ಜಬಲ್ಪುರ (ಮಧ್ಯಪ್ರದೇಶ):ಎರಡು ಸಾವಿರ ರೂಪಾಯಿಗೆ ಯುವತಿಯ ಜತೆ ಮಂಚಕ್ಕೆ ಹೋಗಲು ಪೊಲೀಸ್​ ಇನ್ಸ್​ಪೆಕ್ಟರ್​ ಫಿಕ್ಸ್​ ಆಗಿದ್ರು. ಆಮೇಲೆ ಪೊಲೀಸರ ಕೈಗೆ ಸಿಕ್ಕಿಬಿದ್ದದ್ದು ಅಪ್ಪ, ಮಗ ಮತ್ತು ಆತನ ಪತ್ನಿ! ಮಧ್ಯಪ್ರದೇಶದ ಜಬಲ್ಪುರದ ವೇಶ್ಯಾಗೃಹದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಆಗಿದ್ದೇನೆಂದರೆ ಜಸುಜಾ ನಗರದ ಧನ್ವಂತ್ರಿ ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಆದರೆ ನಿಖರವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವವರು ಯಾರು ಎಂದು ತಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಯೋಜನೆಯೊಂದನ್ನು ರೂಪಿಸಿದ್ದರು.
ಅದರ ಪ್ರಕಾರ, ಆ ಮನೆಯಲ್ಲಿರುವ ಯುವತಿಯೊಬ್ಬಳ ಜತೆ ಇನ್ಸ್​ಪೆಕ್ಟರ್​ ಎರಡು ಸಾವಿರ ರೂಪಾಯಿಗೆ ಮಂಚದ ವ್ಯವಹಾರ ಕುದುರಿಸಿಕೊಂಡಿದ್ದರು. ಇಂತಿಷ್ಟು ಗಂಟೆಯ ಟೈಂ ನೀಡಿದ್ದ ಆ ಮನೆ ಒಡತಿ, ಯುವತಿಯ ಜತೆ ಇರಲು ದುಡ್ಡನ್ನು ನಿಗದಿ ಮಾಡಿದ್ದಳು.
ಈ ಯೋಜನೆಯಂತೆಯೇ ಇನ್ಸ್​ಪೆಕ್ಟರ್​ ಆ ಯುವತಿಯ ಜತೆ ಮಂಚಕ್ಕೆ ಹೋಗುವಂತೆ ನಟಿಸಿದ್ದಾರೆ. ಒಳಗಡೆ ಹೋಗುತ್ತಿದ್ದಂತೆಯೇ ಅವರು ದಾಳಿಗೆ ಸೂಚನೆ ನೀಡಿದ್ದಾರೆ. ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯಲ್ಲಿ ಅಸ್ತವ್ಯಸ್ತವಾಗಿ ಇದ್ದ 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ ವೇಶ್ಯಾವಾಟಿಕೆ ನಡೆಸುತ್ತಿರುವವರ ವಿಚಾರಣೆ ಮಾಡಿದಾಗ ಪೊಲೀಸರಿಗೆ ಅಚ್ಚರಿಯಾಗಿದೆ.
ಇದಕ್ಕೆ ಕಾರಣ, ಇಲ್ಲಿ ಗಂಡ, ಹೆಂಡತಿ ಮತ್ತು ಗಂಡನ ಅಪ್ಪ ಸೇರಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಕೃಷ್ಣ ಕುಮಾರ್ ದುಬೆ, ಅವರ ಮಗ ಸುನೀಲ್ ಕುಮಾರ್ ದುಬೆ, ಸೊಸೆ ಈ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ಬಳಿಕ ಆರೋಪಿಗಳು ಸತ್ಯ ಬಾಯಿ ಬಿಟ್ಟಿದ್ದಾರೆ.
ಮಹಾರಾಷ್ಟ್ರದ ಮುಂಬೈ ಮತ್ತು ನಾಗ್ಪುರದಿಂದ ಯುವತಿಯನ್ನು ಕರೆತಂದು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿದೆ. ಸೊಸೆಯೇ ಇಲ್ಲಿ ಕಿಂಗ್​ಪಿನ್​ ಆಗಿದ್ದು, ಆನ್‌ಲೈನ್ ಮೂಲಕ ಗ್ರಾಹಕರನ್ನು ಸೆಳೆಯುತ್ತಾಳೆ. ನಂತರ ಅಲ್ಲಿಯೇ ಎಲ್ಲಾ ಹಣಕಾಸಿನ ವ್ಯವಹಾರ ನಡೆಯುತ್ತದೆ. ಇಂತಿಷ್ಟು ಗಂಟೆಗೆ ಇಂತಿಷ್ಟು ಎಂದು ಆನ್​ಲೈನ್​ ಮೂಲಕವೇ ಪಾವತಿ ಮಾಡಿಕೊಳ್ಳಲಾಗುತ್ತದೆ ಎಂಬ ವಿಷಯ ಪೊಲೀಸರಿಗೆ ತಿಳಿಯಿತು.
ಸದ್ಯ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಸೊಸೆಯ ಮೊಬೈಲ್ ಫೋನ್​ ಜಪ್ತಿ ಮಾಡಲಾಗಿದೆ. ಆನ್​ಲೈನ್ ಪಾವತಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಎಲ್ಲ ಆರೋಪಿಗಳ ವಿರುದ್ಧ ಅನೈತಿಕ ವೇಶ್ಯಾವಾಟಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಇದೀಗ ಆನ್​ಲೈನ್​ ಮೂಲಕ ಹಣವನ್ನು ಪಾವತಿ ಮಾಡಿದವರು ಪೇಚಿಗೆ ಸಿಲುಕಿದ್ದಾರೆ(ಏಜೆನ್ಸೀಸ್​).
ಗಿಳಿ ಹುಡುಕಿದವರಿಗೆ 80 ಸಾವಿರ ರೂ. ಬಹುಮಾನ ನೀಡಿದ್ದ ತುಮಕೂರಿನ ದಂಪತಿಯಿಂದ ಮತ್ತೊಂದು ಮಹತ್ವದ ನಿರ್ಧಾರ

VIDEO: ಮಣ್ಣಿನೊಳಗೆ ಕೈಹಾಕಿ ವಿಗ್ರಹ ತೆಗೆದ ಕಳ್ಳ ಸ್ವಾಮೀಜಿ- ನಿಧಿ ಆಸೆ ತೋರಿಸಿ ಹಾಸನದ ದಂಪತಿಗೆ ಪಂಗನಾಮ!

ಭಾನುವಾರ, 11ರಿಂದ1, ಬಿಳಿ ಬಣ್ಣ…. ಈ ಕಳ್ಳನ ಕಥೆಯೇ ರೋಚಕ: 5ನೇ ವಾರ ಕೈಕೊಟ್ಟಿಯೇ ಬಿಡ್ತು ಅದೃಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 16 =
Remember me
