ಲಖನೌ:ಇಲ್ಲಿಯ ಮಾಲ್‌ ಒಂದಕ್ಕೆ ನುಗ್ಗಿದ ಪೊಲೀಸ್‌ನೊಬ್ಬ ಷರ್ಟ್‌ ಕದ್ದು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಶಾಪಿಂಗ್‌ ಮಾಲ್‌ಗೆ ಹೋಗಿ ಷರ್ಟ್‌ ಖರೀದಿಸಿ ಯಾರಿಗೂ ತಿಳಿಯದಂತೆ ಷರ್ಟ್‌ ಕದಿಯಲು ಹೋದ ಈ ಪೊಲೀಸ್‌, ಸಿಸಿಟಿವಿಯಲ್ಲಿ ಸಿಕ್ಕಿಬಿದ್ದಿದ್ದಾನೆ!
ಸಿಕ್ಕಿಬಿದ್ದ ಮೇಲೆ ಮಾಲ್‌ಗೆ ಬಂದಿರುವವರು ಆತನಿಗೆ ಚೆನ್ನಾಗಿ ಏಟು ನೀಡಿದ್ದು, ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಲಖನೌನ ಹುಸೇನಗಂಜ್‌ನಲ್ಲಿರುವ ಶಾಪಿಂಗ್ ಮಾಲ್‍ನಲ್ಲಿ ಈ ಘಟನೆ ನಡೆದಿದೆ.
लखनऊ कमिश्नरेट में तैनात सिपाही की शर्मनाक करतूत। वी मार्ट के ट्रायल रूम में वर्दी के नीचे पहनी तीन शर्ट। चोरी कर बाहर निकलते समय बजा सायरन तो गार्ड ने पकड़ा। सिपाही की लोगों ने की पिटाई।'देर हुई आने में तुमको' गाने के बाद चोरी की घटना से चर्चा में राजधानी पुलिस।pic.twitter.com/G6bRv6vQ0p
— Gyan Bihari Mishra (@Gyanmishra_)February 25, 2021

ಈ ಪೊಲೀಸ್‌ ಹೆಸರು ಆದೇಶ್ ಕುಮಾರ್. ಇಲ್ಲಿಯ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಈತ ಸದ್ಯ ಪೊಲೀಸರ ಅತಿಥಿ! ಈತನನ್ನು ಗೋಮತಿ ನಗರದ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ನಂತರ ಆತನನ್ನ ಪೊಲೀಸ್ ಲೈನ್ ಸೇವೆಯಲ್ಲಿ ನಿಯುಕ್ತಿಗೊಳಿಸಲಾಗಿತ್ತು.
ಸಿಕ್ಕಿಬಿದ್ದದ್ದು ಹೇಗೆ? ಶಾಪಿಂಗ್ ಮಾಲ್‌ನಿಂದ ಆದೇಶ್‌ ಕುಮಾರ್‌ ಹೊರಬಂದಿದ್ದಾನೆ. ಈ ವೇಳೆ ಪ್ರವೇಶದ್ವಾರದ ಸೈರನ್ ಹೊಡೆದುಕೊಂಡಿದೆ. ಆದರೆ ಆತನ ಕೈಯಲ್ಲಿ ಯಾವುದೇ ಸಾಮಾನು ಇರಲಿಲ್ಲ. ಆದರೂ ಸೈರನ್‌ ಹೊಡೆದುಕೊಂಡಿದ್ದರಿಂದ ಮಾಲ್ ಸಿಬ್ಬಂದಿ ಎಚ್ಚೆತ್ತು ಪರಿಶೀಲನೆ ಮಾಡಿದ್ದಾರೆ.
ಪೊಲೀಸ್‌ ಯುನಿಫಾರ್ಮಿನಲ್ಲಿ ಇದ್ದ ಈತನನ್ನು ಪರಿಶೀಲಿಸಿದಾಗ ಆ ಯೂನಿಫಾರ್ಮ್‌ ಒಳಗೆ ಮೂರು ಷರ್ಟ್ ಇರುವುದು ಕಂಡುಬಂದಿದೆ. ನಂತರ ಆತನನ್ನು ಹಿಡಿದಿಟ್ಟುಕೊಂಡು ಸಿಸಿಟಿವಿ ಪರಿಶೀಲನೆ ಮಾಡಲಾಗಿದೆ. ಮೂರು ಷರ್ಟ್‌ನೊಂದಿಗೆ ಟ್ರಯಲ್‌ ರೂಮ್‌ಗೆ ಹೋಗಿರುವ ಈತ, ಬರುವಾಗ ಖಾಲಿ ಕೈಯಲ್ಲಿ ಬಂದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಷರ್ಟ್‌ಗಳನ್ನು ಯೂನಿಫಾರ್ಮ್‌ ಒಳಗೆ ಹಾಕಿಕೊಂಡು ಬಂದಿರುವುದು ಇದರಿಂದ ತಿಳಿದುಬಂದಿದೆ. ಇದು ತಿಳಿಯುತ್ತಲೇ ಅಲ್ಲಿ ನೆರೆದವರು ಈತನನ್ನು ಚೆನ್ನಾಗಿ ಥಳಿಸಿದ್ದಾರೆ. ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಈತನನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಹೇಳಿದ ಪ್ರೇಮಿ: ಟ್ಯಾಂಕ್‌ನಿಂದ‌ ಜಿಗಿದು ಬಾಲಕಿ ಆತ್ಮಹತ್ಯೆ

ಜೈಲಾಧಿಕಾರಿ ಸೇರಿದಂತೆ ಎಂಟು ಮಂದಿಯ ಕೊಲೆ ಮಾಡಿ 100ಕ್ಕೂ ಅಧಿಕ ಕೈದಿಗಳು ಎಸ್ಕೇಪ್‌‌!

ಅಮೆರಿಕ ಪ್ರತಿಕಾರ: ಇರಾನ್‌ ಬೆಂಬಲಿತ ಉಗ್ರಗಾಮಿ ತಾಣಗಳ ಮೇಲೆ ವೈಮಾನಿಕ ದಾಳಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 3 =
Remember me
