ಮೈಸೂರು:ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಸದ್ಯಕ್ಕೆ ರಾಜಕೀಯಕ್ಕೆ ನೋ ಎಂಟ್ರಿ ಎಂದು ಮೈಸೂರು ರಾಜ ವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಇಲ್ಲಿಯವರೆಗೆ ಹೇಳುತ್ತಲೇ ಬಂದಿದ್ದಾರೆ.
ಕಳೆದ ವರ್ಷ ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿಯೂ ಯದುವೀರ್‌ ಇದೇ ಮಾತನ್ನು ಹೇಳಿದ್ದು. ಯದುವೀರ್‌, ರಾಜಕೀಯ ಪ್ರವೇಶ ಮಾಡುತ್ತಾರಾ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೋ… ಸದ್ಯ ಆ ಬಗ್ಗೆ ಏನನ್ನೂ ಚಿಂತನೆ ಮಾಡಿಲ್ಲ. ರಾಜಕೀಯಕ್ಕೆ ನೋ ಎಂಟ್ರಿ ಎಂದು ನಗುತ್ತಲೇ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹಬ್ಬಿರುವ ವಿಷಯಕ್ಕೆ ಅಂತ್ಯ ಹಾಡಿದ್ದರು.
ಆದರೆ ಇದೀಗ ಅವರು, ರಾಜಕೀಯದತ್ತ ಒಲವು ತೋರಿದಂತೆ ಕಾಣಿಸುತ್ತಿದೆ. ರಾಜಕೀಯ ಪ್ರವೇಶದ ಬಗ್ಗೆ ಚಿಂತನೆ ನಡೆಸಿರುವುದು ತಿಳಿದುಬಂದಿದೆ. ಇದಕ್ಕೆ ಸಾಕ್ಷಿಯಾಗಿದೆ ಅವರ ಒಂದೇ ವಾಕ್ಯದ ಟ್ವೀಟ್‌.
https://twitter.com/YaduveerWodiyar/status/1298651683304554496
ತಮ್ಮ ಟ್ವೀಟ್‌ನಲ್ಲಿ ಯದುವೀರ್‌ ಅವರು ‘Should I join Politics?’ (ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೆ?) ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಆಯ್ಕೆಯನ್ನು ಜನರಿಗೆ ಬಿಟ್ಟಿದ್ದಾರೆ. ತಾವು ರಾಜಕೀಯಕ್ಕೆ ಬರಬೇಕೋ, ಬೇಡವೋ ಎಂದು ಸಾರ್ವಜನಿಕರು ಏನು ಹೇಳುತ್ತಾರೆ, ಅವರ ಅಭಿಪ್ರಾಯ ಏನು ಎಂಬುದನ್ನು ಇವರು ಬಯಸಿದ್ದಾರೆ.
ಅದಕ್ಕೆ ಬೇಡ ರಾಜಕೀಯ ತುಂಬಾ ಹೊಲಸು, ಅದರಲ್ಲಿ ಪ್ರವೇಶ ಮಾಡಬೇಡಿ ಎಂದೇ ಕಮೆಂಟಿಗರು ಹೇಳಿದ್ದಾರೆ. ‘ರಾಜಕೀಯ ಪಕ್ಷಕ್ಕೆ ಸೇರಿಕೊಂಡರೆ, ಕೆಲವೊಮ್ಮೆ ಆ ಪಕ್ಷವು ತಪ್ಪು ಮಾಡಿದಾಗ ಅದರ ವಿರುದ್ಧ ಮಾತನಾಡಲು ಸ್ವತಂತ್ರ ಇರುವುದಿಲ್ಲ ಮತ್ತು ಆ ಪಕ್ಷದ ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ಆ ವ್ಯಕ್ತಿ ಮಾಡಿದ್ದು ತಪ್ಪು ಎಂಬ ಅರಿವಿದ್ದು ಅವರ ಪರ ವಹಿಸಿಕೊಂಡು ಮಾತನಾಡಬೇಕಾಗುತ್ತದೆ. ಮೇಲಾಗಿ ನಿಮ್ಮಂಥವರು ಒಬ್ಬ ಪಕ್ಷದ ಕಡೆಯವರು ಎಂದು ಎನಿಸಿಕೊಳ್ಳುದುವದಕ್ಕಿಂತ ನೀವು ನೀವಾಗಿ ಅದರಲ್ಲಿಯೂ ಮೈಸೂರು ಸಂಸ್ಥಾನದ ಗುರುತಾಗಿರುವುದು ಶ್ರೇಷ್ಠ ಎಂಬುದು ನನ್ನ ಅನಿಸಿಕೆ’ ಎಂದು ಬಸವರಾಜ್‌ ಎನ್ನುವವರು ಹೇಳಿದ್ದರೆ, ‘ಬೇಡ ಸರ್, ನಿಮ್ಮ ಪರಿವಾರವನ್ನು ದೇವರಂತೆ ಕಾಣುತ್ತಿದ್ದಾರೆ, ಅದನ್ನೇ ಕಾಪಾಡಿಕೊಳ್ಳಿ.. ರಾಜಕೀಯ ತುಂಬಾ ಹೊಲಸು ಎಂದು ಸಂತೋಷ್‌ ಎನ್ನುವವರು ಹೇಳಿದ್ದಾರೆ.
ಇದನ್ನೂ ಓದಿ:ಚೀನಿಯರಿಗೂ ಬೇಕು ಪ್ರಧಾನಿ ಮೋದಿ: ಚೀನಾದ ಪತ್ರಿಕೆಯ ಸಮೀಕ್ಷೆ ಏನು ಹೇಳಿದೆ ನೋಡಿ…
ಸನಾತದ ಧರ್ಮಾದಿ‌‌ಷ್ಠಿತ, ನೈತಿಕತೆಯ, ವಿಶಾಲ, ಸಾತ್ವಿಕ, ದೂರದೃಷ್ಟಿಯ ಅಡಳಿತ ನೀಡಿದ ಮೈಸೂರು ಸಂಸ್ಥಾನದ ಕುಡಿ ನೀವು. ಅಧರ್ಮಿ, ಭ್ರಷ್ಟ, ಸ್ವಾರ್ಥದಿಂದ ಕೂಡಿದ ಜಾತ್ಯಾತೀತ ವ್ಯವಸ್ಥೆಯಲ್ಲಿ ನಿಮ್ಮ ಪೂರ್ವಜರು ನೀಡಿದ ಆದರ್ಶ ಆಡಳಿತವನ್ನು ನೀಡಲು ಅಸಾಧ್ಯ ಎಂದಿರುವ ಮೋಹನ ಗೌಡ ಎನ್ನುವವರು ರಾಜಕೀಯಕ್ಕೆ ಬರಬೇಡಿ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಬಹುತೇಕ ಎಲ್ಲಾ ಕಮೆಂಟಿಗರೂ ರಾಜಕೀಯಕ್ಕೆ ಬರಬೇಡಿ ಎಂದು ಸಲಹೆ ಮಾಡಿದ್ದರೆ, ಒಬ್ಬರು ಇದು ಫೇಕ್‌ ಅಕೌಂಟ್‌, ರಿಪ್ಲೈ ಮಾಡಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಡ್ರಗ್ಸ್‌ ನಂಟಲ್ಲಿ ಸ್ಯಾಂಡಲ್‌ವುಡ್‌! ಕೆಲ ನಟರು, ಸಂಗೀತ ನಿರ್ದೇಶಕರ ಮೇಲೆ ಎನ್‌ಸಿಬಿ ನಿಗಾ

