ನವದೆಹಲಿ:ಜಿ-20 ಶೃಂಗಸಭೆ ಮತ್ತು 26ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್‌ನಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಟಲಿಯನ್ನು ತಲುಪುತ್ತಿದ್ದಂತೆಯೇ ಅಲ್ಲಿ ಅವರಿಗೆ ಅಚ್ಚರಿಯ ಸ್ವಾಗತ ಸಿಕ್ಕಿದೆ. ಸಂಸ್ಕೃತ ಮಂತ್ರಗಳನ್ನು ಪಠಿಸುವ ಮೂಲಕ ಅವರ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ.ವಿಶೇಷ ವಿಮಾನದ ಮೂಲಕ ಇಟಲಿಗೆ ತೆರಳಿರುವ ಪ್ರಧಾನಿ ಮೋದಿ, ರೋಮ್‌ನಲ್ಲಿ ನಡೆಯಲಿರುವ 16ನೇ ಜಿ-20 ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಟಲಿ ಪ್ರಧಾನಿ ಮಾರಿಯೊ ಡ್ರಘಿ ಅವರ ಆಹ್ವಾನದ ಮೇರೆಗೆ ಮೋದಿ ಅದಲ್ಲಿಗೆ ತೆರಳಿದ್ದಾರೆ. ರೋಮ್‌ ಭೇಟಿಯ ಸಂದರ್ಭದಲ್ಲಿ ವ್ಯಾಟಿಕನ್ ಸಿಟಿಯಲ್ಲಿ ಪೋಪ್‌ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.ರೋಮ್‌ ತಲುಪುತ್ತಿದ್ದಂತೆಯೇ ಅಲ್ಲಿ ಇರುವ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ, ಅಲ್ಲಿ ನೆರೆದಿದ್ದ ನೂರಾರು ಭಾರತೀಯ ಮೂಲದವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೂಡ ಅಲ್ಲಿ ಸಂಸ್ಕೃತ ಮಂತ್ರ ಪಠಿಸಲಾಯಿತು.
#WATCHSanskrit chants, slogans of 'Modi, Modi' reverberate at Piazza Gandhi in Rome as Prime Minister Narendra Modi interacts with people gathered thereThe PM is in Rome to participate in the G20 Summit.pic.twitter.com/G13ptYOAjB— ANI (@ANI)October 29, 2021
#WATCHSanskrit chants, slogans of 'Modi, Modi' reverberate at Piazza Gandhi in Rome as Prime Minister Narendra Modi interacts with people gathered thereThe PM is in Rome to participate in the G20 Summit.pic.twitter.com/G13ptYOAjB
ದೊಡ್ಮನೆ ಹುಡುಗನ ದೊಡ್ಡತನಕ್ಕೆ ಲೆಕ್ಕವೇ ಇಲ್ಲ: ಅಬ್ಬಾ! ಸದ್ದಿಲ್ಲದೇ ನಡೀತಿದ್ವು ಇಷ್ಟೊಂದು ಸಮಾಜಸೇವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
