ಗೋವಾ:ಈಗ ಇಡೀ ವಿಶ್ವವೇ ಕರೊನಾ ಎರಡನೆಯ ಅಲೆಯ ಭಯದಲ್ಲಿದೆ. ಕ್ಷಣಕ್ಷಣಕ್ಕೂ ಕರೊನಾ ಜನರನ್ನು ಬಲಿ ಪಡೆಯುವುದು ಹೆಚ್ಚುತ್ತಲೇ ಸಾಗಿದೆ. ಇದೇ ಕಾರಣಕ್ಕೆ ಹಿಂದೆಂದಿಗಿಂತಲೂ ಕಠಿಣ ನಿಯಮಾವಳಿಗಳನ್ನು ಈ ಬಾರಿ ಹಲವಾರು ಸರ್ಕಾರಗಳು ಮಾಡಿವೆ.
ಇಂಥ ಸಂದರ್ಭದಲ್ಲಿ ಹನಿಮೂನ್​ಗೆ ತನ್ನ ಹೊಸ ಗೆಳೆಯನ ಜತೆ ಗೋವಾಕ್ಕೆ ಹೋಗಿರುವ ನಟಿ ಪೂಜಾ ಬೇಡಿ, ವಿಡಿಯೋ ಮಾಡಿ ಎಲ್ಲರಿಗೂ ಎನ್​ಜಾಯ್​ ಮಾಡಿ ಎಂದು ಹೇಳಿದ್ದಾರೆ. ಇದೀಗ ಕಮೆಂಟಿಗರನ್ನು ತೀವ್ರ ಆಕ್ರೋಶಕ್ಕೆ ಗುರಿ ಮಾಡಿದೆ.
50 ವರ್ಷದ ನಟಿ ಪೂಜಾ ಬೇಡಿ, ಮಾನೆಕ್ ಕಂಟ್ರಾಕ್ಟರ್ ಅವರೊಂದಿಗೆ ಎಂಗೇಜ್ ಆಗಿದ್ದಾರೆ. ಅವರ ಜತೆಗೆ ಗೋವಾಕ್ಕೆಂದು ಹಾಲಿಡೇ ಟೂರ್​ಗೆ ಹೋಗಿದ್ದಾರೆ. ಇದಕ್ಕೂ ಮೊದಲು ತಾವು ಹನಿಮೂನ್​ಗೆ ಹೋಗುವ ಖುಷಿಯಲ್ಲಿ ಇರುವುದಾಗಿ ಅವರು ಹೇಳಿಕೊಂಡಿದ್ದರು. ಕರೊನಾವನ್ನು ಲೆಕ್ಕಿಸದೇ ಗೋವಾಕ್ಕೆ ಟೂರ್​ಗೆ ಹೋಗಿದ್ದರೂ ಅಲ್ಲದೇ ಅಲ್ಲಿ ಅರ್ಧಂಬರ್ಧ ಡ್ರೆಸ್​ ಹಾಕಿಕೊಂಡಿರುವ ಹಲವಾರು ಫೋಟೋಗಳನ್ನು ಶೇರ್​ ಮಾಡಿದ್ದಾರೆ.
Joys of living in healthy, happy#goa.Free your mind#NoFearLife is meant to be lived…❤ not spent caged and masked for a year/ years in fear of a virus that's clearly not going away!If you died tomorrow after year of masking/lockdown.. what would ur greatest regret be?pic.twitter.com/ydXG5OGsou
— Pooja Bedi (@poojabeditweets)April 14, 2021

ಇದೇ ವೇಳೆ ವಿಡಿಯೋ ಒಂದನ್ನು ಮಾಡಿರುವ ಪೂಜಾ, ಅಲ್ಲಿನ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೀವ್ಯಾರು ಭಯಪಡಬೇಡಿ, ಎನ್​ಜಾಯ್​ ಮಾಡಿ ಎಂದೂ ಹೇಳಿದ್ದಾರೆ. ಮಾಸ್ಕ್​ ಧರಿಸದೇ, ಕರೊನಾ ನಿಯಮ ಪಾಲನೆ ಮಾಡಿದೇ ಸಾರ್ವಜನಿಕ ‌ಸ್ಥಳದಲ್ಲಿ ಕಾಣಿಸಿಕೊಂಡಿದ್ದೂ ಅಲ್ಲದೇ, ಅದರ ವಿಡಿಯೋ, ಫೋಟೋ ಹರಿಬಿಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಅನೇಕ ಮಂದಿ ಚಿತ್ರನಟ-ನಟಿಯನ್ನು ಫಾಲೋ ಮಾಡುವುದು ಸಾಮಾನ್ಯ. ಇಂಥ ಸಂದರ್ಭದಲ್ಲಿ ಈ ರೀತಿ ಕೆಟ್ಟದಾಗಿ ಪ್ರದರ್ಶನ ಮಾಡುವುದು ಸರಿಯಲ್ಲ ಎಂದು ಅನೇಕ ಮಂದಿ ಕಮೆಂಟ್​ ಹಾಕಿದ್ದಾರೆ.
ಕಣ್ಣುಮಿಟುಕಿಸಿ ಮೆಸೇಜ್​ನಲ್ಲಿ ಮಾತನಾಡಿದ ಆಕೆಯೇ ಬಾಳಸಂಗಾತಿ ಅಂತ ಅದ್ಹೇಗಪ್ಪಾ ಅಂದ್ಕೊಂಡ್​ಬಿಟ್ಟಿಯಾ!

‘ಈ ಮೊಲವನ್ನು ನೀವೇನಾದ್ರೂ ನೋಡಿರುವಿರಾ? ಸುಳಿವು ನೀಡಿ… ಎರಡು ಲಕ್ಷ ಬಹುಮಾನ ಒಯ್ಯಿರಿ…’

ಎರಡು ಷರ್ಟ್​ ಕದ್ದಿದ್ದಕ್ಕೆ 20 ವರ್ಷ ಜೈಲುವಾಸ! ಬಿಡುಗಡೆಯಾಗುವಷ್ಟರಲ್ಲೇ ಮೃತ್ಯುಕೂಪವಾಗಿದ್ದ ಮನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 4 =
Remember me
