್ಪತ್ರೆ ತಂಡವು ಹೊಸೂರುವರೆಗೂ ಪ್ಲಾಸ್ಮಾ ತಲುಪಿಸಿದೆ. ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆಯವರು ಪ್ಲಾಸ್ಮಾ ಪಡೆದಿದ್ದು, ರಾತ್ರಿ 9.30ಕ್ಕೆ ಆಸ್ಪತ್ರೆಗೆ ಪ್ಲಾಸ್ಮಾ ತಲುಪಿದೆ.
ಅಂಗಾಂಗಗಳ ಸಾಗಣೆಗೆ ಗ್ರೀನ್‌ ಕಾರಿಡಾರ್‌ ಬಳಕೆ ಮಾಡಲಾಗಿತ್ತು. ಅಂತರ್‌ ರಾಜ್ಯಕ್ಕೆ ಪ್ಲಾಸ್ಮಾ ಸಾಗಣೆ ಮಾಡಲು ಗ್ರೀನ್‌ ಕಾರಿಡಾರ್‌ ಬಳಕೆ ಮಾಡಿದ್ದು ದೇಶದಲ್ಲಿ ಇದೇ ಮೊದಲು ಎಂದಿದ್ದಾರೆ ಎಚ್‌ಸಿಜಿ ಆಸ್ಪತ್ರೆ ಕ್ಯಾನ್ಸರ್‌ ತಜ್ಞ ಡಾ.ವಿಶಾಲ್‌ ರಾವ್‌, ಪ್ಲಾಸ್ಮಾ ಥೆರಪಿಗೆ ದಿನದಿಂದ ದಿನಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದ್ದು, ಪ್ಲಾಸ್ಮಾ ಕೊರತೆ ಕಾಡುತ್ತಿದೆ. ಹೀಗಾಗಿ ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಮಾ ಬ್ಯಾಂಕ್‌ಗೆ ಪ್ಲಾಸ್ಮಾ ದಾನ ಮಾಡಬೇಕು ಎಂದು ಅವರು ಕೇಳಿಕೊಂಡರು. ಕರೊನಾ ಸೋಂಕಿನಿಂದ ಗುಣಮುಖರಾದವರಿಂದ ಪ್ಲಾಸ್ಮಾವನ್ನು ಪಡೆಯಬಹುದಾಗಿದೆ.
ಅರ್ಧ ತಿಂದ ಸಾಂಬಾರಿನಲ್ಲಿತ್ತು ಅರ್ಧ ಹಲ್ಲಿ- ಉಳಿದದ್ದು ಹೋದದ್ದೆಲ್ಲಿ? ದಾಖಲಾಯ್ತು ಎಫ್‌ಐಆರ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