ಬಿಡಿಸಲಾಗದ ಕಿಮ್‌ ರಹಸ್ಯ: ಸತ್ತೇ ಹೋದ ಎಂದ ಸರ್ವಾಧಿಕಾರಿ ಮತ್ತೊಮ್ಮೆ ಪ್ರತ್ಯಕ್ಷ!

ಅಂತ್ಯಕ್ರಿಯೆ ವೇಳೆ ಪೆಟ್ಟಿಗೆಯಲ್ಲಿದ್ದ ಯುವತಿಯ ‘ಶವ’ ಅಲುಗಾಡಿ ಮೇಲೆದ್ದು ಬಂತು!

ಬೃಹತ್‌ ದಾಳಿಗೆ ಸ್ಕೆಚ್‌ ಹಾಕುತ್ತಿದ್ದನೇ ಈತ? ಬ್ಯಾಗ್‌ನಲ್ಲಿದ್ದ ಕೋಡ್‌ವರ್ಡ್ಸ್‌ ಏನು ಹೇಳುತ್ತಿವೆ?

ಚೀನಿಯರಿಗೂ ಬೇಕು ಪ್ರಧಾನಿ ಮೋದಿ: ಚೀನಾದ ಪತ್ರಿಕೆಯ ಸಮೀಕ್ಷೆ ಏನು ಹೇಳಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + two =
Remember me
