ಉಡುಪಿ:ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಇದೀಗ ವಾಪಸ್‌ ಭಾರತಕ್ಕೆ ಬಂದಿಳಿದಿದ್ದಾರೆ.
ಆದರೆ ಕುತೂಹಲದ ಸಂಗತಿಯೆಂದರೆ ಅಮೆರಿಕದಲ್ಲಿ ಮೂರು ದಿನಗಳ ಕಾಲ ಊಟೋಪಚಾರ ಸಹಿತ ಆತಿಥ್ಯದ ನೇತೃತ್ವ ವಹಿಸಿದವರು ಉಡುಪಿ ಜಿಲ್ಲೆಯ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೋಟೆಲ್ ಉದ್ಯಮಿ ಆನಂದ ಪೂಜಾರಿ.
ಇಂಥದ್ದೊಂದು ಅದೃಷ್ಟ ಆನಂದ ಪೂಜಾರಿ ದಂಪತಿಯದ್ದು. ಇದೇ ಮೊದಲೇನಲ್ಲ. ಪ್ರಧಾನಿ ಮೋದಿಯವರು ಈ ಹಿಂದೆ ಅಮೆರಿಕಕ್ಕೆ ಹೋಗಿದ್ದಾಗಲೂ ಈ ದಂಪತಿ ಆತಿಥ್ಯ ನೀಡಿದ್ದುಂಟು. ಆನಂದ ಪೂಜಾರಿ ಮತ್ತು ಪತ್ನಿ ಸುಮಿತಾ ಯುಎಸ್ ನ ವಾಷಿಂಗ್ಟನ್ ಡಿಸಿಯಲ್ಲಿ ಕಳೆದ ಮೂರು ದಶಕಗಳಿಂದ ನೆಲೆಸಿದ್ದಾರೆ. ಅಲ್ಲಿ ಭವ್ಯ ವುಡ್ ಲ್ಯಾಂಡ್ಸ್ ಹೊಟೇಲ್ ನಡೆಸುತ್ತಿದ್ದಾರೆ. ಮೊನ್ನೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವನ್ನು ಈ ದಂಪತಿ ಪಡೆದಿದ್ದಾರೆ.
ಪ್ರಧಾನಿ ಮೋದಿಯವರು ಅಮೆರಿಕದಲ್ಲಿದ್ದರೂ ಭಾರತೀಯ ಶೈಲಿಯ ಊಟಕ್ಕೆ ಆದ್ಯತೆ ನೀಡುತ್ತಿದ್ದು, ದಕ್ಷಿಣ ಭಾರತೀಯ ಖಾದ್ಯಗಳಿಗೆ ಮಾರುಹೋಗಿದ್ದಾರೆ ಎನ್ನುತ್ತಾರೆ ಆನಂದ ಪೂಜಾರಿ ಅವರು. ಇಡ್ಲಿ, ವಡಾ, ಉಪ್ಪಿಟ್ಟು ಅವರಿಗೆ ಇಷ್ಟ. ದಿನಕ್ಕೆ ನಾಲ್ಕು ಬಾರಿಯಾದರೂ ಮಸಾಲಾ ಟೀ ಕುಡಿಯುತ್ತಾರೆ ಎನ್ನುತ್ತಾರೆ ಆನಂದ್‌ ದಂಪತಿ.
ಮೂಲತಃ ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲ್ಲಂಗಡಿ ಮನೆಯ ನಿವಾಸಿ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರರಾದ ಇವರು, ಅಮೆರಿಕದಲ್ಲಿ ನೆಲೆಸಿದ್ದರೂ ಊರಿಗೆ ಆಗಾಗ ಬರುತ್ತಿರುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾಗ ಅವರ ಊಟೋಪಚಾರ ಸಹಿತ ಆತಿಥ್ಯದ ನೇತೃತ್ವ ವಹಿಸಿದವರು ಉಡುಪಿ ಜಿಲ್ಲೆಯ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೋಟೆಲ್ ಉದ್ಯಮಿ ಆನಂದ ಪೂಜಾರಿ.pic.twitter.com/MP3tFYba6i— Vijayavani (@VVani4U)September 26, 2021
ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾಗ ಅವರ ಊಟೋಪಚಾರ ಸಹಿತ ಆತಿಥ್ಯದ ನೇತೃತ್ವ ವಹಿಸಿದವರು ಉಡುಪಿ ಜಿಲ್ಲೆಯ ಕುಂದಾಪುರದ ಆಲೂರು ಮೂಲದ ಅನಿವಾಸಿ ಭಾರತೀಯ ಹೋಟೆಲ್ ಉದ್ಯಮಿ ಆನಂದ ಪೂಜಾರಿ.pic.twitter.com/MP3tFYba6i
ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬಾಲಕ ತೇಜಸ್: ಕಣ್ಣೀರಲ್ಲಿ ಅಪ್ಪ-ಅಮ್ಮ
ನಟನ ಒಳ ಉಡುಪು ನೋಡಲು ಹೀಗೆಲ್ಲಾ ಮಾಡ್ತಾರಾ ರಶ್ಮಿಕಾ? ಛೇ ಎಂದ ಅಭಿಮಾನಿಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
