ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು 70 ವಸಂತಗಳನ್ನು ಪೂರೈಸಿದ್ದು, 71ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
ಇದಾಗಲೇ ಭಾರತ ಮಾತ್ರವಲ್ಲದೇ ಹಲವಾರು ದೇಶಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಪ್ರಧಾನಿ ಮೋದಿಯವರು ವಿಶ್ವದ ಪ್ರಭಾವಶಾಲಿ ನಾಯಕ ಎಂದೂ ಹೆಸರು ಗಳಿಸಿದವರು. ಅವರ ಈ ಹುಟ್ಟುಹಬ್ಬಕ್ಕೆ ಇದಾಗಲೇ ಲಕ್ಷಾಂತರ ಮಂದಿ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಟ್ವಿಟ್ಟರ್​, ಫೇಸ್​ಬುಕ್​ ಸೇರಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಆಗಿರುವ ಮೋದಿಯವರು ಇದಾಗಲೇ ಈ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆ ಹೇಳಿಕೊಂಡಿರುವ ಹಲವಾರು ಮಂದಿಗೆ ಪರಿಹಾರವನ್ನೂ ನೀಡಿದ್ದಾರೆ, ಜತೆಗೆ ಪ್ರಧಾನಿ ಕಾರ್ಯಾಲಯವು ಹಲವಾರು ಜನರಿಗೆ ಸ್ಪಂದಿಸಿರುವುದು ಕೂಡ ಇದೇ ಜಾಲತಾಣಗಳ ಮೂಲಕ.ಪ್ರಧಾನಿ ಮೋದಿಯವರಿಗೆ ಬರ್ತ್​ಡೇ ವಿಷ್​ ಮಾಡಬೇಕು ಎಂದು ನಿಮಗೂ ಅನ್ನಿಸಿರಬಹುದು, ಆದರೆ ಅದು ಹೇಗೆ? ಅವರಿಗೆ ಶುಭಾಶಯ ಸಂದೇಶ ಕಳುಹಿಸುವುದು ಹೇಗೆ ಎಂದು ನಿಮ್ಮಲ್ಲಿ ಪ್ರಶ್ನೆ ಕಾಡುತ್ತಿದ್ದರೆ ಅದಕ್ಕೆ ಉತ್ತರ ನಮೋ ಆ್ಯಪ್​.
ಸಾಮಾಜಿಕ ಜಾಲತಾಣಗಳ ಜತೆಯಲ್ಲಿ ನಮೋ ಆ್ಯಪ್​ ಕೂಡ ಇದೀಗ ಜನಮನವನ್ನು ಗೆದ್ದಿದೆ. ಇದರ ಮೂಲಕವೇ ನೀವು ಶುಭಾಶಯ ಕಳುಹಿಸಬಹುದಾಗಿದೆ.ಅದಕ್ಕಾಗಿ ನೀವು ನಮೋಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. http://nm4.in/dnldapp ಎಂದು ಟೈಪಿಸುವ ಮೂಲಕ  ನಮೋಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬಹುದು.
ಕೆಳಗಿನ ಬಿಜೆಪಿಯ ಟ್ವಿಟ್​ರ್​ನಲ್ಲಿ ಲಿಂಕ್​ ಜತೆ ಸಂಪೂರ್ಣ ಮಾಹಿತಿ ಇದೆ ನೋಡಿ… –
So many people are wishing PM Shri@narendramodion his birthday via NaMo App.
Download NaMo app and upload your wish in one click –https://t.co/f0ytXY07wP#HappyBdayNaMopic.twitter.com/SdMLuzo4hv
— BJP (@BJP4India)September 17, 2020

ನನ್ನನ್ನು ಉಪಮುಖ್ಯಮಂತ್ರಿ ಮಾಡಮ್ಮಾ… ದುರ್ಗಿಗೆ ಪತ್ರ ಬರೆದರಂತೆ ಶ್ರೀರಾಮುಲು!

ಇನ್ಮುಂದೆ 90 ನಿಮಿಷ ಕಿಮ್​ನ ಗುಣಗಾನ ಕಡ್ಡಾಯ- ಸಹೋದರಿಯಿಂದ ವಿಚಿತ್ರ ಆದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 − four =
Remember me
