ಮುಂಬೈ:ಬಾಲಿವುಡ್‌ ಹಾಟ್‌ ನಟಿ ಎಂದೇ ಪ್ರಸಿದ್ಧಿ ಪಡೆದಿರುವ ಪೂನಂ ಪಾಂಡೆ ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಹಿಂದೆ ತಮ್ಮ ಪತಿ, ನಿರ್ಮಾಪಕ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆಯ ಕೇಸ್‌ ಹಾಕಿ ಅವರನ್ನು ಜೈಲಿಗೆ ಅಟ್ಟಿದ್ದ ಪೂನಂ ಮೇಲೆ ಪುನಃ ಹಲ್ಲೆಯಾಗಿರುವುದಾಗಿ ವರದಿಯಾಗಿದೆ.
ಜೈಲಿನಿಂದ ಹೊರಕ್ಕೆ ಬರುತ್ತಿದ್ದಂತೆಯೇ ತಮ್ಮ ಪತಿ ಸ್ಯಾಮ್‌ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೂನಂ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದು, ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಪೂನಂ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವರ್ಷ ಸೆಪ್ಟೆಂಬರ್​ನಲ್ಲಿ ತಮ್ಮ ಪತಿ ವಿರುದ್ಧ ಕಿರುಕುಳ, ಬೆದರಿಕೆ ಮತ್ತು ಹಲ್ಲೆ ಆರೋಪ ಮಾಡಿದ್ದರು ಪೂನಂ. ಆಗ ಅವರು ಗೋವಾದ ಕನಕೋನಾದಲ್ಲಿ ಇದ್ದರು. ದೂರನ್ನು ಆಧರಿಸಿ ಸ್ಯಾಂನನ್ನು ಪೊಲೀಸರು ಬಂಧಿಸಿದ್ದರು. ಬಂಧಿತನಾಗಿದ್ದ ಸ್ಯಾಮ್ ಹೈಕೋರ್ಟ್​ನಿಂದ ಜಾಮೀನು ಪಡೆದು ಹೊರಬಂದಿದ್ದರು.
ಸಾಮಾಜಿಕ ಜಾಲಾತಾಣದಲ್ಲಿ ಪ್ರಸಿದ್ಧಿ ಪಡೆದಿರುವ ಪೂನಮ್ ಪಾಂಡೆ ನಶಾ, ದಿ ಜರ್ನಿ ಆಫ್​ ಕರ್ಮ , ಮಾಲಿನಿ ಅಂಡ್ ಕಂಪನಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
VIDEO: ಅಪ್ಪುವಿನ ಆತ್ಮದ ಜತೆಗೆ ಮಾತನಾಡಿದ ಅಮೆರಿಕದ ತಜ್ಞ? ವಿಡಿಯೋ ಇಲ್ಲಿದೆ ನೋಡಿ…

ಕಮಲಾ ನೆಹರೂ ಆಸ್ಪತ್ರೆಯಲ್ಲಿ ಬೆಂಕಿ: ನಾಲ್ಕು ನವಜಾತ ಶಿಶುಗಳು ಸಜೀವ ದಹನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 6 =
Remember me
