ಮುಂಬೈ:ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತವನ ವಿಚಾರಣೆ ವೇಳೆ ಮುಂಬೈನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯ (ಪೋಕ್ಸೊ) ಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.
ಅದೇನೆಂದರೆ ಬಾಲಕಿಯ ಕೈಯನ್ನು ಹಿಡಿದು ಪ್ರೀತಿಯನ್ನು ವ್ಯಕ್ತಪಡಿಸುವುದು ಲೈಂಗಿಕ ದೌರ್ಜನ್ಯ ಆಗಲಾರದು ಎಂದಿದೆ ಕೋರ್ಟ್​, 17 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬನು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
2017ರಲ್ಲಿ 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪವನ್ನು 28 ವರ್ಷದ ಯುವಕ ಎದುರಿಸುತ್ತಿದ್ದ. ಆತನನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಆದರೆ ಈತ ದುರುದ್ದೇಶಪೂರ್ವಕವಾಗಿ ಬಾಲಕಿಯ ಕೈಹಿಡಿದಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಹಾಗೂ ಇದನ್ನು ಸಾಬೀತು ಮಾಡಲು ವಕೀಲರು ವಿಫಲರಾಗಿದ್ದಾರೆ. ಆದ್ದರಿಂದ ಬಾಲಕಿಯ ಮೇಲೆ ಪ್ರೀತಿ ತೋರಿಸುವುದಕ್ಕಾಗಿ ಅಕೆಯ ಕೈಯನ್ನು ಹಿಡಿದ ಮಾತ್ರಕ್ಕೆ ಇದು ಲೈಂಗಿಕ ದೌರ್ಜನ್ಯ ಆಗುವುದಿಲ್ಲ ಎಂದು ಕೋರ್ಟ್​ ಹೇಳಿ ಯುವಕನ ಬಿಡುಗಡೆಗೆ ಆದೇಶಿಸಿದೆ.
ಆಸ್ಪತ್ರೆಗೆ ಹೋದರು ದೀಪಿಕಾ, ರಣ್​ವೀರ್​: ಜಾಲತಾಣದ ತುಂಬ ಗುಸುಗುಸು, ಪಿಸುಪಿಸು…!

ಯುವಕರೇ ಹುಷಾರ್​! ಫಸ್ಟ್​ ನೈಟೇ ಶಾಕ್ ಕೊಟ್ಟ ಸುಂದರಿ​- ಟೆರೇಸ್​ ಹಾರಿ ಎಸ್ಕೇಪ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + six =
Remember me
