ಇಸ್ಲಾಮಾಬಾದ್‌:ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ಭರ್ಜರಿ ಜಯಭೇರಿ ಭಾರಿಸಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ.
ಇದೇ ವೇಳೆ ವಿವಾದಾತ್ಮಕ ಹೇಳಿಕೆ ನೀಡಿರುವ ಇಮ್ರಾನ್​ ಖಾನ್​, ಕಾಶ್ಮೀರದ ಜನತೆಗೆ, ತಮ್ಮ ನೆಲವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ಅಥವಾ ಸ್ವತಂತ್ರ ರಾಷ್ಟ್ರವಾಗಿ ರೂಪಿಸುವ ಎರಡು ಆಯ್ಕೆಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದಿದ್ದಾರೆ. ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಕೆಲಸ ಮಾಡಿದ್ದಾರೆ.
‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಿಟಿಐ ಪಕ್ಷವು 23 ಸ್ಥಾನಗಳನ್ನು ಗೆದ್ದರೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) 6 ಸ್ಥಾನಗಳಲ್ಲಿ ತನ್ನದಾಗಿಸಿಕೊಂಡಿದೆ. ಇದಲ್ಲದೆ ಮುಸ್ಲಿಂ ಕಾನ್ಫರೆನ್ಸ್ ‌(ಎಂಸಿ), ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಪಾರ್ಟಿ(ಜೆಕೆಪಿಪಿ) ತಲಾ ಒಂದು ಸ್ಥಾನವನ್ನು ಗೆದ್ದಿದೆ.
ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಲೇ ಪಿಪಿಪಿಯ ಉಪಾಧ್ಯಕ್ಷೆ ಶೆರಿ ರೆಹಮಾನ್‌ ಮಾತನಾಡಿ, ಈ ಚುನಾವಣೆಯಲ್ಲಿ ವಂಚನೆ ನಡೆದಿದೆ. ಇದಕ್ಕೆ ಸಾಕ್ಷ್ಯಾಧಾರಗಳು ಇವೆ ಎಂದಿದ್ದಾರೆ. ಮತದಾನದ ವೇಳೆ ಪಿಟಿಐ ಕಾರ್ಯಕರ್ತರು ಪಿಪಿಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಹಲವಾರು ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಿದ್ದವು ಎಂದು ಹೇಳಿದ್ದಾರೆ.
ಇದೇ ವೇಳೆ ಇಮ್ರಾನ್​ ಖಾನ್​ ಹೇಳಿಕೆಗೆ ವಿರೋಧಿಸಿರುವ ಪಿಎಂಎಲ್‌-ಎನ್‌ ಪಕ್ಷದ ಅಧ್ಯಕ್ಷ ಷರೀಫ್, ಎರಡು ರಾಷ್ಟ್ರಗಳಲ್ಲಿ ಯಾರನ್ನು ಸೇರಬೇಕೆಂಬುದು ಕಾಶ್ಮೀರಿಗರೇ ನಿರ್ಧರಿಸಲಿ ಎಂದು ಈಗಾಗಲೇ ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ, ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯೇ ನಿವಾರಿಸಬೇಕೆಂದು ಪಾಕಿಸ್ತಾನ ಈ ಹಿಂದೆಯೇ ನಿರ್ಣಯ ಕೈಗೊಂಡಿದೆ. ಹಾಗಾಗಿ, ಖಾನ್‌ ಹೇಳಿಕೆ ಇತಿಹಾಸ ನಿರ್ಲಕ್ಷಿಸುವ ಹಾಗೂ ಸಂವಿಧಾನ ವಿರೋಧಿಸುವಂಥದ್ದು ಎಂದಿದ್ದಾರೆ.
ಇಮ್ರಾನ್​ ಖಾನ್​ ಪಕ್ಷ ಗೆಲುವು ಸಾಧಿಸುತ್ತಿದ್ದಂತೆಯೇ ಪಿಓಕೆಯ ಸ್ವಯಂ ಘೋಷಿತ ಪ್ರಧಾನಿ ರಾಜಾ ಫಾರೂಖ್​ ಹೈದರ್​, ಕಾಶ್ಮೀರ ಜನತೆಯನ್ನು ಹಿಗ್ಗಾಮುಗ್ಗ ಬೈದಿದ್ದು, ಇಲ್ಲಿಯ ಮತದಾರರದ್ದು ಜೀತದಾಳುಗಳ ಮನಸ್ಥಿತಿ. ಅದಕ್ಕಾಗಿ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮೂರು ವರ್ಷಗಳ ಹಿಂದೆಯೇ ನಟಿ ಜಯಂತಿ ವಿಚಾರದಲ್ಲಾಗಿತ್ತು ಮಹಾ ಎಡವಟ್ಟು!

20 ಗುಂಡು ಎದೆ ಸೀಳಿದರೂ 17 ಪಾಕಿಗಳ ಸದೆಬಡಿದ ಯೋಧನ ಮೈ ನವಿರೇಳಿಸುವ ಘಟನೆಯಿದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × one =
Remember me
