ನವದೆಹಲಿ:ಮೇ 14 ಅಕ್ಷಯ ತೃತೀಯ. ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಈ ಅವಧಿಯಲ್ಲಿ ಶುಭ ಸುದ್ದಿ ನೀಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂಕೆಎಸ್‌ಎನ್‌ವೈ) ಎಂಟನೇ ಕಂತು ಬಿಡುಗಡೆಯಾಗಿದ್ದು, ಅದು ಶುಕ್ರವಾರ ಅರ್ಹ ರೈತರ ಖಾತೆ ಸೇರಲಿದೆ.
ಯೋಜನೆಯ ಅಡಿಯಲ್ಲಿ 7ನೇ ಕಂತನ್ನ ಡಿಸೆಂಬರ್ 25, 2020ರಲ್ಲಿ ಬಿಡುಗಡೆ ಮಾಡಿದ್ದು ಇದನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿತ್ತು. ಇದೀಗ 8ನೇ ಕಂತಿನ ಬಿಡುಗಡೆಯಾಗಿದ್ದು, 9.5 ಕೋಟಿಗಿಂತ ಹೆಚ್ಚು ಫಲಾನುಭವಿಗಳ ಖಾತೆಯನ್ನು ಇದು ಸೇರಿಲಿದೆ.
ಒಟ್ಟು 19 ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇಷ್ಟೂ ಹಣ ಅರ್ಹರಿಗೆ ಹಂಚಿಕೆಯಾಗಲಿದೆ ಎಂದು ಪ್ರಧಾನಿ ಕಾರ್ಯಾಲಯವು ತಿಳಿಸಿದೆ. ಈ ಮೂಲಕ 2021-22ರ ಆರ್ಥಿಕ ವರ್ಷದ ಪಿಎಂ ಕಿಸಾನ್ ಯೋಜನೆಯ ಮೊದಲ ಕಂತು ರೈತರನ್ನು ಸೇರಲಿದೆ.
PM Modi will release the 8th instalment of financial benefit under Pradhan Mantri Kisan Samman Nidhi (PM-KISAN) scheme on 14th May at 11 AM via video conferencing. This will enable the transfer of more than Rs. 19,000 crores to more than 9.5 cr beneficiary farmer families: PMOpic.twitter.com/9uBDAF0UYO
— ANI (@ANI)May 13, 2021

ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇದು ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕೆಲ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿರುವುದಾಗಿ ಕಚೇರಿ ಮೂಲಗಳು ಹೇಳಿವೆ.
ಈ ಯೋಜನೆ ಅಡಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂಪಾಯಿ ಸಿಗಲಿದೆ. ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಗಳು ವರ್ಗಾವಣೆ ಆಗಲಿದೆ. ಇದಾಗಲೇ ಈ ಯೋಜನೆ ಅಡಿ ಇಲ್ಲಿಯವರೆಗೆ 1.15 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿದೆ. 2019ರ ಡಿಸೆಂಬರ್‌ನಿಂದ ಈ ಯೋಜನೆ ಜಾರಿಗೆ ಬಂದಿದ್ದು, ಸರ್ಕಾರಕ್ಕೆ ವರ್ಷಕ್ಕೆ 75 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.
ಅಸಹಿಷ್ಣುತೆಯನ್ನು ಮುಸ್ಲಿಂ ಸಮುದಾಯಗಳು ತ್ಯಜಿಸಬೇಕು- ಹೈಕೋರ್ಟ್‌

ಮದ್ವೆಯಾದಾಗಿನಿಂದಲೂ ದೂರ ಮಲಗುತ್ತಿರೋ ಪತಿಯನ್ನು ಕಟ್ಕೊಂಡು ಏನ್‌ ಮಾಡ್ಲಿ ಮೇಡಂ?

ಕರೊನಾ ವೈರಸ್‌ 3ನೇ ಅಲೆ ತಡೆಯಬೇಕೆ? ಹಾಗಿದ್ದರೆ ಯಜ್ಞ ಮಾಡಿಸಿ ಎಂದ ಸಚಿವೆ ಉಷಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
