ಚೆನ್ನೈ:ಬಣ್ಣದ ಲೋಕ ನೋಡಲು ಬಲು ಚೆಂದ. ಸಿನಿಮಾ, ಮಾಡೆಲ್​ ರಂಗದಲ್ಲಿ ದಿಢೀರ್ ಖ್ಯಾತಿ, ಹಣ ಎಲ್ಲವೂ ಸಿಗುತ್ತದೆ ಎಂದು ಕಂಡ ಕಂಡವರ ಮಾತು ಕೇಳಿ ಮೋಸದ ಬಲೆಗೆ ಬಿದ್ದ ಯುವತಿಯರಿಗೆ ಲೆಕ್ಕವೇ ಇಲ್ಲ. ಸಿನಿಮಾ ರಂಗದಲ್ಲಿ ಮಿಂಚಲು ಏನು ಮಾಡಲೂ ಸಿದ್ಧ ಎನ್ನುವ ಮನಸ್ಥಿತಿಯ ಹೆಣ್ಣುಮಕ್ಕಳಿದ್ದರಂತೂ ಮುಗಿದೇ ಹೋಯ್ತು. ವೇಶ್ಯಾವಾಟಿಕೆಯೆಂಬ ಮಹಾಕೂಪದಲ್ಲಿ ಬಿದ್ದು ಹೊರಬರಲಾಗದೇ ನರಕ ಅನುಭವಿಸುತ್ತಿರುವವರ ಸಂಖ್ಯೆಯೂ ಅಷ್ಟೇ ಹೆಚ್ಚಿದೆ.
ಅಂಥದ್ದೇ ಒಂದು ಘಟನೆ ಚೆನ್ನೈನಲ್ಲಿ ನಡೆದಿದೆ. ಮಾಡೆಲ್​ ಆಗಲು, ಸಿನಿಮಾ ರಂಗದಲ್ಲಿ ಮಿಂಚಲು ಬಂದಿದ್ದ ಯುವತಿಯರು ಸೆಕ್ಸ್ ರಾಕೆಟ್‌ ಜಾಲಕ್ಕೆ ಸಿಲುಕಿದ್ದು, ಇದೀಗ ಪೊಲೀಸರ ಕೈಗೆ ಬಿದ್ದಿದ್ದಾರೆ. ತೆನಾಂಪೇಟೆಯ ಫೈವ್​ಸ್ಟಾರ್​ ಹೋಟೆಲ್‌ನಲ್ಲಿ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲ ಪತ್ತೆ ಮಾಡಿರುವ ಪೊಲೀಸರು ಇಬ್ಬರು ಪಿಂಪ್‌ಗಳನ್ನು ಬಂಧಿಸಿದ್ದಾರೆ.
ಮಾಡೆಲಿಂಗ್ ಹಾಗೂ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಮಹಿಳೆಯರನ್ನು ಕರೆದುತಂದು ಅವರನ್ನು ದಂಧೆಗೆ ದೂಡಲಾಗುತ್ತಿತ್ತು. ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರಗಳ ಭರವಸೆ ನೀಡಿ ದೆಹಲಿ ಸೇರಿದಂತೆ ವಿವಿಧ ನಗರಕ್ಕೆ ಕರೆತಂದ ಮಹಿಳೆಯರನ್ನು, ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದುದು ತನಿಖೆಯಿಂದ ಬಹಿರಂಗಗೊಂಡಿದೆ.
ಬಂಧಿತರನ್ನು ತಿರುಮುಲ್ಲೈ ವೋಯಲ್ ನಿವಾಸಿ ಸೆಂಥಿಲ್ ಮತ್ತು ಕೊಟ್ಟಿವಕ್ಕಂ ನಿವಾಸಿ ಸರವಣನ್​ ಅರೆಸ್ಟ್​ ಆಗಿದ್ದು, ಈ ರಾಕೆಟ್​ನಲ್ಲಿ ಶಾಮೀಲಾಗಿರುವ ದೆಹಲಿಯ ಸೂರಜ್ ಮಲ್ಹೋತ್ರಾ ಮತ್ತು ರಾಹುಲ್ ಎಂಬುವರು ನಾಪತ್ತೆಯಾಗಿದ್ದಾರೆ.
ಚೆನ್ನೈ ನಗರದ ವೆಲಾಚೇರಿ ಪ್ರದೇಶದಲ್ಲಿ ಕೂಡ ದಾಳಿ ನಡೆಸಿದ್ದು, ಸ್ಪಾ, ಮಸಾಜ್ ಪಾರ್ಲರ್ ಎಂದು ಬೋರ್ಡ್​ ಹಾಕಿ ಸೆಕ್ಸ್​ ಕೆಲಸ ಮಾಡುತ್ತಿರುವವರನ್ನೂ ಪೊಲೀಸರು ಬಂಧಿಸಿದ್ದಾರೆ.
ಹೆಣ್ಣಾಗಿ ಹುಟ್ಟಿದಾಕೆ 47ನೇ ಹುಟ್ಟುಹಬ್ಬವನ್ನು ಗಂಡಾಗಿ ಆಚರಿಸಿಕೊಂಡಳು! ಮಹಿಳೆ ಬಾಳಲ್ಲಿ ಹೀಗೊಂದು ವಿಚಿತ್ರ…

ಲಕ್ಷ ಲಕ್ಷ ದುಡಿದು ಪತಿಗೆ ನೀಡಿದರೂ ನಿಲ್ಲದ ಹಣದ ದಾಹ: ವೈದ್ಯನ ಕಿರುಕುಳಕ್ಕೆ ವೈದ್ಯೆ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 14 =
Remember me
