ಪುಣೆ:ನಿಗೂಢವಾಗಿ ಕೊಲೆಯಾಗಿದ್ದ ಯುವಕನೊಬ್ಬನ ಸಾವಿನ ಕೇಸ್‌ ಒಂದನ್ನು ಚಪ್ಪಲಿ ಮೂಲಕ ಪೊಲೀಸರು ಭೇದಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಹಲವು ದಿನಗಳಿಂದ ಯುವಕನ ಕೊಲೆಯ ಬಗ್ಗೆ ತಲೆಕೆಡಿಸಿಕೊಂಡಿದ್ದ ಪೊಲೀಸರಿಗೆ ಕೊನೆಗೂ ಚಪ್ಪಲಿ ಸುಳಿವು ನೀಡಿ ಆರೋಪಿಯತ್ತ ಕರೆದುಕೊಂಡು ಹೋಗಿರುವ ಘಟನೆ ಇದಾಗಿದೆ.27 ವರ್ಷದ ಯುವಕ ಮನೆಯಿಂದ ನಾಪತ್ತೆಯಾಗಿದ್ದ. ಆತನ ತಾಯಿ ಮಗನಿಗಾಗಿ ಹುಡುಕಿದರೂ ಪ್ರಯೋಜನ ಆಗಲಿಲ್ಲ. ಕೊನೆಗೆ ಪೊಲೀಸರಲ್ಲಿ ಆಕೆ ದೂರು ದಾಖಲು ಮಾಡಿದ್ದರು. ನಂತರ ಎಲ್ಲೆಡೆ ಪತ್ತೆ ಹಚ್ಚಿದಾದ ಬಾವಧಾನ್‌ ಎಂಬಲ್ಲಿ ಕಳೆದ 22ರಂದು ಯುವಕನ ಅರೆಬೆಂದ ಶವ ಪತ್ತೆಯಾಗಿತ್ತು. ಅದು ಅರೆಬರೆ ಬೆಂದಿತ್ತು, ಮತ್ತು ಸಂಪೂರ್ಣ ದೇಹವೂ ಅಲ್ಲಿರಲಿಲ್ಲ. ಅಂದರೆ ಶರೀರದ ವಿವಿಧ ಭಾಗಗಳನ್ನು ಬೇರೆ ಬೇರೆ ಕಡೆ ಎಸೆಯಲಾಗಿತ್ತು. ಈ ಕೊಲೆ ಮಾಡಿದ್ದು ಯಾರು, ಹೇಗೆ ಎಂಬ ಬಗ್ಗೆ ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಕೊಲೆಗಾರನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.ಮೊದಲಿಗೆ ಈತನ ಅಪಹರಣಮಾಡಿ ಕೊಲೆ ಮಾಡಲಾಗಿದೆ ಎಂದುಕೊಳ್ಳಲಾಗಿತ್ತು. ಆದರೆ ಪೊಲೀಸರು ಇದರ ಬೆನ್ನತ್ತಿ ಹೋದಾಗ ಸಿಕ್ಕಿದ್ದೇ ಒಂದು ಚಪ್ಪಲಿ! ಅಂದು ಯುವಕ ಎಲ್ಲೆಲ್ಲಿ ಹೋಗಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಾಗ ಮನೆಯೊಂದರ ಎದುರು ಆತನ ಚಪ್ಪಲಿ ಸಿಕ್ಕಿದೆ. ಇದು ತಮ್ಮ ಕೊಲೆಯಾದ ಮಗನ ಚಪ್ಪಲಿ ಎಂದು ತಾಯಿ ಹೇಳಿದ್ದಾರೆ. ಇದನ್ನೇ ಬೆನ್ನತ್ತಿಹೋದ ಪೊಲೀಸರಿಗೆ ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿದ್ದಾರೆ.ಚಪ್ಪಲಿ ಆ ಯುವಕನದ್ದೇ ಎಂದು ತಿಳಿಯುತ್ತಲೇ ಇದೇಮನೆಯಲ್ಲಿ ಕೊಲೆಗಾರರು ಇದ್ದಿರಬಹುದು ಎಂದು ಪೊಲೀಸರಿಗೆ ಬಲವಾದ ಸಂಶಯ ಮೂಡಿತು. ನಂತರ ಮನೆ ಮಾಲೀಕನನ್ನು ಬಂಧಿಸಿ ಬಾಯಿ ಬಿಡಿಸಿದಾಗ ಹೊರಬಂದದ್ದು ಭಯಾನಕ ಸತ್ಯ. ಅದೇನೆಂದರೆ ಕೊಲೆಯಾದ ಯುವಕ, ಈ ಮನೆ ಮಾಲೀಕನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಇದು ಮಾಲೀಕನಿಗೆ ತಿಳಿದಿದೆ.ಅದೊಂದು ದಿನ ತಾನು ಮನೆಯಲ್ಲಿ ಇರುವುದಿಲ್ಲ ಎಂದು ಪತ್ನಿಗೆ ಆತ ಸುಳ್ಳು ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಪತ್ನಿ ಮತ್ತು ಯುವಕನ ನಡುವೆ ಫೋನ್‌ ಸಂಭಾಷಣೆ ಶುರುವಾಗಿದೆ. ಇದನ್ನೆಲ್ಲ ಗಮನಿಸಿದ ಆರೋಪಿ, ಯುವಕ ಮನೆಗೆ ಬರುವುದನ್ನೇ ಕಾದು ತನ್ನ ಸ್ನೇಹಿತರ ಜತೆಗೂಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊನೆಗೆ ಸಾಯಿಸಿದ್ದಾನೆ. ಯಾವುದೇ ಸುಳಿವು ಸಿಗಬಾರದು ಎನ್ನುವ ಕಾರಣಕ್ಕೆ ಯುವಕನ ಮೃತದೇಹವನ್ನು ಕಳ್ಳಭಟ್ಟಿ ಕೇಂದ್ರಕ್ಕೆ ಕೊಂಡೊಯ್ದು ಅದನ್ನು ಸುಟ್ಟಿದ್ದಾರೆ. ಬಳಿಕ ಅಳಿದುಳಿದ ಅವಶೇಷಗಳನ್ನು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಎಸೆದು ಪರಾರಿಯಾಗಿದ್ದರು.ಆದರೆ ಈ ಗಡಿಬಿಡಿಯಲ್ಲಿ ಆತನ ಚಪ್ಪಲಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆತಿದ್ದಾರೆ. ಕಳ್ಳರು ಒಂದಲ್ಲ, ಒಂದು ಸುಳಿವು ಕೊಟ್ಟೇ ಕೊಡುತ್ತಾರೆ ಎಂಬ ಮಾತಿನಂತೆ ಕೊಲೆಯಾದ ಯುವಕನ ಚಪ್ಪಲಿಯಿಂದ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ.
ಕೊನೆಗೂ ಬದುಕಲಿಲ್ಲ ಕಿಡ್ನಾಪ್‌ ಆದ ಮೈಸೂರಿನ ಬಾಲಕ: ಶೋಕಿಗಾಗಿ ಬಲಿ ಪಡೆದ ಕೊಲೆಗಾರ?
VIDEO: ‘ಪವರ್‌ ಸ್ಟಾರ್‌… ಯೇ… ಪವರ್‌ಸ್ಟಾರ್‌’ ಎಂದು ಕರೆದ ಪುಟಾಣಿ: ಪುನೀತ್‌ ರಿಯಾಕ್ಷನ್‌ಗೆ ಅಭಿಮಾನಿಗಳು ಫಿದಾ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
