ಹೈದರಾಬಾದ್:ಇತ್ತೀಚೆಗೆ ತೆಲಂಗಾಣದ ವಾಹನ ಸವಾರರು ರಸ್ತೆಗೆ ಇಳಿಯಲು ಭಯ ಪಡುವ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ, ಲಿಫ್ಟ್​ ಕೇಳುವ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ ವಿಷದ ಇಂಜೆಕ್ಷನ್​ ಚುಚ್ಚಿ ಕೊಲೆ ಮಾಡಲಾಗಿತ್ತು. ಸಾಯುವ ಮುನ್ನ ಆತ ನೀಡಿದ್ದ ಹೇಳಿಕೆಯಿಂದಾಗಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಯಾಗಿತ್ತು. ವಾಹನದಲ್ಲಿ ಹೋಗಲು ಸವಾರರು ಬೆದರುವ ಸ್ಥಿತಿ ಉಂಟಾಗಿತ್ತು.
ಆದರೆ ಪೊಲೀಸ್​ ತನಿಖೆಯಿಂದ ಭಯಾನಕ ರಹಸ್ಯ ಬಯಲಾಗಿದ್ದು, ವಾಹನ ಸವಾರರು ಸ್ವಲ್ಪ ನಿರಾಳವಾಗಿದ್ದಾರೆ. ಇದಕ್ಕೆ ಕಾರಣ, ವಾಹನ ಸವಾರನನ್ನು ಕೊಲ್ಲುವ ಉದ್ದೇಶಕ್ಕಾಗಿಯೇ ಲಿಫ್ಟ್​ ಕೇಳಲಾಗಿತ್ತು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದ ಈ ಘಟನೆ ನಡೆದಿತ್ತು. ಬೊಪ್ಪರಂ ಗ್ರಾಮದ ಜಮಾಲ್ ಸಾಹೇಬ್ ಎಂಬುವವರಿಗೆ ಇಂಜೆಕ್ಷನ್ ಚುಚ್ಚಲಾಗಿತ್ತು. ಸ್ವಲ್ಪ ದೂರ ಹೋದ ನಂತರ ಬೈಕ್​ ಮೇಲಿಂದ ಬಿದ್ದ ಜಮಾಲ್ ಸಾಹೇಬ್​ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಸಾಯುವ ಮುನ್ನ ಯಾರೋ ಇಂಜೆಕ್ಷನ್​ ಚುಚ್ಚಿರುವುದನ್ನು ತಿಳಿದಿದ್ದರು. ಅದರ ಬೆನ್ನತ್ತಿ ಹೋದ ಪೊಲೀಸರಿಗೆ ಈ ಕೆಲಸ ಮಾಡಿಸಿದ್ದ ಪತ್ನಿ ಇಮಾಂಬಿ ಎಂಬುದು ಈಗ ತಿಳಿದುಬಂದಿದೆ.
ವಿವಾಹೇತರ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಜಮಾಲ್ ಸಾಹೇಬ್ ಪತ್ನಿಯೇ ಕೊಲೆ ಮಾಡಿಸಿರುವುದು ತಿಳಿದುಬಂದಿದೆ. ಇಂಜೆಕ್ಷನ್​ ಚುಚ್ಚಿದ ಆರೋಪಿ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ಪೊಲೀಸರು ರಚಿಸಿದ್ದರು. ಪತ್ನಿಯ ತನಿಖೆ ಮಾಡುವಾಗ ಪೊಲೀಸರಿಗೆ ಸಂಶಯ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ಭಾಗವಾಗಿ ಫೋನ್​ ಕಾಲ್ ಲಿಸ್ಟ್​ಗಳನ್ನು ಪರಿಶೀಲನೆ ಮಾಡಿದ್ದಾರೆ. ಒಂದೇ ನಂಬರ್​ಗೆ ಪತ್ನಿ ಹಲವು ಬಾರಿ ಫೋನ್​ ಮಾಡಿರುವುದು ತಿಳಿದಿದೆ.
ಆ ನಂಬರ್​ ಬೆನ್ನತ್ತಿ ಹೋದ ಪೊಲೀಸರಿಗೆ ಇಂಜೆಕ್ಷನ್​ ಚುಚ್ಚಿದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಪತ್ನಿ ಇಮಾಂಬಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಇದನ್ನು ಮಾಡಿಸಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ವಿಷದ ಇಂಜೆಕ್ಷನ್​ ನೀಡಲು ತನಗೆ ಡಾಕ್ಟರ್​ ವೆಂಕಟ್ ಸಹಾಯ ಮಾಡಿರುವುದಾಗಿ ಹೇಳಿದ್ದಾಳೆ. ಈ ವೈದ್ಯನ ಜತೆಗೆ, ಟ್ರ್ಯಾಕ್ಟರ್ ಚಾಲಕ ವೆಂಕಟೇಶ್ ಮತ್ತು ಮೋಹನ್ ರಾವ್ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಮೊದಲಿಗೆ ವಿಷದ ಇಂಜೆಕ್ಷನ್ ​ಅನ್ನು ಮನೆಯಲ್ಲೇ ಗಂಡನಿಗೆ ಕೊಡಬೇಕೆಂದು ಯೋಜಿಸಲಾಗಿತ್ತು. ಆದರೆ, ಧೈರ್ಯ ಸಾಲದ ಕಾರಣ ಆ ಕೆಲಸವನ್ನು ತನ್ನ ಗೆಳೆಯನಿಗೆ ಪತ್ನಿ ಒಪ್ಪಿಸಿದ್ದಳು. ಮೋಹನ್ ರಾವ್, ವೆಂಕಟೇಶ್ ಮತ್ತು ವೆಂಕಟ್ ಮೂವರು ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಅಂತೆಯೇ, ಜಮಾಲ್​ ತಮ್ಮ ಮಗಳ ಮನೆಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಲಿಫ್ಟ್​ ನೆಪದಲ್ಲಿ ಇಂಜೆಕ್ಷನ್​ ಕೊಟ್ಟಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.(ಏಜೆನ್ಸೀಸ್​)
ಹಿಜಾಬ್​ ವಿರುದ್ಧದ ಪ್ರತಿಭಟನೆಗೆ ಬೆಚ್ಚಿಬಿದ್ದ ಇರಾನ್​:ಮುಸ್ಲಿಂ ರಾಷ್ಟ್ರ ಧಗಧಗ- ಏಳು ಮಂದಿ ಸಾವು, ಇಂಟರ್​ನೆಟ್​ ಸ್ಥಗಿತ
ರೋಚಕ ಘಟ್ಟ ತಲುಪಿದ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ: ಎರಡು ದಶಕಗಳ ನಂತರವೂ ಬದಲಾಗೋದು ಡೌಟಾ?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 − nine =
Remember me
