ಕಣ್ಣೂರ (ಕೇರಳ):ಹಿಂದೂ ದೇವರಿಗೆ ಅವಹೇಳನ ಮಾಡಿದ್ದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್​ ಅವರ ಕುರಿತು ಮಾತನಾಡಿದ ಕಾರಣಕ್ಕೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್​ ಶರ್ಮಾ ವಿರುದ್ಧ ದೇಶ-ವಿದೇಶಗಳಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ, ನಮಾಜ್​ ನಂತರ ದ್ವೇಷ ಭಾಷಣ ಮಾಡದಂತೆ ಹೇಳಿದ ಪೊಲೀಸ್​ ಇನ್ಸ್​ಪೆಕ್ಟರ್​ ಒಬ್ಬರನ್ನು ರಾತ್ರೋರಾತ್ರಿ ವರ್ಗ ಮಾಡಲಾಗಿದೆ!
ಈ ಘಟನೆ ನಡೆದಿರುವುದು ಕೇರಳದಲ್ಲಿ. ಶುಕ್ರವಾರದ ನಮಾಜ್ ನಂತರ ಮಸೀದಿಯಲ್ಲಿ ದ್ವೇಷ ಭಾಷಣ ಮಾಡದಂತೆ ಮಸೀದಿ ಕಮಿಟಿಗೆ ನೋಟಿಸ್​ ನೀಡಿದ್ದ ಮಯ್ಯಿಲ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಗಿದ್ದ ಬಿಜು ಪ್ರಕಾಶ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಕೋಮು ಸೌಹಾರ್ದ ಹಾಳು ಮಾಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನೋಟಿಸ್​ನಲ್ಲಿ ಇನ್ಸ್​ಪೆಕ್ಟರ್​ ಎಚ್ಚರಿಸಿದ್ದರು.
ಈ ನೋಟಿಸ್​ ವಿರುದ್ಧ ಮುಸ್ಲಿಂನ ಕೆಲ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಸಮ್ಸಾಥಾ ಜಮಾಯುತ್​-ಉಲ್ ಉಲೇಮಾ ಸಂಘಟನೆ, ಮುಸ್ಲಿಂ ಲೀಗ್ ಹಾಗೂ ಎಸ್​ಡಿಪಿಐ ಸೇರಿದಂತೆ ಕೆಲವು ಸಂಘಟನೆಗಳು ನೋಟಿಸ್​ ಅನ್ನು ಖಂಡಿಸಿದ್ದವು. ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಲೀಗ್ ಆಗ್ರಹಿಸಿವೆ. ಸುನ್ನಿ ಮಹಲ್ ಫೆಡರೇಶನ್ ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದೆ. ಪೊಲೀಸ್ ಅಧಿಕಾರಿ ತಮಗೆ ಅವಮಾನ ಮಾಡಿರುವುದಾಗಿ ಸಂಘಟನೆಗಳು ಆಕ್ರೋಶ ಹೊರಹಾಕಿವೆ.
ಅದೇ ಇನ್ನೊಂದೆಡೆ, ಇನ್ಸ್​ಪೆಕ್ಟರ್​ ಅವರನ್ನು ವರ್ಗ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಸರ್ಕಾರ, “ಸ್ಟೇಷನ್ ಹೌಸ್ ಆಫೀಸರ್ ಸರ್ಕಾರದ ನಿಯಮಕ್ಕೆ ವಿರುದ್ಧವಾಗಿ ನೋಟಿಸ್ ಕಳುಹಿಸಿದ್ದಾರೆ. ಹಾಗಾಗಿ ಅವರಿಗೆ ವರ್ಗ ಮಾಡಿದ್ದೇನೆ ಎಂದಿದೆ.
ಇ.ಡಿ ಡ್ರಿಲ್​: ರಾಹುಲ್​ ಪರ ಟ್ವೀಟ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟಿ ರಮ್ಯಾ: ಕಮೆಂಟಿಗರು ಮಾಡಿದರು ‘ಚಾರ್ಟ್’​ ಪಾಠ!

ಪ್ರತಿಭಟನೆ ಹೆಸರಲ್ಲಿ ಕಲ್ಲುತೂರಾಟ: ‘ಅಗ್ನಿಪಥ’ ವಿರೋಧಿಸಿ ಪೊಲೀಸರು, ಬಿಜೆಪಿ ಮುಖಂಡರ ಮೇಲೆ ಹಲ್ಲೆ, ಕಚೇರಿ ಧ್ವಂಸ

ಹೊಸ ಗ್ಯಾಸ್​ ಕನೆಕ್ಷನ್​ ಬೇಕಾ? 2 ಸಿಲಿಂಡರ್​ ಅಗತ್ಯವಿದೆಯಾ? ರೇಟಾಯ್ತು ದುಪ್ಪಟ್ಟು- ಇಲ್ಲಿದೆ ನೋಡಿ ಡಿಟೇಲ್ಸ್​

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × four =
Remember me
