ನವದೆಹಲಿ:‘ಕರೊನಾದ ಈ ಸಮಯದಲ್ಲಿ ನನ್ನ ಅಮ್ಮನ ಜತೆ ಬಹಳ ಮಾತನಾಡಲು ಸಮಯ ಸಿಗುವುದಿಲ್ಲ. ಆದರೂ ವಾರಕ್ಕೆ ಎರಡು ಬಾರಿಯಾದರೂ ಅಮ್ಮನ ಜತೆ ಮಾತನಾಡುತ್ತೇನೆ. ಆಗೆಲ್ಲಾ ನನ್ನಮ್ಮ ಕೇಳುವುದು ಇದೊಂದು ಪ್ರಶ್ನೆ ನೀನು ಹಲ್ದಿ (ಅರಿಶಿಣ) ಹಾಲು ಸೇವಿಸಿದ್ಯಾ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಆನ್‌ಲೈನ್ ಫಿಟ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಫಿಟ್​ನೆಸ್​ ದಿಗ್ಗಜರೊಂದಿಗೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ರುಜುತಾ ದಿವೇಕರ್​ ಅವರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ಪ್ರಧಾನಿ ಮೋದಿ ಬಹಿರಂಗಪಡಿಸಿದರು.
ನಮ್ಮದೇ ಪ್ರಾಂತ್ಯದ ಆಹಾರಗಳನ್ನು ಹೇಗೆ ಸೇವಿಸಬೇಕು ಎಂಬ ಬಗ್ಗೆ ರುಜುತಾ ಅವರು ಹೇಳುವ ಸಮಯದಲ್ಲಿ ಅರಿಶಿಣದ ಮಹತ್ವವನ್ನು ಹೇಳಿದರು. ನಮ್ಮದೇ ದೇಶದಲ್ಲಿ ಹಲವಾರು ಔಷಧೀಯ ಗುಣಗಳುಳ್ಳ ಪದಾರ್ಥಗಳು ಇರುವಾಗ ನಾವು ಬೇರೆ ಆಹಾರಗಳಿಗೆ ಪ್ರಭಾವಿತರಾಗಿರುವುದು ವಿಷಾದಕರ ಎಂದರು.
ಇದನ್ನೂ ಓದಿ:LIVE: ಪ್ರಧಾನಿ ಮೋದಿಯಿಂದ ಫಿಟ್​ನೆಸ್​ ಕ್ಷೇತ್ರದ ದಿಗ್ಗಜರ ಜತೆ ಸಂವಾದ
ಅರಿಶಿಣವನ್ನು ಹೆಚ್ಚು ಹೆಚ್ಚು ಬಳಸಿ ಎಂದರೆ ನಮ್ಮವರಿಗೆ ಅರ್ಥವಾಗುವುದಿಲ್ಲ. ಆದರೆ ಅದೇ ಬೇರೆ ದೇಶದವರು, ಗೋಲ್ಡನ್​ ಮಿಲ್ಕ್​ ಎಂದೋ ಇಲ್ಲವೇ ಇನ್ನಾವುದೇ ಹೊಸ ಭಾಷೆಯಲ್ಲಿ ಅರಿಶಿಣವನ್ನು ಸೇವಿಸಬೇಕು ಎಂದಾಗ ನಮ್ಮವರಿಗೆ ಎಚ್ಚರವಾಗುತ್ತದೆ ಎಂದು ಹೇಳಿದರು.ಈ ವಿಷಯವನ್ನು ಹೇಳುವಾಗ ಪ್ರಧಾನಿಯವರು ತಮ್ಮ ತಾಯಿಯ ವಿಷಯವನ್ನು ಪ್ರಸ್ತಾಪ ಮಾಡಿದರು.
ಫಿಟ್​ ಆಗಿರುವುದು ಹೇಗೆ ಎಂಬ ಬಗ್ಗೆ ಜನರಿಗೆ ಟಿಪ್ಸ್​ ನೀಡುವಂತೆ ರುಜುತಾ ಅವರನ್ನು ಪ್ರಧಾನಿ ಕೇಳಿದಾಗ, ರುಜುತಾ ಅವರು, ನಾವು ಎಷ್ಟು ತಿಂದೆವು ಎನ್ನುವುದು ಮುಖ್ಯವಲ್ಲ. ಬದಲಿಗೆ ಹೇಗೆ ತಿಂದೆವು ಎನ್ನುವುದು ಮುಖ್ಯ. ತಿನ್ನುವಷ್ಟೇ ಆಹಾರವನ್ನು ಜಗಿದು ಜಗಿದು ತಿಂದರೆ ಎಲ್ಲಾ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಇದೇ ವೇಳೆ, ಪ್ಯಾಕೆಟ್​ ಆಹಾರಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಭಾರತದ ಉಪಗ್ರಹಗಳ ಮೇಲೂ ಚೀನಾದಿಂದ ಅಟ್ಯಾಕ್​: 142 ಪುಟಗಳಲ್ಲಿದೆ ಭಯಾನಕ ಸತ್ಯ!

ಸಿಎಎ ವಿರುದ್ಧದ ಹೋರಾಟಕ್ಕೆ ಮಹಿಳೆಯರಿಗೆ ದಿನಗೂಲಿ! ಸಾಕ್ಷ್ಯ ಒದಗಿಸಿದ ಪೊಲೀಸರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × four =
Remember me
