ನವದೆಹಲಿ:ಹಿಂದೆ ಹಲವು ದಶಕಗಳವರೆಗೆ ನಡೆಯದ ಮಹತ್ಕಾರ್ಯಗಳನ್ನು ಮಾಡುವ ಮೂಲಕ ವಿದೇಶಿಗರೂ ಭಾರತದತ್ತ ದೃಷ್ಟಿ ಬೀರುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಮೋದಿಯವರು ಯೂಟ್ಯೂಬ್‌ನಲ್ಲಿ ತಮ್ಮದೇ ದಾಖಲೆಯನ್ನು ಅಳಿಸಿಹಾಕುವ ಮೂಲಕ ಮತ್ತೊಮ್ಮೆ ಜಾಗತಿಕ ನಾಯಕ ಎಂದು ಹೆಸರು ಮಾಡಿದ್ದಾರೆ. ಯುಟ್ಯೂಬ್​ನಲ್ಲಿ ಪ್ರಧಾನಿ ಮೋದಿಯವರ ಚಾನಲ್​​ನ ಸಬ್​​ಸ್ಕ್ರೈಬರ್​​ಗಳ ಸಂಖ್ಯೆ ಫೆ.1ರಂದು 1 ಕೋಟಿ ದಾಟಿದೆ.
ಈ ಮೂಲಕ ಯೂಟ್ಯೂಬ್‌ನಲ್ಲಿ ಅತ್ಯಂತ ಹೆಚ್ಚು ಚಂದಾದಾರರನ್ನು ಹೊಂದಿರುವ ಜಾಗತಿಕ ನಾಯಕ ಎಂದು ಎನಿಸಿಕೊಂಡಿದ್ದಾರೆ. ಇದಾಗಲೇ ಈ ಬಿರುದು ಇವರ ಹೆಸರಿನಲ್ಲಿಯೇ ಇತ್ತು. 2ನೇ ಬಾರಿ ಜಾಗತಿಕ ನಾಯಕ ಎನಿಸಿಕೊಂಡಿದ್ದಾರೆ.
ಇನ್ನೂ ಒಂದು ಇಂಟರೆಸ್ಟಿಂಗ್‌ ವಿಷಯ ಎಂದರೆ, ಪ್ರಧಾನಿ ಮೋದಿ ನಂತರ ಎರಡನೇ ಸ್ಥಾನದಲ್ಲಿರುವವರು ಬ್ರೆಜಿಲ್‌ನ ಜೇರ್ ಬೋಲ್ಸಾನರೋ. ಅವರು ಹೊಂದಿರುವುದು 36 ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಮಾತ್ರ! ಅಂದರೆ ಇಬ್ಬರ ನಡುವೆ ವಿಪರೀತ ಅಂತರವಿದೆ.
ಇದನ್ನು ಬಿಟ್ಟರೆ 30.7 ಲಕ್ಷ ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ ಮೆಕ್ಸಿಕೋದ ಮ್ಯಾನುಯೆಲ್ ಲೊಪೆಜ್ ಒಬ್ರಡಾರ್ ಮೂರನೇ ಸ್ಥಾನದಲ್ಲಿದ್ದಾರೆ. 28.8 ಲಕ್ಷ ಚಂದಾದಾರರನ್ನು ಹೊಂದಿರುವ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೊಡೊ ನಾಲ್ಕನೆಯ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಅಮೆರಿಕಾದ ಶ್ವೇತಭವನವು 19 ಲಕ್ಷ ಚಂದಾದಾರರನ್ನು ಹೊಂದಿದೆ ಮತ್ತು ಅಧ್ಯಕ್ಷ ಜೋ ಬಿಡನ್ 7.043 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.
ಭಾರತದ ನಾಯಕರು ಯುಟ್ಯೂಬ್​ನಲ್ಲಿ ಎಷ್ಟು ಚಂದಾದಾರರನ್ನು ಹೊಂದಿದ್ದಾರೆ? ಪ್ರಧಾನಿ ನರೇಂದ್ರ ಮೋದಿ ಹೊರತುಪಡಿಸಿದರೆ ಭಾರತದ ರಾಜಕೀಯ ನಾಯಕರ ಯುಟ್ಯೂಬ್ ಚಂದಾದಾರರ ಸಂಖ್ಯೆ ಕಡಿಮೆ ಇದೆ. 5.25 ಲಕ್ಷ ಯೂಟ್ಯೂಬ್ ಚಂದಾದಾರರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಂದಿದ್ದಾರೆ. ಅವರ ನಂತರ ಶಶಿ ತರೂರ್ 4.39 ಲಕ್ಷ, ಅಸಾದುದ್ದೀನ್ ಓವೈಸಿ 3.73 ಲಕ್ಷ ಸಬ್​ಸ್ಕ್ರೈಬರ್ ಹೊಂದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ 2.12 ಲಕ್ಷ ಮತ್ತು ಮನೀಶ್ ಸಿಸೋಡಿಯಾ 1.37 ಲಕ್ಷ ಸಬ್​​ಸ್ಕ್ರೈಬರ್ ಹೊಂದಿದ್ದಾರೆ.
ಪ್ರಧಾನಿ ಮೋದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅನುಯಾಯಿಗಳೆಷ್ಟು? ಪ್ರಧಾನಿ ಮೋದಿಯವರು ಪ್ರಸ್ತುತ ಟ್ವಿಟರ್‌ನಲ್ಲಿ 7.53 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 6.5 ಕೋಟಿ ಮತ್ತು ಫೇಸ್‌ಬುಕ್‌ನಲ್ಲಿ 4.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಮೋದಿಯವರ YouTube ಚಾನಲ್ ಪ್ರಾರಂಭವಾಗಿದ್ದು 2007ರ ಅಕ್ಟೋಬರ್ 26ರಂದು. ಈ ಚಾನಲ್​ ಇದುವರೆಗೆ 1,643,140,189 ವೀಕ್ಷಣೆಗಳನ್ನು ಕಂಡಿದೆ.
VIDEO: ಎಂಟು ಮಂದಿಗೆ ಒಬ್ಬನೇ ಗಂಡ: ಜಗಳವೂ ಇಲ್ಲ, ಗಲಾಟೆಯೂ ಇಲ್ಲ… ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟಾನೆ ಪತಿರಾಯ…

Sign in to your account
Please enter an answer in digits:20 − 19 =
Remember me
