ಪ್ರಿಟೋರಿಯಾ (ದಕ್ಷಿಣ ಆಫ್ರಿಕಾ):ಹಿಂದೂಗಳಲ್ಲಿ ಒಬ್ಬನೇ ಪುರುಷನಿಗೆ ಒಬ್ಬಳೇ ಮಹಿಳೆ. ಬಹುಪತ್ನಿತ್ವವಾಗಲೀ, ಬಹುಪತಿತ್ವವಾಗಲೀ ಕಾನೂನುಬಾಹಿರ. ಆದರೆ ಕೆಲವು ಧರ್ಮಗಳಲ್ಲಿ, ಕೆಲವು ದೇಶಗಳಲ್ಲಿ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮದುವೆಯಾಗಲು ಅವಕಾಶವಿದೆ. ಆದರೆ ಒಬ್ಬ ಮಹಿಳೆ ಒಂದಕ್ಕಿಂತ ಹೆಚ್ಚು ಗಂಡನನ್ನು ಪಡೆಯಲು ಅನುಮತಿ ನೀಡಿರುವ ಕಾನೂನು ಇಲ್ಲವೆನ್ನಬಹುದು.
ಆದರೆ ಸ್ತ್ರೀಸಮಾನತೆಯ ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಪುರುಷರಿಗಷ್ಟೇ ಈ ಕಾನೂನು ಏಕೆ, ಮಹಿಳೆಯರಿಗೂ ಇರಲಿ ಬಿಡಿ ಎಂದು ದಕ್ಷಿಣಾ ಆಫ್ರಿಕಾ ಹೇಳಿದೆ. ಇಲ್ಲಿ ಬಹುದೊಡ್ಡ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದ್ದು, ಎಲ್ಲರ ಹುಬ್ಬೇರಿಸಿದೆ.
ಅದೇನೆಂದರೆ ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾದಲ್ಲಿ ಒಬ್ಬ ವ್ಯಕ್ತಿ ಬಹುಪತ್ನಿಯರನ್ನು ಹೊಂದಲು ಅನುಮತಿ ಇದೆ. ಇದಕ್ಕೆ ಅನೇಕ ವಿರೋಧಗಳು ಎದುರಾಗಿದ್ದರೂ ಬಹುಪತ್ನಿತ್ವ ಕಾನೂನುಬದ್ಧ ಮಾಡಲಾಗಿದೆ. ಆದರೆ ಒಬ್ಬರಿಗೆ ಮಾತ್ರ ಒಂದು ನ್ಯಾಯವೇಕೆ ಎಂದುಕೊಂಡಿರುವ ಸರ್ಕಾರ ಇದೀಗ ಬಹುಪತಿತ್ವ ಅಂದರೆ ಒಂದು ಹೆಣ್ಣು ಎಷ್ಟು ಬೇಕಾದರೂ ಮದುವೆಯಾಗಬಹುದು ಎಂಬ ಕಾನೂನು ತರಲು ಚಿಂತನೆ ನಡೆಸಿದ್ದು, ಈ ಕುರಿತು ಸಕಲ ಸಿದ್ಧತೆ ನಡೆಸಿದೆ,
ಎಷ್ಟು ಹೆಣ್ಣನ್ನಾದರೂ ಮದುವೆಯಾಗಬಹುದು ಎಂಬ ಕಾನೂನು ಜಾರಿಗೆ ಬಂದಾಗ ಕುಣಿದು ಕುಪ್ಪಳಿಸಿದ್ದ ಬಹುತೇಕ ಪುರುಷ ವರ್ಗವೀಗ ತಲೆತಲೆ ಚಚ್ಚಿಕೊಳ್ಳುವಂತಾಗಿದೆ. ತಮ್ಮ ಪತ್ನಿ ಅನೇಕ ಪುರುಷರನ್ನು ಮದುವೆಯಾದರೆ ಗತಿಯೇನು ಎಂದು ಊಹಿಸಿಕೊಳ್ಳಲೂ ಗಂಡಂದಿರಿಗೆ ಆಗದ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕಾಗಿ ಭಾರಿ ಪ್ರತಿಭಟನೆ ಶುರುವಾಗಿದೆ.
ಇದರ ನಡುವೆಯೇ ವಿವಾಹಕ್ಕೆ ಸಂಬಂಧಪಟ್ಟಂತೆ ಹೊಸ ಕಾಯ್ದೆಯನ್ನು ರಚಿಸಲು ಮುಂದಾಗಿರುವ ದಕ್ಷಿಣ ಆಫ್ರಿಕಾ ಗೃಹ ವ್ಯವಹಾರಗಳ ಸಚಿವಾಲಯ ಈ ಬಹುಪತಿತ್ವದ ಪ್ರಸ್ತಾಪವನ್ನು ಇಟ್ಟಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.
ಬಾಣಂತನದ ವೇಳೆಯ ಬಟ್ಟೆ ಹರಾಜಿಗಿಟ್ಟ ಅನುಷ್ಕಾ ಶರ್ಮಾ: ಎರಡೂವರೆ ಲಕ್ಷ ಲೀ. ನೀರು ಉಳಿತಾಯ!

ಓಟಿಪಿಯೂ ಬರದೇ ಶಿಕ್ಷಕಿ ಖಾತೆಯಿಂದ 3.22 ಲಕ್ಷ ರೂ. ಮಾಯ! ಸಿಕ್ಕಿಬಿದ್ದ ಕಳ್ಳನ ಕಂಡು ಕಣ್‌ಕಣ್‌ ಬಿಟ್ಟ ಪೊಲೀಸರು!

ಗುಂಡಿಗೆ ಬೀಳುವ ಮುನ್ನ..: ವಿಡಿಯೋ ಕಾಲ್ ಮಾಡಿ ಯಾಮಾರಿಸ್ತಾರೆ, ಹುಷಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + two =
Remember me
