ನವದೆಹಲಿ:ಗಾಳಿ, ಬೆಳಕು ಚೆನ್ನಾಗಿವೆ. ಭದ್ರತೆ ಸೂಪರ್​, ಸೆಕ್ಯುರಿಟಿಯಂತೂ ಹೇಳೋದೇ ಬಿಡ. ಉಚಿತವಾಗಿ ಹಾಸಿಗೆಯೂ ಸಿಗುತ್ತದೆ, ಸಿಸಿಟಿವಿ ಇದೆ, ಮಾತ್ರವಲ್ಲದೇ ಟಿ.ವಿ. ಸಂಗೀತ ಕೊಠಡಿ, ಕ್ರೀಡೆ ಎಲ್ಲವೂ ಇದೆ. ಶೇರಿಂಗ್​ ಕೂಡ ಮಾಡಿಕೊಳ್ಳಬಹುದು, ಕೆಲವೊಮ್ಮೆ ಒಂಟಿಯಾಗಿಯೂ ಇರಬಹುದು. ನೀವಿರುವಲ್ಲಿಂದಲೇ ಪಿಕ್​ಅಪ್​ ಸೌಲಭ್ಯವೂ ಇದೆ. ಅಷ್ಟೇ ಅಲ್ಲ… ಪಕ್ಕದಲ್ಲಿ ಬಾರ್​ ಕೂಡ ಇದೆ… ಅಚ್ಚರಿ ಎಂದರೆ ಎಲ್ಲವೂ ಫ್ರೀ ಫ್ರೀ… ನಿಮಗೆ ಬೇಕಾ? ಹಾಗಿದ್ದರೆ ಸಂಪರ್ಕಿಸಿ…
ಹೀಗೆಂದು ದೆಹಲಿಯ ಪೊಲೀಸ್​ ಇಲಾಖೆ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಇದೀಗ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಕೋಣೆ ಫ್ರೀಯಾಗಿ ಕೊಡುತ್ತಾರೆಂದರೆ ಯಾರಿಗೆ ತಾನೆ ಬೇಡ? ಅದೂ ಇಷ್ಟೆಲ್ಲಾ ಸೌಲಭ್ಯ ಇರುವಾಗ ಎಂದೆಲ್ಲಾ ಅಂದುಕೊಳ್ಳುವವರೇ ಹೆಚ್ಚು. ಅಸಲಿಗೆ ಈ ಟ್ವೀಟ್​ನಲ್ಲಿ ಪೊಲೀಸರು ಹೇಳಿರುವುದು ಇವೆಲ್ಲಾ ಸೌಲಭ್ಯ ಇರುವ ಜೈಲಿನ ಕೊಠಡಿ ಬಗ್ಗೆ!
'Book' your space. Possession soon.The living offer you certainly CAN resist!pic.twitter.com/MWaRSTb7Gz
— Delhi Police (@DelhiPolice)May 25, 2022

ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಜನರಿಗೆ ಹಾಸ್ಯಮಯವಾದ ರೀತಿಯಲ್ಲಿ ಎಚ್ಚರಿಕೆಯನ್ನು ನೀಡಲು ಈ ರೀತಿ ಟ್ವೀಟ್​ ಮಾಡಲಾಗಿದೆ. ಕ್ರಿಮಿನಲ್​ ಪ್ರಕರಣಗಳಲ್ಲಿ ತೊಡಗಿಸಿಕೊಂಡವರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಈ ಟ್ವೀಟ್​ ಮಾಡಿದ್ದೇವೆ. ಹೀಗೇನಾದರೂ ತಪ್ಪು ದಾರಿಗೆ ಹೋದರೆ ಇರುವ ಜಾಗದಿಂದಲೇ ಸರ್ಕಾರಿ ವಾಹನದಲ್ಲಿ ಉಚಿತವಾಗಿ ಪಿಕಪ್​ ಮಾಡಿಕೊಂಡು ಹೋಗಲಾಗುವುದು ಎಂದು ಎಚ್ಚರಿಸಿದ್ದೇವೆ ಎಂದಿದ್ದಾರೆ ಪೊಲೀಸರು.
ಅಪರಾಧ ಚಟುವಟಿಕೆಗಳ ಕುರಿತು ಜಾಗೃತಿ ಮೂಡಿಸಲು ಇಂಥ ತಮಾಷೆಭರಿತ ಟ್ವೀಟ್​ ಶೇರ್​ ಮಾಡುವುದು ಕೆಲವು ರಾಜ್ಯಗಳಲ್ಲಿ ಕಾಣಬಹುದು. ನಾವು ಕೂಡ ಅದನ್ನೇ ಮಾಡುತ್ತಿದ್ದೇವೆ. ಅಪರಾಧಿಕ ಕೃತ್ಯಗಳಲ್ಲಿ ತೊಡಗಿಸಿಕೊಂಡರೆ ಜೈಲಿನಲ್ಲಿ ಉಚಿತವಾಗಿ ಎಲ್ಲಾ ನೀಡುತ್ತೇವೆ ಎಂಬ ಎಚ್ಚರಿಕೆಯನ್ನು ಈ ಮೂಲಕ ಹೇಳುತ್ತಿದ್ದೇವೆ ಎಂದಿದ್ದಾರೆ ಪೊಲೀಸರು.
ಲವ್​ ಜಿಹಾದ್​ಗೆ ಉಡುಪಿ ಯುವತಿ ಬಲಿ! ದೈಹಿಕ ಸಂಪರ್ಕ ಬೆಳೆಸಿ ಮತಾಂತರಕ್ಕೆ ಪ್ರಯತ್ನ- ಪತ್ನಿಯೂ ಸಾಥ್​?

ಕನ್ನಡದ ನಟಿಯೊಬ್ಬಳು ಮಂಚಕ್ಕೆ ಕರೆದಿರೋ ಆರೋಪಕ್ಕೆ ನಟ ಶಿವರಾಜ್​ಕುಮಾರ್​ ಪ್ರತಿಕ್ರಿಯೆ ಹೀಗಿದೆ…

7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 15 =
Remember me
