ನವದೆಹಲಿ:ಆತಿಥೇಯ ಇಂಗ್ಲೆಂಡ್​ ವಿರುದ್ಧ ಶುಕ್ರವಾರದಿಂದ ಆರಂಭವಾಗಿರುವ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಪ್ರವಾಸಿ ಭಾರತ ಮಹಿಳಾ ತಂಡ 18 ರನ್​ಗಳಿಂದ ಸೋತರೂ ಟೀಮ್​ ಇಂಡಿಯಾದ ಹರ್ಲೀನ್​ ಡಿಯೋಲ್​ ಮಾತ್ರ ಎಲ್ಲರ ಮನ ಗೆದ್ದಿದ್ದಾರೆ.
ಇಂಗ್ಲೆಂಡ್​ನ ಆ್ಯಮಿ ಎಲೆನ್​ ಜೋನ್ಸ್​ ಬಾರಿಸಿದ ಚೆಂಡು ಬೌಂಡರಿ ಗೆರೆಯಿಂದಾಚೆಗೆ ಬೀಳಬೇಕೆನ್ನುವಷ್ಟೆರಲ್ಲಿ ಲಾಂಗ್​ ಆಫ್​ನಲ್ಲಿದ್ದ ಹರ್ಲೀನ್​ ಡಿಯೋಲ್​, ಡೈವ್​ ಮೂಲಕ ಅದ್ಭುತ ಕ್ಯಾಚ್ ತೆಗೆದುಕೊಂಡಿದ್ದರಿಂದ ಜಾಲತಾಣದಲ್ಲಿ ಹರ್ಲೀನ್‌ ನಾಯಕಿಯಾಗಿ ಮಿಂಚಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
ಈ ಕ್ಯಾಚ್‌ ಪ್ರಧಾನಿ ನರೇಂದ್ರ ಮೋದಿಯವರ ಮನವನ್ನೂ ಗೆದ್ದಿದೆ. ಟ್ವಿಟರ್‌ ಮೂಲಕ ಹರ್ಲೀನ್‌ ಅವರಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದು ’ವೆಲ್‌ಡನ್‌ ಹರ್ಲೀನ್‌’ ಎಂದು ಹೇಳಿದ್ದಾರೆ.
ಹರ್ಲೀನ್‌ ಅವರು ಅದ್ಭುತ ಕ್ಯಾಚ್‌ ವಿಡಿಯೋವನ್ನು ಟೀಮ್​ ಇಂಡಿಯಾದ ಮಾಜಿ ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್​ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಕ್ರಿಕೆಟ್​ ಮೈದಾನದಲ್ಲಿ ಇದುವರೆಗೂ ನಾನು ನೋಡಿರದ ಅದ್ಭುತ ಕ್ಯಾಚ್​ ಇದು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದು, ಇದೀಗ ವೈರಲ್‌ ಆಗಿದೆ.
ಟೀಮ್​ ಇಂಡಿಯಾದ ಪ್ರಯತ್ನ ನಡುವೆಯೂ ಪಂದ್ಯವು ಇಂಗ್ಲೆಂಡ್​ ಪಾಲಾಯಿತು. 3 ವಿಕೆಟ್​ ನಷ್ಟಕ್ಕೆ ಭಾರತ 54 ರನ್​ ಗಳಿಸಿದ್ದಾಗ ಆಗಮಿಸಿದ ಮಳೆ ಇಡೀ ಕ್ರೀಡಾಂಗಣವನ್ನು ಒದ್ದೆ ಮಾಡಿದ ಪರಿಣಾಮ ಕೊನೆಗೆ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಇಂಗ್ಲೆಂಡ್​ ಜಯ ಘೋಷಿಸಲಾಯಿತು. ಇನ್ನು ಸರಣಿಯ ಎರಡನೇ ಪಂದ್ಯ ಭಾನುವಾರ ಹೂವ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆಯಲಿದೆ.(ಏಜೆನ್ಸೀಸ್​)
PM@narendramodiJi congratulated@imharleenDeolon her impressive catch.pic.twitter.com/gqDeznFiV2
— Office of Mr. Anurag Thakur (@Anurag_Office)July 10, 2021


ಕಾರಲ್ಲಿ ಬರ್ತಾರೆ- ಹೊಂಡ ಮುಚ್ಚುತ್ತಾರೆ: ನಿದ್ದೆ ಮಾಡುತ್ತಿರೋ ಅಧಿಕಾರಿಗಳಿಗಾಗಿ 11 ವರ್ಷಗಳಿಂದ ಈ ಕಾರ್ಯ!

ಚಿತ್ರರಂಗದ ನಂಟಿರೋ ಡಿಕೆಶಿನೇ ಮುಂದಿನ ಸಿಎಂ: ‘5ಡಿ’ಯಲ್ಲಿ ಕೇಳಿಬಂತು ಭವಿಷ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fourteen =
Remember me
