ಹಾಂಗ್​ಕಾಂಗ್:ಯಾರದ್ದೋ ಮೇಲಿನ ದ್ವೇಷದಿಂದಾಗಿ 25 ಮಕ್ಕಳಿಗೇ ವಿಷ ನೀಡಿದ್ದ ನಿಷ್ಕರುಣಿ ಶಿಕ್ಷಕಿಯೊಬ್ಬಳಿಗೆ ಗಲ್ಲುಶಿಕ್ಷೆ ವಿಧಿಸಿ ಚೀನಾ ಕೋರ್ಟ್​ ಆದೇಶಿಸಿದೆ.
ತನ್ನ ಸಹೋದ್ಯೋಗಿಯೊಂದಿಗೆ ಜಗಳವಾಡಿದ್ದ ವಾಂಗ್‌ ಯುನ್‌ ಎಂಬ ಮಧ್ಯ ಕಿಂಡನ್‌ಗಾರ್ಟನ್‌ ಶಿಕ್ಷಕಿ, ಈ ಸಿಟ್ಟಿನಿಂದ ಮಕ್ಕಳಿಗೆ ವಿಷ ಹಾಕಿದ್ದಳು. ಈ ಪೈಕಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದ. ಇದು ಅತ್ಯಂತ ಗಂಭೀರ ಅಪರಾಧ ಎಂದಿರುವ ಹೆನಾನ್ ಪ್ರಾಂತ್ಯದ ಜಿಯೌಜೌ ಇಂಟರ್‌ಮೀಡಿಯಟ್ ಪೀಪಲ್ಸ್‌ ಕೋರ್ಟ್ ಮರಣದಂಡನೆ ವಿಧಿಸಿದೆ.
ಕಳೆದ ವರ್ಷದ ಮಾರ್ಚ್​ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ತನ್ನ ಸಹ ಶಿಕ್ಷಕಿ ಜತೆ ವಾಂಗ್​ ಜಗಳವಾಡಿಕೊಂಡಿದ್ದಳು. ವಿದ್ಯಾರ್ಥಿಗಳ ನಿರ್ವಹಣೆ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿತ್ತು. ಅವರ ಮೇಲಿನ ದ್ವೇಷದಿಂದ ಮಕ್ಕಳಿಗೆ ಗಂಜಿಯಲ್ಲಿ ನೈಟ್ರೇಟ್ ರಾಸಾಯನಿಕ‌ ಹಾಕಿ ನೀಡಿದ್ದಳು.
ಇದನ್ನೂ ಓದಿ:ಇನ್ನೊಂದು ನಿರ್ಭಯಾ ಕೇಸ್​: ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ ಎಸ್​ಐಟಿ ತನಿಖೆಗೆ
ನೈಟ್ರೇಟ್ ಬೆರೆಸಿದ ಗಂಜಿ ಸೇವಿಸಿದ ನಂತರ ಹಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಓರ್ವ ಬಾಲಕ ಮೃತಪಟ್ಟಿದ್ದ. ಉಳಿದ ಮಕ್ಕಳು ತೀವ್ರವಾಗಿ ಅಸ್ವಸ್ಥರಾಗಿದ್ದರು.
ಈ ಕುರಿತು ಕೋರ್ಟ್​ಗೆ ದಾಖಲೆ ಸಲ್ಲಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿರುವ ಕೋರ್ಟ್​ ವಾಂಗ್​ ತಪ್ಪಿತಸ್ಥಳು ಎಂದು ತೀರ್ಪು ನೀಡುವ ಮೂಲಕ ಗಲ್ಲುಶಿಕ್ಷೆ ವಿಧಿಸಿದೆ.
ಬಾಬ್ರಿ ಮಸೀದಿ ತೀರ್ಪು: ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಮುಸ್ಲಿಂ ಸಂಘದ ತಯಾರಿ

ಬಾಬ್ರಿ ಮಸೀದಿ ತೀರ್ಪು ನೀಡಿದ ನ್ಯಾಯಾಧೀಶ ಯಾದವ್​ ಕುರಿತ ಕುತೂಹಲದ ಮಾಹಿತಿಯಿದು…

ವಂಚನೆ ತಪ್ಪಿಸಲು ನಾಳೆಯಿಂದ ಡೆಬಿಟ್​-ಕ್ರೆಡಿಟ್​ ಕಾರ್ಡ್​ ಹೊಸ ರೂಲ್ಸ್​: ಏನಿದೆ ಇದರಲ್ಲಿ?

ಅಕ್ಟೋಬರ್​ನಲ್ಲಿ 10 ದಿನಗಳು ಬ್ಯಾಂಕ್​ಗೆ ರಜೆ: ಇಲ್ಲಿದೆ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
