ತಿರುಪತಿ :ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ತಿರುಪತಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ತೂರಿಗೆ ಚುನಾವಣಾ ಪ್ರಚಾರಕ್ಕೆ ನಾಯ್ಡು ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಆಂಧ್ರಪ್ರದೇಶದಲ್ಲಿನ ವೈಎಸ್​ಆರ್​ ಕಾಂಗ್ರೆಸ್​ನ ಆಡಳಿತವನ್ನು ವಿರೋಧಿಸುತ್ತ ಬಂದಿರುವ ಚಂದ್ರಬಾಬು ನಾಯ್ಡು ಚಿತ್ತೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಲು ತೀರ್ಮಾನಿಸಿದ್ದರು. ಆದರೆ, ಚುನಾವಣಾ ನೀತಿ ಸಂಹಿತೆ ಮತ್ತು ಕರೊನಾ ಹೆಚ್ಚಳದ ಕಾರಣ ನೀಡಿ ಚಿತ್ತೂರ್ ಡಿಸಿಪಿ ಚಿತ್ತೂರಿನಲ್ಲಿ ಧರಣಿ ನಡೆಸಲು ಅನುಮತಿ ನೀಡಿರಲಿಲ್ಲ.
ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ತಿರುಪತಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ತೂರಿಗೆ ಚುನಾವಣಾ ಪ್ರಚಾರಕ್ಕೆ ನಾಯ್ಡು ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.#chandrababunaidu#airport#policepic.twitter.com/Ii8TfXez2T
— Vijayavani (@VVani4U)March 1, 2021

ಇದನ್ನು ಖಂಡಿಸಿದ ನಾಯ್ಡು, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಲು ಕುಳಿತಿದ್ದಾರೆ. ಈ ವೇಳೆ ರೇನಿಗುಂಟಾ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಬೇಕಾದರೆ ನನ್ನನ್ನು ಬಂಧಿಸಿ. ಆದರೆ ಚುನಾವಣಾ ಪ್ರಚಾರಕ್ಕೆ ನಿರ್ಬಂಧಿಸಬೇಡಿ. ಇಲ್ಲಿ ಏನು ನಡೆಯುತ್ತಿದೆ? ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತಿದ್ದೇನಾ? ಎಂದು ಚಂದ್ರಬಾಬು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಚಂದ್ರಬಾಬು ನಾಯ್ಡು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಮುಕ್ಕಾಲು ಗಂಟೆ ನಂತರ ನಾಯ್ಡು ಅವರು ಪೊಲೀಸರ ವಿನಂತಿಗೆ ಸ್ಪಂದಿಸಿ ಪ್ರತಿಭಟನೆ ನಿಲ್ಲಿಸಿ ಚಿತ್ತೂರಿಗೆ ತೆರಳದೇ ವಾಪಸಾಗಲು ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.
ಒಂದು ದಿನದ ಮಟ್ಟಿಗೆ ತೆಲುಗು ದೇಶಂ ಪಾರ್ಟಿಯ (ಟಿಡಿಪಿ) 13 ಶಾಸಕರನ್ನು ಅಮಾನತು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಚಂದ್ರಬಾಬು‌ನಾಯ್ಡು ಇತ್ತೀಚೆಗೆ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ‌ಜಗನ್ ಮೋಹನ್ ರೆಡ್ಡಿ ವಿರುದ್ಧ ಕಿಡಿ ಕಾರಿದ್ದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ನಾನು ಕರೊನಾ ಲಸಿಕೆ ಹಾಕಿಸಿಕೊಳ್ಳಲ್ಲ ಎಂದ ಆರೋಗ್ಯ ಸಚಿವ- ಅದಕ್ಕೆ ಕೊಟ್ಟರು ಈ ಕಾರಣ…

ಉಗ್ರರ ದಾಳಿಗೂ ಜಗ್ಗದ, ಚೀನಾದ ದಾಖಲೆ ಮುರಿಯಲು ಸಜ್ಜಾಗುತಿದೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ

ಹೀಗೊಂದು ಆತ್ಮೀಯ ಬೀಳ್ಕೊಡುಗೆ: ಪೊಲೀಸ್‌ ವ್ಯಾನ್‌ನ ಬಾನೆಟ್‌ ಮೇಲೆ ಕುಳ್ಳರಿಸಿ ಊರೆಲ್ಲಾ ನಡೆಯಿತು ಮೆರವಣಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
