ಜೈಪುರ:ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕೇವಲ ಒಂದು ಕಟ್ಟಡ ಮಾತ್ರವಲ್ಲ, ಇಲ್ಲಿ ಕಲಿತು ಹೊರಬಂದ ಸಾಕಷ್ಟು ಹಳೆ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ, ರಾಷ್ಟ್ರದ ಪ್ರಗತಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದರು. ‌
ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಂದು ಅಂಚೆಚೀಟಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದ ನಂತರ ಮಾತನಾಡುತ್ತಾ ಶ್ಲಾಘನೆ ವ್ಯಕ್ತಪಡಿಸಿದ್ದರು.ಆದರೆ ಈ ಮಾತನ್ನು ಟೀಕಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮುಸ್ಲಿಂ ಸಮುದಾಯದವರನ್ನು ಯಾರು ಬೇಕಾದರೂ ಹೊಗಳಬಹುದು, ಆದರೆ ಟಿಕೆಟ್‌ ಕೊಡಿ ಎಂದರೆ ಮಾತ್ರ ಕೊಡಲು ಆಗುವುದಿಲ್ಲ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಸೀಟುಗಳಿವೆ. ಬಿಹಾರದಲ್ಲಿ ಸುಮಾರು 250 ಸೀಟುಗಳಿವೆ. ಆದರೆ ಮುಸ್ಲಿಮರ ಬಗ್ಗೆ ಮಾತನಾಡುವ ಬಿಜೆಪಿಯು ಮುಸ್ಲಿಮರಿಗೆ ಒಂದೇ ಒಂದು ಟಿಕೆಟ್ ನೀಡಿಲ್ಲ. ಆದರೆ ಭಾಷಣ ಮಾತ್ರ ಮಾಡುತ್ತಾರೆ. ಹೇಳುವುದಕ್ಕೂ ಮತ್ತು ಮಾಡುವುದಕ್ಕೂ ಎಷ್ಟು ದೊಡ್ಡ ವ್ಯತ್ಯಾಸವಿದೆ. ಬಿಜೆಪಿಯು ಮುಸ್ಲಿಮರಿಗೆ ಟಿಕೆಟ್ ನೀಡುವುದಿಲ್ಲ. ಆದರೆ ಸರ್ಕಾರಗಳನ್ನು ಉರುಳಿಸಲು ಮುಸ್ಲಿಮರನ್ನು ಬಳಸಿಕೊಳ್ಳುತ್ತದೆ’ ಎಂದು ವ್ಯಂಗ್ಯವಾಡಿದರು.
ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಸಂಚಿನಲ್ಲಿ ಬಿಜೆಪಿಯ ಜಫರ್ ಇಸ್ಲಾಂ ಅವರು ಭಾಗಿಯಾಗಿದ್ದರು. ಆದರೆ ಮುಸ್ಲಿಮರ ವಿಚಾರದಲ್ಲಿ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿರುವ ಗೆಹ್ಲೋಟ್‌, ಮೂರು ಕೃಷಿ ಕಾಯ್ದೆಗಳನ್ನು ಬಲವಂತವಾಗಿ ಅನುಮೋದನೆ ಮಾಡಿದ ಬಳಿಕ ರೈತರೊಂದಿಗೆ ಮೋದಿ ಸರ್ಕಾರದಂತೆ ಯಾರೂ ಸಂವೇದನೆ ಇಲ್ಲದಂತೆ ವರ್ತಿಸಬಾರದು ಎಂದರು.
ಮಗನ ಮದುವೆಗೆ ನೆರವಾದದ್ದೇ ತಪ್ಪಾಯ್ತು: ಗಂಡ ಹತ್ತಿರ ಸೇರಿಸುತ್ತಿಲ್ಲ- ಅವರ ಆಸ್ತಿ ಸಿಗುವುದಿಲ್ಲವೆ?

ಲವ್‌ ಜಿಹಾದಿಗಳಿಗೆ ಪಾಠ ಕಲಿಸಲು ರೆಡಿಯಾಯ್ತು ಇನ್ನೊಂದು ರಾಜ್ಯ: ಧರ್ಮ ಮುಚ್ಚಿಟ್ಟರೆ ಇನ್ನೂ ಕಠಿಣ ಶಿಕ್ಷೆ

ಮಕ್ಕಳಿಗಾಗಿ ಮದುವೆಯಾದರು: ಎರಡನೇ ಪತ್ನಿಯಾದ ಮಾತ್ರಕ್ಕೆ ನನಗೆ ಬಯಕೆಗಳು ಇರುವುದು ತಪ್ಪೆ?

ಈ ಯುವಕನ ಕಾರಿನ ನಂಬರ್‌ ಪ್ಲೇಟ್‌ಗೆ 52 ಕೋಟಿ ರೂ.! ಅದ್ಯಾಕೆ ಅಂತೀರಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + 18 =
Remember me
