ಭೂಪಾಲ್:ಸುಮಾರು 750 ಕೋಟಿ ರೂಪಾಯಿ ವೆಚ್ಚದಲ್ಲಿ ಉಜ್ಜಯಿನಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮಹಾಕಾಲ್​ ದೇವಾಲಯದ ಮೊಗಸಾಲೆ (ಕಾರಿಡಾರ್) ಉದ್ಘಾಟನೆಗೆ ಸಿದ್ಧವಾಗಿದ್ದು, ಬರುವ ಅಕ್ಟೋಬರ್​ 11ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಈ ಕುರಿತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ. ‘ಉಜ್ಜಯಿನಿ ಮಹಾಕಾಲ್ ಕಾರಿಡಾರ್​ನ ಮಹತ್ವಾಕಾಂಕ್ಷೆ ಯೋಜನೆಯ ಮೊದಲ ಹಂತವು ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಜಯಿನಿಗೆ ಭೇಟಿ ನೀಡಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ ನಂತರ ಅ.11ರಂದು ಮೊಗಸಾಲೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಅವರು ಹೇಳಿದರು.
ಒಟ್ಟು ಎರಡು ಹಂತಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದ ಕಾಮಗಾರಿಯು 900 ಮೀಟರ್ ಉದ್ದದ ಕಾರಿಡಾರ್ ಹೊಂದಿದೆ. ಇದರಲ್ಲಿ ಥೀಮ್ ಪಾರ್ಕ್, ಹೆರಿಟೇಜ್ ಮಾಲ್, ಇ-ಸಾರಿಗೆ ಸೌಲಭ್ಯಗಳು ಇತ್ಯಾದಿ ಸೇರಿವೆ. ಇದಾಗಲೇ ಮಹಾಕಾಲ್ ಪಥ, ರುದ್ರ ಸಾಗರದ ಸೌಂದರ್ಯೀಕರಣ, ವಿಶ್ರಮಧಾಮ ಮೊದಲಾದ ಕಾಮಗಾರಿಗಳು ಪೂರ್ಣಗೊಂಡಿದ್ದು, ಮಹಾಕಲ್ ಪಥವನ್ನು ಇದಾಗಲೇ ಭಕ್ತರಿಗಾಗಿ ತೆರೆಯಲಾಗಿದೆ.
ಎರಡನೇ ಹಂತದಲ್ಲಿ, ಮಹಾರಾಜವಾಡಾ ಶಾಲಾ ಭವನವನ್ನು ಪಾರಂಪರಿಕ ಧರ್ಮಶಾಲೆಯಾಗಿ ಪರಿವರ್ತಿಸಲು ಸರ್ಕಾರ ಯೋಜಿಸಿದೆ. ಜತೆಗೆ ರುದ್ರ ಸಾಗರ ಮತ್ತು ಶಿಪ್ರಾ ನದಿಯನ್ನು ಜೋಡಿಸುವುದು, ಮುಂಭಾಗದ ಸರೋವರ ಪ್ರದೇಶದ ಸೌಂದರ್ಯ ವರ್ಧನೆ, 350 ಕಾರುಗಳನ್ನು ನಿಲ್ಲಿಸಲು ಸ್ಥಳಾವಕಾಶ, ಬಹು ಹಂತದ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ, ರೈಲ್ವೆ ಅಂಡರ್​ಪಾಸ್ ಮತ್ತು ರುದ್ರ ಸಾಗರದ ಮೇಲೆ 210 ಮೀಟರ್ ತೂಗುಸೇತುವೆಯನ್ನು ಅಭಿವೃದ್ಧಿಪಡಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ.
ಡೈನಾಮಿಕ್ ಲೈಟ್ ಶೋ ವ್ಯವಸ್ಥೆ ಮಾಡಲೂ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ರಾಮ್ ಘಾಟ್ ಬಳಿ ಸ್ಥಳ ನಿಗದಿಪಡಿಸಲಾಗಿದೆ. 2028ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.(ಏಜೆನ್ಸೀಸ್​)
ಅಯೋಧ್ಯೆಯಲ್ಲಿ ಸಿಎಂ ಯೋಗಿಗೊಂದು ದೇಗುಲ: ಪ್ರತಿಜ್ಞೆ ಹೀಗೆ ಈಡೇರಿಸಿಕೊಂಡ ಭಕ್ತ…
ಮೋದಿಗೆ ದೀದಿ ಕ್ಲೀನ್​ಚಿಟ್​: ಅವರ ತಪ್ಪೇ ಇಲ್ಲ ಎಂದ ಮಮತಾ ಮಾತಿಗೆ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ!
Sign in to your account
Please enter an answer in digits:twelve + 4 =
Remember me
