ಶಿಮ್ಲಾ:ನಾಳೆ (ಬುಧವಾರ) ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ಕಾರ್ಯಕ್ರಮವನ್ನು ವರದಿ ಮಾಡಲು ಬರುವ ಪತ್ರಕರ್ತರು ಪ್ರವೇಶಾತಿ ಮತ್ತು ಭದ್ರತಾ ಪಾಸ್​ಗಳನ್ನು ಪಡೆಯಲು ನಡತೆ ಪ್ರಮಾಣ ಪತ್ರ ನೀಡುವಂತೆ ಸ್ಥಳೀಯ ಜಿಲ್ಲಾಡಳಿತ ಆದೇಶ ಹೊರಡಿಸಿ ಭಾರಿ ವಿವಾದಕ್ಕೆ ಕಾರಣದ ಬೆನ್ನಲ್ಲೇ ಈ ಆದೇಶವನ್ನು ವಾಪಸ್​ ಪಡೆದುಕೊಂಡಿದೆ.
ಇದೀಗ ಹಿಮಾಚಲ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಸಂಜಯ್ ಕುಂದು ಮತ್ತೊಂದು ಸುತ್ತೋಲೆ ಹೊರಡಿಸಿ, “ಈ ವಿಷಯದ ಬಗ್ಗೆ ವಿಷಾದಿಸುತ್ತೇವೆ. ಅಕ್ಟೋಬರ್ 5ರಂದು ಹಿಮಾಚಲ ಪ್ರದೇಶಕ್ಕೆ ಪ್ರಧಾನ ಮಂತ್ರಿಯವರ ಭೇಟಿಯ ಸುದ್ದಿ ಪ್ರಸಾರಕ್ಕಾಗಿ ಪೋಲೀಸ್ ಇಲಾಖೆಯು ಎಲ್ಲ ಪತ್ರಕರ್ತರನ್ನು ಸ್ವಾಗತಿಸುತ್ತದೆ. ವರದಿ ಮಾಡಲು ಅನುಕೂಲವಾಗುವಂತೆ ನೋಡಿಕೊಳ್ಳುವುದಾಗಿ ಪೋಲೀಸ್ ಇಲಾಖೆಯು ಭರವಸೆ ನೀಡುತ್ತದೆ’ ಎಂದು ಹೇಳಿದ್ದಾರೆ.
ಆಗಿದ್ದೇನು?ನಾಳೆ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ‘ಖಾಸಗಿ ಮಾಲೀಕತ್ವದ ಪ್ರಿಂಟ್​, ಡಿಜಿಟಲ್​ ಮತ್ತು ಟಿವಿ ಮಾಧ್ಯಮ ಪತ್ರಕರ್ತರು ಮಾತ್ರವಲ್ಲದೆ, ಆಲ್​ ಇಂಡಿಯಾ ರೇಡಿಯೋ (ಎಐಆರ್​) ಮತ್ತು ದೂರದರ್ಶನದಂತಹ ರಾಜ್ಯ ಸರ್ಕಾರ ನಡೆಸುವ ಮಾಧ್ಯಮ ಪ್ರತಿನಿಧಿಗಳು ಸಹ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರವೇಶಾತಿ ಮತ್ತು ಭದ್ರತಾ ಪಾಸ್​ಗಳನ್ನು ಪಡೆಯಲು ನಡತೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು’ ಎಂದು ತಿಳಿಸಿತ್ತು.
ಎಲ್ಲಾ ಪತ್ರಿಕಾ ವರದಿಗಾರರು, ಛಾಯಾಗ್ರಾಹಕರು, ವೀಡಿಯೋಗ್ರಾಫರ್‌ಗಳು ಮತ್ತು ದೂರದರ್ಶನ ಮತ್ತು ಆಲ್​ ಇಂಡಿಯಾ ರೇಡಿಯೋ ಪ್ರತಿನಿಧಿಗಳ ಪಟ್ಟಿಯನ್ನು ಅವರ ನಡತೆ ದೃಢೀಕರಣದ ಪ್ರಮಾಣಪತ್ರದೊಂದಿಗೆ ಪೂರೈಸಲು ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ (DPRO) ಅವರನ್ನು ಅಧಿಸೂಚನೆಯಲ್ಲಿ ಹೇಳಲಾಗಿತ್ತು. ನಡತೆ ಪ್ರಮಾಣಪತ್ರವನ್ನು ಅಕ್ಟೋಬರ್ 1ರ ಒಳಗೆ ಬಿಲಾಸ್‌ಪುರದಲ್ಲಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ ಕಚೇರಿಗೆ ಸರಬರಾಜು ಮಾಡಬೇಕು. ಆ ಬಳಿಕ ಸಮಾವೇಶದಲ್ಲಿ ಅಥವಾ ಸಭೆಯೊಳಗೆ ಪತ್ರಕರ್ತರ ಪ್ರವೇಶವನ್ನು ನಿರ್ಧರಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿತ್ತು.
ಈ ಅಧಿಸೂಚನೆ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದವು. ಮಾಧ್ಯಮದವರು ಕೂಡ ಈ ಅಧಿಸೂಚನೆ ವಿರುದ್ಧ ಗರಂ ಆಗಿದ್ದರು. ಈಗ ಸರ್ಕಾರ ಅದನ್ನು ವಾಪಸ್​ ಪಡೆದುಕೊಂಡಿದೆ. (ಏಜೆನ್ಸೀಸ್​)

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಕಾರ್ಣಿಕೋತ್ಸವದಲ್ಲಿ ಕಾರ್ಣಿಕ ನುಡಿದ ಗೊರವಪ್ಪ ನಾಗಪ್ಪ ಉರ್ಮಿ.pic.twitter.com/ZALZll5x11— Vijayavani (@VVani4U)October 4, 2022
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಕಾರ್ಣಿಕೋತ್ಸವದಲ್ಲಿ ಕಾರ್ಣಿಕ ನುಡಿದ ಗೊರವಪ್ಪ ನಾಗಪ್ಪ ಉರ್ಮಿ.pic.twitter.com/ZALZll5x11
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 6 =
Remember me
