ಕೆವಾಡಿಯಾ:ಗುಜರಾತ್​ನಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಪೈಕಿ 23 ಮಂದಿಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ.
ಇಂದಿನಿಂದ ಎರಡು ದಿನ ಮೋದಿ ಪ್ರವಾಸದಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗಾಗಿ ಗುಜರಾತ್ ಸರ್ಕಾರ ಸುಮಾರು 5 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಿದೆ. ಕರ್ತವ್ಯಕ್ಕೆ ಹಾಜರಾಗುವ ಮೊದಲು ಅಂದರೆ ನಿನ್ನೆ ಎಲ್ಲಾ ಪೊಲೀಸರನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಪೈಕಿ 23 ಮಂದಿಗೆ ಪಾಸಿಟಿವ್​ ವರದಿಯಾಗಿದೆ.
ಇದಾಗಲೇ ಪ್ರಧಾನಿಯವರು ನರ್ಮದಾ ಜಿಲ್ಲೆ ಕೆವಾಡಿಯಾಯಲ್ಲಿ ಜಂಗಲ್​ ಸಫಾರಿ ಖ್ಯಾತಿಯ ಸರ್ದಾರ್​ ಪಟೇಲ್​ ಜೂಲಾಜಿಕಲ್​ ಪಾರ್ಕ್​ ಉದ್ಘಾಟಿಸಿದರು. ಈ ಪಾರ್ಕ್​ ಅನ್ನು 182 ಮೀಟರ್​ ಉದ್ದದ ವಲ್ಲಭ್‌ಭಾಯಿ ಪಟೇಲ್ ಏಕತಾ ಪ್ರತಿಮೆ ಬಳಿ ನಿರ್ಮಿಸಲಾಗಿದ್ದು, ಭಾರತದ ಉಕ್ಕಿನ ಮನುಷ್ಯನಿಗೆ ಸಮರ್ಪಿಸಲಾಗಿದೆ. ಇನ್ನು ಜೂಲಾಜಿಕಲ್​ ಪಾರ್ಕ್​ ಪ್ರಪಂಚದಾದ್ಯಂತ ಇರುವ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಸಂಗ್ರಹವನ್ನು ಹೊಂದಿದೆ.
ಇದನ್ನೂ ಓದಿ:ಕರೊನಾ ಹುಷಾರಾಗಿಲ್ಲ ಎಂದು ನಕಲಿ ರಿಪೋರ್ಟ್​ ಪಡೆಯುತ್ತಲೇ ಇದ್ದ ಸಂಪತ್​ರಾಜ್​ ಪರಾರಿ?
ನಂತರ ಕೆವಡಿಯಾ ಮತ್ತು ಅಹಮದಾಬಾದ್‌ ನಡುವೆ ‘ಸೀಪ್ಲೇನ್‌’ ಸೇವೆ ಉದ್ಘಾಟನೆ ಕಾರ್ಯಕ್ರಮವಿದೆ. ನಾಳೆ ಅಂದರೆ 31ರಂದು ಪಟೇಲ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಪಟೇಲ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದು, ಏಕತಾ ಪ್ರತಿಜ್ಞಾ ಮತ್ತು ಏಕತಾ ದಿವಾಸ್ ಪೆರೇಡ್‍ಗೆ ಸಾಕ್ಷಿಯಾಗಲಿದ್ದಾರೆ.
ನಂತರ ಯುಎನ್‍ನ ಎಲ್ಲಾ ಅಧಿಕೃತ ಭಾಷೆಗಳಲ್ಲಿ ಸ್ಟ್ಯಾಚ್ಯೂ ಆಫ್ ಯೂನಿಟಿಯ ವೆಬ್‍ಸೈಟ್ ಅನಾವರಣ ಮಾಡಲಿದ್ದಾರೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (ಎಲ್ಬಿಎಸ್‍ಎನ್‍ಎಎ) ಯಲ್ಲಿ ಭಾರತೀಯ ನಾಗರಿಕ ಸೇವೆಗಳ ಪ್ರೊಬೇಷನರ್​ಗಳ ಬಗ್ಗೆ ಪ್ರಧಾನಿ ಮಾತನಾಡಲಿದ್ದಾರೆ.
ಶ್ರೀರಾಮುಲು ಆಪ್ತನ ಮಗಳ ಅದ್ದೂರಿ ಮದುವೆ: ಮಾಸ್ಕ್​ ಇಲ್ಲ… ಅಂತರವಿಲ್ಲ..?

ಭಾರತ ವಿರೋಧಿ ಮೀಟಿಂಗ್​ ಮಧ್ಯೆ ಶ್ರೀರಾಮ, ಹನುಮಾನ್​- ಪಾಕ್​ ಗಣ್ಯರು ಸುಸ್ತೋ ಸುಸ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 4 =
Remember me
